»   » ಈ ವಾರ ರಿಲೀಸ್ ಆಗುತ್ತಿರುವ ಕನ್ನಡ ಚಿತ್ರಗಳು

ಈ ವಾರ ರಿಲೀಸ್ ಆಗುತ್ತಿರುವ ಕನ್ನಡ ಚಿತ್ರಗಳು

Posted By:
Subscribe to Filmibeat Kannada

ಪ್ರತಿವಾರದಂತೆ ಈ ವಾರವೂ ಕನ್ನಡದಲ್ಲಿ ಕಮರ್ಷಿಯಲ್ ಸಿನಿಮಾಗಳ ಜೊತೆ ಸಧುಬಿರುಚಿಯ ಚಿತ್ರಗಳು ಸೇರಿದಂತೆ ಒಟ್ಟು 4 ಚಿತ್ರಗಳು ತೆರೆ ಕಾಣುತ್ತಿದೆ.

ಪೂಜಾ ಗಾಂಧಿ ಅಭಿನಯದ 'ದಂಡುಪಾಳ್ಯ-2' ಈ ವಾರ ಬಿಡುಗಡೆಯಾಗುತ್ತಿರುವ ನಿರೀಕ್ಷೆಯ ಸಿನಿಮಾ. ಈಗಾಗಲೇ ದಂಡುಪಾಳ್ಯ ಮೊದಲ ಭಾಗದ ಮೂಲಕ ಇಡೀ ಸ್ಯಾಂಡಲ್ ವುಡ್ ನ್ನೇ ಬೆಚ್ಚಿಬೀಳಿಸಿದ್ದ ನರಹಂತರ ಕಥೆ ಮತ್ತೆ ಬರುತ್ತಿದೆ.

ಹಾಗಿದ್ರೆ, 'ದಂಡುಪಾಳ್ಯ-2' ಚಿತ್ರದ ಜೊತೆ ತೆರೆಕಾಣುತ್ತಿರುವ ಉಳಿದ ಮೂರು ಚಿತ್ರಗಳು ಯಾವುದು? ಆ ಚಿತ್ರಗಳ ಸ್ಪೆಷಾಲಿಟಿಗಳೇನು ಎಂಬುದನ್ನ ತಿಳಿದುಕೊಳ್ಳಲು ಮುಂದೆ ಓದಿ.....

ದಂಡುಪಾಳ್ಯ-2

ಶ್ರೀನಿವಾಸ್ ರಾಜು ನಿರ್ದೇಶಿಸಿ, ವೆಂಕಟ್ ನಿರ್ಮಾಣ ಮಾಡಿರುವ 'ದಂಡುಪಾಳ್ಯ-2' ಈ ವಾರ ತೆರೆ ಕಾಣುತ್ತಿದೆ. ಪೂಜಾಗಾಂಧಿ, ಮಕರಂದ್ ದೇಶಪಾಂಡೆ, ರವಿಕಾಳೆ, ಕರಿಸುಬ್ಬು, ರವಿಶಂಕರ್, ಸಂಜನಾ, ಶ್ರುತಿ, ಸುಚ್ಚೇಂದ್ರ ಪ್ರಸಾದ್, ಮುನಿ, ಡ್ಯಾನಿ, ಜಯದೇವ್, ಪೆಟ್ರೋಲ್ ಪ್ರಸನ್ನ ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವೆಂಕಟ್‌ಪ್ರಸಾದ್ ಛಾಯಾಗ್ರಹಣವಿದೆ.

'ದಂಡುಪಾಳ್ಯ' ಗ್ಯಾಂಗ್ ಬರುವ ದಿನಾಂಕ ಪಕ್ಕಾ ಆಯ್ತು.!

ಗ್ಯಾಪಲ್ಲೊಂದು ಸಿನಿಮಾ

ಆರ್ಯ ಆನ್ಯ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶರವಣ್ ವೈದೇಹಿ ಅವರು ನಿರ್ಮಿಸಿರುವ `ಗ್ಯಾಪಲ್ಲೊಂದು ಸಿನಿಮಾ` ಈ ವಾರ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಮಂಜು ಹೆದ್ದೂರು ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಶ್ರೀಧರ್ ಕಶ್ಯಪ್ ಸಂಗೀತ ನೀಡಿದ್ದಾರೆ. ಶಶಿಕುಮಾರ್, ಮಮತಾ ರಾಹುತ್, ಪೃಥ್ವಿರಾಜ್, ನವೀನ್, ಶರವಣ್, ರವಿಸೂರ್ಯ, ಪ್ರೇಮ್, ತಾರ, ಆವನಿ ಗೌಡ ಅಭಿನಯಿಸಿದ್ದಾರೆ.

ಹಳ್ಳಿ ಪಂಚಾಯಿತಿ

ಶ್ರೀ ವೈಷ್ಣವಿ ಎಂಟರ್‌ಟೈನ್ ಮೆಂಟ್ ಲಾಂಛನದಲ್ಲಿ ಪ್ರೇಮ ಯುವರಾಜು ಕಥೆ, ಚಿತ್ರಕಥೆ ರಚಿಸಿ ನಿರ್ಮಿಸಿರುವ 'ಹಳ್ಳಿ ಪಂಚಾಯಿತಿ' ಈ ವಾರ ರಾಜ್ಯಾಂದ್ಯಂತ ಬಿಡುಗಡೆಯಾಗುತ್ತಿದೆ. ಜಿ. ಉಮೇಶ್ ನಿರ್ದೇಶಿಸಿರುವ ಈ ಚಿತ್ರಕ್ಕೆ ಹರಿಕಾವ್ಯ ಅವರ ಸಂಗೀತವಿದೆ. ಉಳಿದಂತೆ ಗಡ್ಡಪ್ಪ, ಸೆಂಚುರಿಗೌಡ, ಗೀತಾ, ಪ್ರೇಮ ಯುವರಾಜ್, ಅಭಿ, ಮೇಘನಾಗೌಡ, ಬೌಬೌಜಯರಾಂ, ವೈಷ್ಣವಿ, ಮಾ||ಭಾರ್ಗವ ಮುಂತಾದವರು ಅಭಿನಯಿಸಿದ್ದಾರೆ.

ಮಕ್ಕಳ ಚಿತ್ರ 'ಪುಟಾಣಿ ಸಫಾರಿ'

ಸ್ವರ್ಣಗಂಗಾ ಫಿಲಂಸ್ ಲಾಂಛನದಲ್ಲಿ ಬಿ.ಎಸ್.ಚಂದ್ರಶೇಖರ್ (ಕೇಬಲ್ ಚಂದ್ರಶೇಖರ್) ನಿರ್ಮಿಸಿರುವ ಮಕ್ಕಳ ಚಿತ್ರ 'ಪುಟಾಣಿ ಸಫಾರಿ' ಈ ವಾರ ರಾಜ್ಯಾದ್ಯಾಂತ ಬಿಡುಗಡೆಯಾಗುತ್ತಿದೆ. ರವೀಂದ್ರ ವಂಶಿ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವೀರ್‌ಸಮರ್ಥ್ ಸಂಗೀತ ಒದಗಿಸಿದ್ದಾರೆ, ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ಮನೀಶ್ ಬಲ್ಲಾಳ್, ಸಹನಶ್ರೀ, ಕೈಲಾಶ್, ಟಿ.ಪಿ.ಜಗದೀಶ್, ವಿಜಯ್, ಮಾ||ರಾಕಿನ್, ಮಾ|| ರಾಜೀವ್, ಪ್ರಥಮ್, ಕು.ಬೃಂದ, ಕು.ಮಾನಸ ಮುಂತಾದವರು ಬಣ್ಣ ಹಚ್ಚಿದ್ದಾರೆ.

English summary
Kannada Actress Pooja Gandhi starrer Kannada Movie 'Dandupalya-2', and 'Halli Panchayathi', 'Gapalli ondu cinema's are Releasing on July 14th. here is the detil report....

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada