ನಟ ಅಜಿತ್ ಸದಸ್ಯತ್ವ ರದ್ದತಿಗೆ ವಕೀಲರ ಸಂಘದ ನಿರ್ಣಯ

ಅಷ್ಟಕ್ಕೂ ಈ ಉದಯೋನ್ಮುಖ ನಟ ಮಾಡಿರುವ ಘೋರ ಅಪರಾಧವಾದರೂ ಏನು ಎಂಬುದು ಎಲ್ಲರ ಪ್ರಶ್ನೆ. ಅಜಿತ್, ಪತ್ರಕರ್ತರ ಪರವಾಗಿ ಹೇಳಿಕೆ ನೀಡಿದ್ದಾರೆ, ವಕೀಲರ ಗೂಂಡಾಗಿರಿ ವಿರುದ್ಧ ಮಾತನಾಡಿದ್ದಾರೆ. ಅಜಿತ್ ತಮ್ಮ ಫೇಸ್‌ಬುಕ್‌ನಲ್ಲಿ ಪತ್ರಕರ್ತರ ಮೇಲಿನ ವಕೀಲರ ಗೂಂಡಾಗಿರಿಯನ್ನು ಖಂಡಿಸಿದ್ದರು. ಇದರಿಂದ ಕೆಂಡಾಮಂಡಲವಾದ ಲೋಕೇಶ್ ಎಂಬ ವಕೀಲರು ಅಜಿತ್ ವಿರುದ್ಧ ಹರಿಹಾಯ್ದಿದ್ದರು, ಬೆದರಿಕೆಯನ್ನೂ ಒಡ್ಡಿದ್ದರು.
ನಟ ಅಜಿತ್ ಕಾನೂನು ಪದವೀಧರರು. ಸಹಜವಾಗಿ ವಕೀಲರ ಸಂಘದಲ್ಲಿ ಸದಸ್ಯತ್ವ ಹೊಂದಿರುವವರು. ಆದರೆ ಪತ್ರಕರ್ತರ ಮೇಲೆ ವಕೀಲರು ನಡೆಸಿದ ಅಮಾನವೀಯ ಕೃತ್ಯವನ್ನು ಖಂಡಿಸಿದ್ದರಿಂದ ಇದೀಗ ಕೋಪಗೊಂಡಿರುವ ವಕೀಲರ ಸಂಘವೀಗ ಅಜಿತ್ ಸದಸ್ಯತ್ವ ರದ್ಧತಿಗೆ ನಿರ್ಣಯ ಕೈಗೊಂಡಿದೆ.
ಈ ವಿಷಯವನ್ನು ಅಜಿತ್ ಗಮನಕ್ಕೆ ತಂದು ಪ್ರತಿಕ್ರಿಯೆ ಕೇಳಿದಾಗ, ಅಜಿತ್ 'ನೋ ಕಾಮೆಂಟ್ಸ್' ಎಂದು ನಕ್ಕಿದ್ದಾರೆ. ಅವರ ನಗುವಿನಲ್ಲಿ 'ಇದರಿಂದೇನೂ ನನಗೆ ತೊಂದರೆಯಿಲ್ಲ, ನನಗಿದು ನಿರೀಕ್ಷಿತವೇ ಆಗಿತ್ತು' ಎಂಬ ಉತ್ತರ ವ್ಯಕ್ತವಾಗುವಂತಿತ್ತು. (ಒನ್ ಇಂಡಿಯಾ ಕನ್ನಡ)
More from Filmibeat
English summary
Kannada actor Patre Loves Padma fame Ajith claimed that one of the lawyer attacks on his facebook account. Because the actor condemns lawyers attack on media. He told taht lawyer threatened him to kicked out from Bar Council, the actor himself as a law graduate. Now, Lawyer Association took desicion to Cancell his Membership.


Click it and Unblock the Notifications











