For Quick Alerts
  ALLOW NOTIFICATIONS  
  For Daily Alerts

  ಈ ವಾರ 4 ಚಿತ್ರಗಳು ರಿಲೀಸ್ : ಒಂದಕ್ಕಿಂತ ಒಂದು ವಿಭಿನ್ನ

  |

  ಪ್ರತಿ ಶುಕ್ರವಾರ ಕನ್ನಡದಲ್ಲಿ ಹೊಸ ಹೊಸ ಸಿನಿಮಾಗಳು ಬಿಡುಗಡೆಯಾಗಲು ಸಾಲಾಗಿ ನಿಂತಿರುತ್ತದೆ. ಅದೇ ರೀತಿ ಈ ವಾರ ಕೂಡ ನಾಲ್ಕು ಚಿತ್ರಗಳು ರಿಲೀಸ್ ಆಗಲು ರೆಡಿಯಾಗಿವೆ. ಈ ವಾರ ತೆರೆಗೆ ಬರುತ್ತಿರುವ ಚಿತ್ರಗಳ ಪೈಕಿ ಒಂದಕ್ಕಿಂತ ಒಂದು ವಿಭಿನ್ನವಾಗಿದೆ.

  ಅಜಯ್ ರಾವ್ ಅಭಿನಯದ 25ನೇ ಸಿನಿಮಾ 'ತಾಯಿಗೆ ತಕ್ಕ ಮಗ', ಜಗ್ಗೇಶ್ ಅವರ '8 ಎಂ ಎಂ', ಸುಮನ್ ನಗರ್ಕರ್ ನಟನೆಯ 'ಜೀರ್ಜಿಂಬೆ' ಹಾಗೂ ದಯಾಳ್ ನಿರ್ದೇಶನದ 'ಪುಟ 109' ಸಿನಿಮಾಗಳು ಈ ವಾರ ಬಿಡುಗಡೆಯಾಗುತ್ತಿದೆ. ಈ ಎಲ್ಲ ಸಿನಿಮಾಗಳ ಜಾನರ್ ಬೇರೆ ಬೇರೆ ರೀತಿ ಇದ್ದು, ಎಲ್ಲ ಚಿತ್ರಗಳು ಒಂದು ಮಟ್ಟದ ಕುತೂಹಲ ಹುಟ್ಟಿಸಿವೆ.

  ಅಂದಹಾಗೆ, ಈ ಶುಕ್ರವಾರ ಬಿಡುಗಡೆಗೆ ಸಿದ್ಧವಾಗಿರುವ ಈ ನಾಲ್ಕು ಸಿನಿಮಾಗಳ ವಿವರ ಮುಂದಿದೆ ಓದಿ...

  ತಾಯಿಗೆ ತಕ್ಕ ಮಗ

  ತಾಯಿಗೆ ತಕ್ಕ ಮಗ

  ಕೃಷ್ಣ ಅಜಯ್ ರಾವ್ ನಟನೆಯ 25ನೇ ಸಿನಿಮಾವಾಗಿರುವ 'ತಾಯಿಗೆ ತಕ್ಕ ಮಗ' ಚಿತ್ರ ಈ ವಾರ ರಿಲೀಸ್ ಆಗುತ್ತಿದೆ. ನಿರ್ದೇಶಕ ಶಶಾಂಕ್ ಮತ್ತು ಅಜಯ್ ರಾವ್ ಜೋಡಿಯ ಹ್ಯಾಟ್ರಿಕ್ ಸಿನಿಮಾ ಇದಾಗಿದೆ. ಅಶಿಕಾ ರಂಗನಾಥ್ ಚಿತ್ರದ ನಾಯಕಿ ಆಗಿದ್ದಾರೆ. ಸುಮಲತಾ ಅಂಬರೀಶ್ ಮತ್ತೆ ಅಜಯ್ ರಾವ್ ಅವರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಹಾಡುಗಳು ಈಗಾಗಲೇ ಹಿಟ್ ಆಗಿವೆ.

  ಜೀರ್ಜಿಂಬೆ

  ಜೀರ್ಜಿಂಬೆ

  ಈಗಾಗಲೇ ಟ್ರೇಲರ್ ಮೂಲಕ 'ಜೀರ್ಜಿಂಬೆ' ಸಿನಿಮಾ ಅನೇಕರ ಗಮನ ಸೆಳೆದಿದೆ. ಸಿನಿಮಾದಲ್ಲಿ ಒಂದು ಒಳ್ಳೆಯ ವಿಷಯ ಇದ್ದೂ ಅನೇಕ ಚಿತ್ರೋತ್ಸವದಲ್ಲಿ ಚಿತ್ರ ಭಾಗಿಯಾಗಿದೆ. ಸಿರಿ ವನಲ್ಲಿ ಹಾಗೂ ಸುಮನ್ ನಗರ್ಕರ್ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮಕ್ಕಳ ದಿನಾಚರಣೆ ವಿಶೇಷವಾಗಿ ಚಿತ್ರ ರಿಲೀಸ್ ಆಗುತ್ತಿದೆ. ಕಾತೀಕ್ ಸರಗೂರ್ ನಿರ್ದೇಶನ ಮಾಡಿದ್ದಾರೆ.

  8 ಎಂ ಎಂ

  8 ಎಂ ಎಂ

  '8 ಎಂ ಎಂ' ಸಿನಿಮಾ ಕೂಡ ಪ್ರತಿ ಹಂತದಲ್ಲಿ ಸದ್ದು ಮಾಡಿದೆ. ಜಗ್ಗೇಶ್ ಈ ಸಿನಿಮಾದಲ್ಲಿ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ, ಮಯೂರಿ ಹಾಗೂ ವಸಿಷ್ಟ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೂಡಾ ಸ್ಯಾಂಡಿ ಮ್ಯೂಸಿಕ್ ನೀಡಿದ್ದು, ಜಗ್ಗೇಶ್ ಒಂದು ಹಾಡನ್ನು ಬರೆದಿದ್ದಾರೆ. ಹರಿಕೃಷ್ಣ ನಿರ್ದೇಶನ ಮಾಡಿದ್ದಾರೆ.

  ಪುಟ 109

  ಪುಟ 109

  'ಆ ಕರಾಳ ರಾತ್ರಿ' ಚಿತ್ರದ ನಂತರ ಮತ್ತೆ ಅದೇ ತಂಡ 'ಪುಟ 109' ಸಿನಿಮಾ ಮೂಲಕ ಬಂದಿದೆ. ನವೀನ್ ಕೃಷ್ಣ ಹಾಗೂ ಜೆಕೆ ಚಿತ್ರದಲ್ಲಿ ನಟಿಸಿದ್ದಾರೆ. ವೈಷ್ಣವಿ ಚಂದ್ರನ್ ಚಿತ್ರದ ಪ್ರಮುಖ ಪಾತ್ರ ಮಾಡಿದ್ದಾರೆ. ದಯಾಳ್ ಪದ್ಮನಾಭನ್ ಚಿತ್ರದ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ಇದೊಂದು ಸಸ್ಪೆಸ್ಸ್ ಸಿನಿಮಾವಾಗಿದೆ.

  English summary
  Jeerjimbe, Puta 109, Thayige Thakka Maga, 8 MM kannada movies releasing on this friday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X