»   » ಶೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್‌ ಗುಂಗಲ್ಲಿ ತಬು

ಶೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್‌ ಗುಂಗಲ್ಲಿ ತಬು

Posted By: Staff
Subscribe to Filmibeat Kannada

ಮುಂಬಯಿ: ರಾಷ್ಟ್ರಪ್ರಶಸ್ತಿ ವಿಜೇತ ನಟಿ ತಬು ಈಗ ವಿಭಿನ್ನ ಪಾತ್ರವೊಂದಕ್ಕೆ ಸಹಿ ಹಾಕಿದ್ದಾರೆ. 'ಮಿಯಾನ್‌ ಮಖ್‌ಬೂಲ್‌" ತಬು ನಟಿಸಲಿರುವ ಹೊಸ ಚಿತ್ರದ ಹೆಸರು.

ಮಿಯಾನ್‌ ಮಖ್‌ಬೂಲ್‌ ಚಿತ್ರ ಕಥೆ ಶೇಕ್ಸ್‌ಪಿಯರ್‌ ಬರೆದ ಪ್ರಸಿದ್ಧ 'ಮ್ಯಾಕ್‌ಬೆತ್‌" ನಾಟಕವನ್ನು ಆಧರಿಸಿದ್ದು. ಈ ಚಿತ್ರದಲ್ಲಿ ತಬು ಪಾತ್ರ - ಲೇಡಿ ಮ್ಯಾಕ್‌ಬೆತ್‌. ಚಿತ್ರ ನಿರ್ದೇಶನ ವಿಶಾಲ್‌ ಭಾರದ್ವಾಜ್‌. ಚಿತ್ರದಲ್ಲಿ ತಬು ಹೀರೋಯಿನ್‌ ಕಮ್‌ ವಿಲನ್‌.

'ನಾನು ಮ್ಯಾಕ್‌ಬೆತ್‌ ನಾಟಕವನ್ನು ಓದಿಲ್ಲ . ಈ ಚಿತ್ರವನ್ನು ಒಪ್ಪಿಕೊಂಡಿದ್ದೇನೆ. ಆದರೂ ನಾನೀಗ ಮ್ಯಾಕ್‌ಬೆತ್‌ ನಾಟಕವನ್ನು ಓದುವುದಿಲ್ಲ. ಮೂಲ ಕಥೆಯನ್ನು ಓದಿದರೆ ಸಿನಿಮಾ ಕಥೆಯನ್ನು ಸ್ವೀಕರಿಸಿ ನಟಿಸುವಾಗ ಪೂರ್ವಾಗ್ರಹ ಬಂದುಬಿಡುತ್ತದೆ" ಎಂಬುದು ತಬು ಅಭಿಪ್ರಾಯ. ಚಿತ್ರದಲ್ಲಿ ನಟಿಸುವ ಇತರರು ಪಂಕಜ್‌ ಕಪೂರ್‌, ಇರ್ಫಾನ್‌ ಖಾನ್‌, ಓಂಪುರಿ ಮತ್ತು ನಾಸಿರುದ್ದೀನ್‌ ಶಾ.

ಅಬರ್‌ಅರಣ್ಯ ಎಂಬ ಇನ್ನೊಂದು ಬೆಂಗಾಲಿ ಚಿತ್ರದಲ್ಲಿ ನಟಿಸಲು ತಬು ಒಪ್ಪಿಕೊಂಡಿದ್ದಾರೆ. ಬಂಗಾಳಿ ಭಾಷೆ ನನಗೆ ಬರುವುದಿಲ್ಲ. ಆದರೆ ನನ್ನ ಪಾತ್ರಕ್ಕೆ ಇತರರು ಧ್ವನಿ ನೀಡಿದರೆ ಚೆನ್ನಾಗಿರೊಲ್ಲ. ಅದಕ್ಕಾಗಿ ಸ್ವಲ್ಪ ದಿನಗಳಲ್ಲೇ ಬಂಗಾಳೀ ಭಾಷೆಯನ್ನು ಕಲಿಯಬೇಕು ಎಂದುಕೊಂಡಿದ್ದೇನೆ. ಸ್ವಲ್ಪ ಪ್ರಯತ್ನ ಮಾಡಬೇಕಷ್ಟೇ... ಎನ್ನುವ ತಬುಗೆ ಈಗ ಕೈ ತುಂಬಾ ಕೆಲಸ.

ಈ ಬೆಳವಣಿಗೆಗಳನ್ನು ನೋಡಿದರೆ ತಬು ಇನ್ನಷ್ಟು ಪ್ರಶಸ್ತಿಗಳತ್ತ ಸಾಗುತ್ತಿದ್ದಾರೆ ಅನ್ನಿಸುವುದಿಲ್ಲವೆ ? ಹಾಗಾಗಲಿ.

Read more about: kannada, karnataka, bangalore, mumbai
English summary
Shakespeare bug bites Tabu, her next role is lady macbeth
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada