»   »  ಯೋಧನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್

ಯೋಧನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್

Subscribe to Filmibeat Kannada
Now Darshan as Yodha
ರಾಕ್ ಲೈನ್ ನಿರ್ಮಿಸುತ್ತಿರುವ 'ಪ್ರೊಡಕ್ಷನ್ ನಂ.22' ಚಿತ್ರಕ್ಕೆ 'ಯೋಧ 'ಎಂದು ಹೆಸರಿಡಲಾಗಿದೆ. ಯೋಧನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಚಿತ್ರದಲ್ಲಿ ಕಾಣಿಸಲಿದ್ದಾರೆ. ಹಾಡುಗಳನ್ನು ಹೊರತುಪಡಿಸಿದರೆ ಯೋಧನ ಚಿತ್ರೀಕರಣ ಬಹುಪಾಲು ಮುಗಿದಿದೆ. ಹಾಡುಗಳ ಚಿತ್ರೀಕರಣಕ್ಕಾಗಿ ಸದ್ಯದಲ್ಲೇ ಚಿತ್ರತಂಡ ವಿದೇಶಕ್ಕೆ ಹಾರಲಿದೆ.

ತಮಿಳಿನ 'ಬೋಸ್' ಚಿತ್ರದ ರೀಮೇಕ್ 'ಯೋಧ'. ಶ್ರೀಕಾಂತ್ ಮತ್ತು ಸ್ನೇಹಾ ತಮಿಳಿನಲ್ಲಿ ಅಭಿನಯಿಸಿದ್ದರು. ಯೋಧ ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ನಿಖಿತಾ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಓಂ ಪ್ರಕಾಶ್ ನಿರ್ದೇಶಿಸುತ್ತಿದ್ದಾರೆ. ಕನ್ನಡದ ಕಿರಣ್ ಬೇಡಿಗೆ ಕ್ಯಾಮೆರಾ ಹಿಡಿದಿದ್ದ ಕೆ ಎಂ ವಿಷ್ಣುವರ್ಧನ್ ಈ ಚಿತ್ರದ ಛಾಯಾಗ್ರಾಹಕ.

ಯೋಧನ ಜೊತೆಗೇ ರಾಕ್ ಲೈನ್ ಮತ್ತೆರಡು ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಒಂದು ವಿಜಯ್ ಅಭಿನಯದ ಸಾಧು ಕೋಕಿಲ ನಿರ್ದೇಶಿಸುತ್ತಿರುವ 'ದೇವ್ರು' ಹಾಗೂ ಮತ್ತೊಂದು ಯೋಗರಾಜ್ ಭಟ್ಟರ 'ಮನಸಾರೆ'. ದರ್ಶನ್ ಅಭಿನಯದ ಮತ್ತೊಂದು ಚಿತ್ರ 'ಬಾಸ್' ಸದ್ಯದಲ್ಲೇ ತೆರೆಗೆ ಅಪ್ಪಳಿಸಲಿದೆ. ಅದರ ನಂತರ ಯೋಧ ಬಿಡುಗಡೆಯಾಗಲಿದೆ. ಆನಂತರವಷ್ಟೇ ತೆಲುಗು ರೀಮೇಕ್ 'ಪೊರ್ಕಿ' ಸೆಟ್ಟೇರಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಓಂ ಪ್ರಕಾಶ್ ರಾವ್ ಎಂಬ ಮಾಸ್ಟರ್ ಮೈಂಡ್
ರಾಕ್ ಲೈನ್ ನಿರ್ಮಾಣದಲ್ಲಿ ಮೂರು ಚಿತ್ರಗಳು
ಸದ್ದಿಲ್ಲದಂತೆ ರಾಕ್ ಲೈನ್ ಪುತ್ರನ ನಿಶ್ಚಿತಾರ್ಥ!
ಯೋಗರಾಜ ಭಟ್ಟರ ಮನಸಾರೆ ಸೆಟ್ಟೇರಿದೆ
ಕೈದಿಗಳ ಹೃದಯ ಕದ್ದ ದುನಿಯಾ ವಿಜಯ್

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada