»   » 'ತಾರಕ್' ಅಬ್ಬರದ ನಂತರ ಈ ವಾರ ಕನ್ನಡದ 5 ಸಿನಿಮಾಗಳು ಬಿಡುಗಡೆ

'ತಾರಕ್' ಅಬ್ಬರದ ನಂತರ ಈ ವಾರ ಕನ್ನಡದ 5 ಸಿನಿಮಾಗಳು ಬಿಡುಗಡೆ

Posted By:
Subscribe to Filmibeat Kannada

ಮತ್ತೆ ಶುಕ್ರವಾರ ಬಂದಿದೆ.. ಈ ವಾರ ಕೂಡ ಸಿನಿ ಪ್ರೇಕ್ಷಕರಿಗೆ ಒಂದಷ್ಟು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಕನ್ನಡದಲ್ಲಿ ಈ ವಾರ ಬರೋಬ್ಬರಿ 5 ಸಿನಿಮಾಗಳು ರಿಲೀಸ್ ಆಗುತ್ತಿವೆ.

ಕಳೆದ ವಾರ ದರ್ಶನ್ 'ತಾರಕ್' ಚಿತ್ರ ಬಿಡುಗಡೆ ಆದ ಕಾರಣ ಹೊಸಬರ ಸಿನಿಮಾಗಳು ರಿಲೀಸ್ ಆಗಿರಲಿಲ್ಲ. ಇದೀಗ 'ತಾರಕ್' ಅಬ್ಬರದ ನಂತರ ಐದು ವಿಭಿನ್ನ ಸಿನಿಮಾಗಳು ಚಿತ್ರಮಂದಿರಕ್ಕೆ ಕಾಲಿಡಲಿದೆ. 'ಹುಲಿರಾಯ', 'ಕಿಡಿ', 'ಏಪ್ರಿಲ್ ನ ಹಿಮಬಿಂದು', 'ವೈರ', 'ಲಕ್ಷಿ ನಾರಾಯಣ ಪ್ರಪಂಚನೇ ಬೇರೆ' ಸಿನಿಮಾಗಳು ರಿಲೀಸ್ ಆಗಲು ಸಿದ್ಧವಾಗಿವೆ. ಮುಂದೆ ಓದಿ...

ಹುಲಿರಾಯ

ಸ್ಯಾಂಡಲ್ ವುಡ್ ತುಂಬ ಸುದ್ದಿ ಮಾಡಿರುವ 'ಹುಲಿರಾಯ' ಸಿನಿಮಾ ನಾಳೆ ಅಂದರೆ ಅಕ್ಟೋಬರ್ 6ಕ್ಕೆ ಬಿಡುಗಡೆಯಾಗಲಿದೆ. 'ಕಡ್ಡಿಪುಡಿ' ಸೇರಿದಂತೆ ಕೆಲ ಚಿತ್ರಗಳಲ್ಲಿ ನಟಿಸಿದ್ದ ಬಾಲು ಇಲ್ಲಿ 'ಹುಲಿರಾಯ'ನಾಗಿ ಅಬ್ಬರಿಸಿದ್ದಾರೆ. ಈ ಹುಲಿಯ ಜೋಡಿಯಾಗಿ ಜಿಂಕೆಯಂತೆ ನಾಯಕಿಯಾಗಿ ದಿವ್ಯ ಕಾಣಿಸಿಕೊಂಡಿದ್ದಾರೆ. ಅರವಿಂದ್ ಕೌಶಿಕ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಏಪ್ರಿಲ್ ನ ಹಿಮಬಿಂದು

ವಿಭಿನ್ನ ಟೈಟಲ್ ಮೂಲಕ ಗಮನ ಸೆಳೆದಿರುವ 'ಏಪ್ರಿಲ್ ನ ಹಿಮಬಿಂದು' ಚಿತ್ರ ನಾಳೆ ರಿಲೀಸ್ ಆಗುತ್ತಿದೆ. ಇದೊಂದು ಫ್ಯಾಮಿಲಿ ಓರಿಯಂಟೆಡ್ ಸಿನಿಮಾವಾಗಿದ್ದು, ಹಿರಿಯ ನಟರಾದ ದತ್ತಣ್ಣ ರವರು ತನ್ನ ಅಣ್ಣನಾದ ವಿ.ಸೋಮಶೇಖರ್ ರಾವ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಬಾಬು ಹಿರಣ್ಣಯ್ಯ, ಚಿದಾನಂದ್, ಟಿ.ವಿ ಗುರುಮೂರ್ತಿ, ಸಿದ್ಲಿಂಗು ಶ್ರೀಧರ್ ಸೇರಿದಂತೆ ಅನೇಕರು ಚಿತ್ರದಲ್ಲಿ ನಟಿಸಿದ್ದಾರೆ.

ಕಿಡಿ

ಮಲೆಯಾಳಂನ 'ಕಲಿ' ಸಿನಿಮಾ ರಿಮೇಕ್ 'ಕಿಡಿ' ಚಿತ್ರ ನಾಳೆ ತೆರೆಗೆ ಬರುತ್ತಿದೆ. ರಘುಮೂರ್ತಿ ಎನ್ನುವವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮಲೆಯಾಳಂನಲ್ಲಿ ಸಾಯಿ ಪಲ್ಲವಿ ನಟಿಸಿದ್ದ ಪಾತ್ರಕ್ಕೆ ಇಲ್ಲಿ ಪಲ್ಲವಿ ಗೌಡ ನಾಯಕಿಯಾಗಿದ್ದಾರೆ. ಬೆಂಗಳೂರಿನ ಅನುಪಮ ಸೇರಿದಂತೆ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ವೈರ

'ಬೆತ್ತಲೆ ವಿವಾದ' ಸೃಷ್ಟಿ ಮಾಡಿದ್ದ 'ವೈರ' ಸಿನಿಮಾ ಕೂಡ ನಾಳೆ ರಿಲೀಸ್ ಆಗಲಿದೆ. ನವರಸನ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಸ್ವತಃ ಅವರೇ ನಿರ್ದೇಶನ ಮಾಡಿದ್ದಾರೆ. 'ರಥಾವರ' ಚಿತ್ರವನ್ನು ನಿರ್ಮಾಣ ಮಾಡಿದ್ದ ಧರ್ಮಶ್ರೀ ಮಂಜುನಾಥ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಪ್ರಿಯಾಂಕಾ ನಾಯಕಿ ಆಗಿದ್ದು, ರವಿ ಬಸ್ರೂರ್ ಅವರು ಈ ಚಿತ್ರದ ಸಂಗೀತ ನಿರ್ದೇಶಕ.

ಲಕ್ಷಿ ನಾರಾಯಣರ ಪ್ರಪಂಚನೇ ಬೇರೆ

'ಲಕ್ಷಿ ನಾರಾಯಣರ ಪ್ರಪಂಚನೇ ಬೇರೆ' ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗಲಿದೆ. ಬಹುಭಾಷಾ ನಟಿ ವಿನಯ ಪ್ರಕಾಶ್ (ವಿನಯ ಪ್ರಸಾದ್) ನಿರ್ದೇಶನದ ಮೊದಲ ಚಿತ್ರ ಇದಾಗಿದೆ. ಜೊತೆಗೆ ಈ ಚಿತ್ರದ ಮೂಲಕ ವಿನಯ ಪ್ರಕಾಶ್ ಅವರ ಮಗಳು 'ಪ್ರಥಮಾ' ಬೆಳ್ಳಿತೆರೆ ಪ್ರವೇಶ ಮಾಡಿದ್ದಾರೆ.

English summary
5 kannada movies are releasing on october 6th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada