»   » ಡಾ.ವಿಷ್ಣುವರ್ಧನ್ ಫಿಲ್ಮ್ ಸಿಟಿ ನಿರ್ಮಾಣ

ಡಾ.ವಿಷ್ಣುವರ್ಧನ್ ಫಿಲ್ಮ್ ಸಿಟಿ ನಿರ್ಮಾಣ

Subscribe to Filmibeat Kannada

ಹೈದರಾಬಾದ್ ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿ ಮಾದರಿಯಲ್ಲಿ ಬೆಂಗಳೂರಿನ ಹೆಸರಘಟ್ಟದಲ್ಲಿ 'ಡಾ.ರಾಜ್ ಹಾಗೂ ವಿಷ್ಣುವರ್ಧನ್ ಫಿಲಂ ಸಿಟಿ' ನಿರ್ಮಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಒಂದೇ ಸೂರಿನಡಿ ಚಿತ್ರನಿರ್ಮಾಣಕ್ಕೆ ಸಂಬಂಧಿಸಿದ ಸಮಸ್ತ ಕೆಲಸಗಳನ್ನು ನಿರ್ವಹಿಸುವ ಸಾಧ್ಯತೆಗಳು ಸಾಕಾರಗೊಳ್ಳಲಿವೆ.

ಈ ಬಗ್ಗೆ ಮಾತನಾಡಿದ ಪ್ರವಾಸೋದ್ಯಮ ಸಚಿವ ಜಿ ಜನಾರ್ದನರೆಡ್ಡಿ, ಫಿಲ್ಮ್ ಸಿಟಿ ಕುರಿತು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಆದಷ್ಟು ಶೀಘ್ರದಲ್ಲಿ ನಿರ್ಮಾಣ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇಡೀ ದೇಶವೇ ಹೆಮ್ಮೆ ಪಡುವ ರೀತಿಯಲ್ಲಿ ಡಾ.ರಾಜ್ ಹಾಗೂ ಡಾ.ವಿಷ್ಣು ಫಿಲ್ಮ್ ಸಿಟಿ ನಿರ್ಮಿಸಲಾಗುತ್ತ್ತದೆ. ರಾಜ್ಯದ ಹೆಮ್ಮೆಯ ಪ್ರತೀಕವಾಗಿ ರೂಪುಗೊಳ್ಳಲಿದೆ. ಕನ್ನಡ ಚಿತ್ರರಂಗಕ್ಕೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದರು.

ಫಿಲ್ಮ್ ಸಿಟಿಯನ್ನು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತದೆ. ಇದಕ್ಕಾಗಿ ಅಗತ್ಯ ರೂಪುರೇಷೆ ಸಿದ್ಧಪಡಿಸಲಾಗುವುದು. ವಿಷ್ಣುವರ್ಧನ್ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ಅಪಾರ ಹಾನಿಯಾಗಿದೆ. ಫಿಲಂ ಸಿಟಿಯ ನಿರ್ಮಾಣಕ್ಕೆ ಇದೇ ಸಕಾಲ ಎಂದು ಸಚಿವರು ಹೇಳಿದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada