For Quick Alerts
  ALLOW NOTIFICATIONS  
  For Daily Alerts

  ಗಣೇಶ್ 'ಮುಗುಳುನಗೆ'ಗೆ ಟಿಕೆಟ್ ಪಡೆದ 4 ನಟಿಯರು ಇವರೆ!

  By Bharath Kumar
  |

  ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸ್ಟಾರ್ ನಿರ್ದೇಶಕ ಯೋಗರಾಜ್ ಭಟ್ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಚಿತ್ರಕ್ಕೆ 'ಮುಗುಳುನಗೆ' ಎಂದು ಶೀರ್ಷಿಕೆ ಇಡಲಾಗಿದೆ. ಭಟ್ಟರ ಈ 'ಮುಗುಳುನಗೆ'ಯಲ್ಲಿ ನಾಲ್ಕು ಜನ ನಾಯಕಿಯರಿದ್ದು, ಹಳಬರ ಜತೆ ಹೊಸಬರು ಇರಲಿದ್ದಾರೆ ಎಂಬ ವಿಷ್ಯವನ್ನ ಚಿತ್ರತಂಡ ಹೇಳಿಕೊಂಡಿತ್ತು.[ಗಣೇಶ್-ಭಟ್ಟರ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್ !]

  ಇದೀಗ, ಈ ಚಿತ್ರದಲ್ಲಿ ಗಣೇಶ್ ಜತೆ ಡುಯೆಟ್ ಹಾಡಲಿರುವ ನಾಲ್ಕು ಜನ ನಾಯಕಿಯರನ್ನ ಆಯ್ಕೆ ಮಾಡಲಾಗಿದೆ. ಯೋಗರಾಜ್ ಭಟ್ಟರು ಮೊದಲೇ ಹೇಳಿದ್ಹಾಗೆ, ಹಳಬರ ಜೊತೆ ಹೊಸಬರನ್ನ ಗಣೇಶ್ 'ಮುಗುಳುನಗೆ'ಯಲ್ಲಿ ಸೇರಿಸಿಕೊಂಡಿದ್ದಾರೆ.

  'ಮುಗುಳುನಗೆ'ಯಲ್ಲಿ 4 ಹೀರೋಯಿನ್ಸ್

  'ಮುಗುಳುನಗೆ'ಯಲ್ಲಿ 4 ಹೀರೋಯಿನ್ಸ್

  ಗಣೇಶ್ ಅಭಿನಯಸಲಿರುವ 'ಮುಗುಳುನಗೆ' ಚಿತ್ರದಲ್ಲಿ 4 ನಾಯಕಿಯರಿದ್ದು, ನಾಲ್ಕು ನಟಿಯರನ್ನ ಚಿತ್ರತಂಡ ಆಯ್ಕೆ ಮಾಡಿದೆ.[ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರಕ್ಕೆ ನಾಯಕಿಯರು ಬೇಕಾಗಿದ್ದಾರೆ?]

  'ಮುಗುಳುನಗೆ'ಯಲ್ಲಿ ಅಮೂಲ್ಯ

  'ಮುಗುಳುನಗೆ'ಯಲ್ಲಿ ಅಮೂಲ್ಯ

  ಗಣೇಶ್ 'ಮುಗುಳುನಗೆ' ಚಿತ್ರಕ್ಕೆ ಗೋಲ್ಡನ್ ಕ್ವೀನ್ ಅಮೂಲ್ಯ ಪ್ರಮುಖ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.[ಗೋಲ್ಡನ್ ಸ್ಟಾರ್ ಗಣೇಶ್, ಭಟ್ ಹ್ಯಾಟ್ರಿಕ್ ಕಾಂಬಿನೇಷನ್ ಚಿತ್ರ]

  ಮತ್ತೆ ಒಂದಾದ ಗಣಿ-ಅಮೂಲ್ಯ

  ಮತ್ತೆ ಒಂದಾದ ಗಣಿ-ಅಮೂಲ್ಯ

  ಈಗಾಗಲೇ ಸ್ಯಾಂಡಲ್ ವುಡ್ ನ ಹಿಟ್ ಜೋಡಿ ಎನಿಸಿಕೊಂಡಿರುವ ಅಮೂಲ್ಯ ಹಾಗೂ ಗಣೇಶ್ ತೆರೆಮೇಲೆ ನಾಲ್ಕನೇ ಬಾರಿ ಒಂದಾಗುತ್ತಿದ್ದಾರೆ. ಈ ಹಿಂದೆ 'ಚೆಲುವಿನ ಚಿತ್ತಾರ', 'ಶ್ರಾವಣಿ ಸುಬ್ರಮಣಿ', 'ಖುಷಿ ಖುಷಿಯಾಗಿ' ಚಿತ್ರಗಳಲ್ಲಿ ಇವರಿಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.

  ನಿಖಿತಾ ನಾರಯಣ್ ಗೆ ಒಲಿದ ಅದೃಷ್ಟ

  ನಿಖಿತಾ ನಾರಯಣ್ ಗೆ ಒಲಿದ ಅದೃಷ್ಟ

  ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರಕ್ಕೆ ನಿಖಿತಾ ನಾರಯಣ್ ಮತ್ತೊಬ್ಬ ನಾಯಕಿಯಾಗಿದ್ದಾರೆ. ಈ ಹಿಂದೆ 'ಮಡಮಕ್ಕಿ' ಚಿತ್ರದಲ್ಲಿ ಹೀರೋಯಿನ್ ಆಗಿದ್ದ ನಿಖಿತಾ, ಸದ್ಯ 'ಗೋಲ್ ಮಾಲ್' ಬ್ರದರ್ಸ್ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಈ ಮಧ್ಯೆ ಗಣೇಶ್ ಚಿತ್ರದಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

  ಕ್ರೇಜಿ ನಟಿ ಆಶಿತಾ

  ಕ್ರೇಜಿ ನಟಿ ಆಶಿತಾ

  ಇನ್ನೂ 'ಮುಗುಳುನಗೆ' ಚಿತ್ರಕ್ಕೆ ಆಯ್ಕೆಯಾಗಿರುವ ಮತ್ತೊಬ್ಬ ನಾಯಕಿ ಆಶಿತಾ. ಇತ್ತೀಚೆಗಷ್ಟೇ ತೆರೆಕಂಡ 'ಕ್ರೇಜಿಬಾಯ್' ಚಿತ್ರದಲ್ಲಿ ಆಶಿತಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

  ವಿಶೇಷ ಪಾತ್ರದಲ್ಲಿ 'ಜಾಕಿ ಭಾವನ'

  ವಿಶೇಷ ಪಾತ್ರದಲ್ಲಿ 'ಜಾಕಿ ಭಾವನ'

  ಇನ್ನೂ ಮೂರು ಜನ ನಾಯಕಿಯರು ಚಿತ್ರದಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ರೆ, ವಿಶೇಷ ಪಾತ್ರದಲ್ಲಿ ಜಾಕಿ ಭಾವನ ಬಣ್ಣ ಹಚ್ಚಲಿದ್ದಾರಂತೆ. ಈ ಮೂಲಕ, ಯೋಗರಾಜ್ ಭಟ್ ಹಾಗೂ ಗಣೇಶ್ ಜುಗಲ್ ಬಂದಿಯ 'ಮುಗುಳುನಗೆ' ಚಿತ್ರಕ್ಕೆ ನಟಿಯರ ಆಯ್ಕೆ ಅಂತಿಮವಾಗಿದೆ.

  ಯಾವಾಗ ಶುರು?

  ಯಾವಾಗ ಶುರು?

  ಅಂದ್ಹಾಗೆ, 'ಮುಗುಳುನಗೆ' ಚಿತ್ರವನ್ನ ಯೋಗರಾಜ್ ಮೂವೀಸ್‌ ಮತ್ತು ಗೋಲ್ಡನ್‌ ಮೂವೀಸ್‌ ಬ್ಯಾನರ್‌ನಡಿ, ಯೋಗರಾಜ್ ಭಟ್ ಹಾಗೂ ಗಣೇಶ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತ ಸಂಯೋಜಿಸಲಿದ್ದು, ಜಯಂತ್ ಕಾಯ್ಕಿಣಿ ಹಾಗೂ ಭಟ್ ಅವರು ಸಾಹಿತ್ಯ ಬರೆಯಲಿದ್ದಾರೆ. ಇನ್ನೂ ಇದೇ ತಿಂಗಳಲ್ಲಿ 'ಮುಗುಳುನಗೆ' ಸಿನಿಮಾ ಸೆಟ್ಟೇರಲಿದೆ.

  English summary
  Yogaraj Bhatt's new film starring Ganesh titled as 'Mugulunage'. The new film has four heroines and Amulya, 'Jackie' Bhavana, Nikitha Narayan and Ashitha have been roped into play the female leads of the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X