»   » ಕನ್ನಡದ ‘ಮನ್ಮಥ’ನಿಗೆ ಸಮೀಕ್ಷಾ ಎಂಬ ರತಿ!

ಕನ್ನಡದ ‘ಮನ್ಮಥ’ನಿಗೆ ಸಮೀಕ್ಷಾ ಎಂಬ ರತಿ!

Posted By: Super
Subscribe to Filmibeat Kannada

ಸಿಲಂಬರಸನ್‌ ಮತ್ತು ಜ್ಯೋತಿಕಾ ಅಭಿನಯದ ತಮಿಳಿನ 'ಮನ್ಮಥನ್‌"ನ ಕನ್ನಡ ಅವತರಣಿಕೆಯಲ್ಲಿ ಈಕೆಗೆ ನಟಿಸಲು ಆಹ್ವಾನ ಬಂದಿದೆ. ಜ್ಯೋತಿಕಾ ಪಾತ್ರದಲ್ಲಿ ಈಕೆ ಕಾಣಿಸಿಕೊಳ್ಳಲಿದ್ದಾಳೆ. ಕನ್ನಡ ಚಿತ್ರರಂಗದ ಪ್ರತಿಷ್ಠಿತ ಸಂಸ್ಥೆಯಾಂದು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೇ ಸಮೀಕ್ಷಾ ತೆಲುಗು ಮತ್ತು ಮಲಯಾಳಂನಲ್ಲೂ ಅವಕಾಶಗಳ ಬೇಟೆಯಲ್ಲಿ ತೊಡಗಿದ್ದಾಳೆ. ತಮಿಳು ಮೂಲದ ಈ ನೀಳ ಕಾಲ್ಗಳ ಬೆಡಗಿ ನಿರ್ದೇಶಕ ವಿಷ್ಣುವರ್ಧನ್‌ರ 'ಅರಿಂದುಂ ಅರಿಯಾಮಲುಂ" ಎಂಬ ಚಿತ್ರದ ಮೂಲಕ ಮನೆಮಾತಾದವಳು.

ಈ ಗ್ಲ್ಯಾಮರ್‌ ಗೊಂಬೆ ಶ್ರೀಕಾಂತ್‌ ಅವರ 'ಮರ್ಕ್ಯೂರಿ ಪೂಕಳ್‌' ಎಂಬ ಚಿತ್ರದಲ್ಲೂಅಭಿನಯಿಸಿದ್ದಳು. ಹೊರರಾಜ್ಯಗಳಿಂದ ಬರುವ ನಟಿಯರಿಗೆ ಮಣೆ ಹಾಕುವ ಪರಿಪಾಠ ಈಕೆಗೆ ಬೇಸರ ತಂದಿದೆ. ತಮಿಳುನಾಡಿನಲ್ಲಿ ಸ್ಪರ್ಧೆ ಎದುರಿಸಲಾರದೇ, ನೆರೆಯ ರಾಜ್ಯಗಳಲ್ಲಿ ಅದೃಷ್ಟ ಪರೀಕ್ಷೆ ನಡೆಸಲು ಸಮೀಕ್ಷಾ ನಿರ್ಧರಿಸಿದ್ದಾಳೆ.

ಏನಾದರೂ ಸರಿಯೇ 'ಬಲಗಾಲಿಟ್ಟು ಒಳಗೆ ಬಾರಮ್ಮ..."

Read more about: kannada karnataka
English summary
Tamil Actress Samiksha is all set to try her luck in Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada