»   »  ಸಾಂಸ್ಕೃತಿಕ ನಗರಿಯಲ್ಲಿ ‘ಸ್ವರಾಂಜಲಿ’

ಸಾಂಸ್ಕೃತಿಕ ನಗರಿಯಲ್ಲಿ ‘ಸ್ವರಾಂಜಲಿ’

Subscribe to Filmibeat Kannada

ಶ್ರೀವಿದ್ಯಾ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಸ್ವರಾಂಜಲಿ' ಚಿತ್ರಕ್ಕೆ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಸಾಹಿತಿ ರಾಂನಾರಾಯನ್ ರಚಿಸಿರುವ 'ಎಲ್ಲೆಲ್ಲಿಂದಲೊ ಬಂದು ಕೂಡಿಕೊಳ್ಳುವ ನಮ್ಮ ಪಾಲಿಗೆ ಕಾಲೇಜು ಗುಡಿ ಅಲ್ಲವಾ ಕೈಯ ಮುಗಿದು ವಂದನೆ ಹೇಳುವಾ' ಎಂಬ ಗೀತೆಯು ಹುಣುಸೂರು ರಸ್ತೆಯಲ್ಲಿರುವ ಡಿಸಾಲ್ ಇಂಟರ್ ನ್ಯಾಷನಲ್ ಕಾಲೇಜಿನಲ್ಲಿ ಚಿತ್ರೀಕರಣವಾಯಿತು.

ರಮಣ, ರಶ್ಮಿ, ಸ್ಪೂರ್ತಿ ಹಾಗೂ 30ಜನ ನರ್ತಕರು ಈ ಗೀತೆಯ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಹಿಂದೆ 'ತಂಗಿಯ ಮನೆ'ಚಿತ್ರವನ್ನು ನಿರ್ದೇಶಿಸಿದ ಎಂ.ಎಸ್.ಶ್ರೀನಿವಾಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಇವರು ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಬಿ.ಎಲ್.ಬಾಬು ಕ್ಯಾಮೆರಾ, ಚಂದ್ರಕಾಂತ್ ಸಂಗೀತ, ಕೌರವ ವೆಂಕಟೇಶ್ ಸಾಹಸ, ಸಂಜೀವ್‌ರೆಡ್ಡಿ ಸಂಕಲನ, ಸತೀಶ್ ನೃತ್ಯ ಹಾಗೂ ಚೆನ್ನಯ್ಯ ಅವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ರಮಣ, ರಶ್ಮಿ, ಸ್ಪೂರ್ತಿ, ಶರತ್ ಲೋಹಿತಾಶ್ವ, ಪ್ನ್ನಂಬಲು, ಎಂ.ಎಸ್.ಶ್ರೀನಿವಾಸ್, ಸೂರ್ಯಕಿರಣ್, ರಮೇಶ್‌ಭಟ್, ಶೋಭ್‌ರಾಜ್, ಸುಂದರರಾಜ್, ಧರ್ಮ, ಶ್ರೀಧರ್, ಸಿದ್ದರಾಜು ಕಲ್ಮಣ್‌ಕರ್, ಆನಂದರಾಜು ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada