For Quick Alerts
  ALLOW NOTIFICATIONS  
  For Daily Alerts

  ಚೈತ್ರದ ಪ್ರೇಮಾಂಜಲಿ ರಘುವೀರ್ ಮರಳಿ ಗೂಡಿಗೆ

  By Staff
  |

  'ಚೈತ್ರದ ಪ್ರೇಮಾಂಜಲಿ' ಖ್ಯಾತಿಯ ರಘುವೀರ್ ವಾಪಸ್ಸಾಗಿದ್ದಾರೆ.ಕಳೆದ ಎಂಟು ವರ್ಷಗಳಿಂದ ಅವರು ಕನ್ನಡ ಚಿತ್ರರಂಗದಿಂದ ಕಾಣೆಯಾಗಿದ್ದರು. ಈಗ 'ಯಾರಿಗೋಸ್ಕರ ಈ ಪ್ರೀತಿ' ಎಂಬ ಚಿತ್ರವನ್ನು ಕೈಗೆತ್ತಿಕೊಂಡು ಅವರೇ ನಾಯಕನಾಗಿ ನಟಿಸುತ್ತಿದ್ದಾರೆ.

  ಎಸ್.ರಾಜ ಎನ್ನುವವರು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಮೈಸೂರಿನ ರವಿಕುಮಾರ್ ನಿರ್ಮಾಪಕರು. ರಘುವೀರ್ ನಟಿಸಿದ ಮೊದಲ ಚಿತ್ರ ಚೈತ್ರದ ಪ್ರೇಮಾಂಜಲಿ. ಆ ಚಿತ್ರ ಸೆಟ್ಟೇರಿದ ದಿನದಂದೇ ಅಂದರೆ ಏಪ್ರಿಲ್ ನಾಲ್ಕರಂದು 'ಯಾರಿಗೋಸ್ಕರ ಈ ಪ್ರೀತಿ' ಚಿತ್ರವೂ ಸೆಟ್ಟೇರಲಿದೆ.

  ಚಿತ್ರದ ತಾರಾಗಣದಲ್ಲಿ ರಾಮಕೃಷ್ಣ, ವಿಜಯಕಾಶಿ, ಶ್ರೀಲಲಿತಾ ಮುಂತಾದವರು ಇದ್ದಾರೆ. ರಾಮ್ ಕುಮಾರ್ ಎಂಬ ಹೊಸಬರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ. ಪಿಕೆಎಚ್ ದಾಸ್ ಛಾಯಾಗ್ರಹಣ ಚಿತ್ರಕ್ಕಿದೆ.

  (ದಟ್ಸ್ ಕನ್ನಡ ಚಿತ್ರವಾರ್ತೆ)

  ಇದನ್ನೂ ಓದಿ
  ಗೆಜ್ಜೆ ಹಾಡಿಗೆ ಹೆಜ್ಜೆ ಹಾಕಿದ ಸುಧಾರಾಣಿ, ಅನು
  ಈ ಬಾರಿ ಲೋಕಸಭೆಗೆ ಸ್ಪರ್ಧಿಸುತ್ತಿಲ್ಲ: ಪ್ರೇಮ್
  ಇನ್ನು ವೆಬ್ ಸೈಟ್ ನಲ್ಲಿ ಪ್ರಶಸ್ತಿ ವಿಜೇತ ಚಿತ್ರಗಳು

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X