»   » ದುನಿಯಾ ವಿಜಿ-ರಚಿತಾ ಜೋಡಿಯ 'ಜಾನಿ' ನೋಡಲು 5 ಕಾರಣ.!

ದುನಿಯಾ ವಿಜಿ-ರಚಿತಾ ಜೋಡಿಯ 'ಜಾನಿ' ನೋಡಲು 5 ಕಾರಣ.!

Posted By:
Subscribe to Filmibeat Kannada
ದುನಿಯಾ ವಿಜಿ-ರಚಿತಾ ಜೋಡಿಯ 'ಜಾನಿ' ನೋಡಲು 5 ಕಾರಣ.! | FIlmibeat Kannada

ಕನ್ನಡದ 'ಕರಿಚಿರತೆ' ದುನಿಯಾ ವಿಜಯ್ ಮತ್ತು ಬುಲ್ ಬುಲ್ ರಚಿತಾ ರಾಮ್ ಅಭಿನಯದ 'ಜಾನಿ ಜಾನಿ ಎಸ್ ಪಪ್ಪಾ' ಸಿನಿಮಾ ಇದೇ ವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಹಲವು ವಿಷ್ಯಗಳಿಗೆ ಕುತೂಹಲ ಮೂಡಿಸಿರುವ 'ಜಾನಿ ಸೀಕ್ವೆಲ್' ಈ ವಾರದ ನೆಚ್ಚಿನ ಸಿನಿಮಾ.

'ಜಾನಿ ಜಾನಿ ಎಸ್ ಪಪ್ಪಾ' ಚಿತ್ರದ ಜೊತೆಗೆ ಇತರೆ ಮೂರು ಸಿನಿಮಾಗಳು ಈ ವಾರ ಥಿಯೇಟರ್ ಗೆ ಬರ್ತಿದೆ. ಸಿಂಧು ಲೋಕನಾಥ್ ಅಭಿನಯದ 'ಹೀಗೊಂದು ದಿನ', ಸೋನು ಗೌಡ ಅಭಿನಯದ 'ಗುಳ್ಟು' ಹಾಗೂ 'ಇದೀಗ ಬಂದ ಸುದ್ದಿ' ಎಂಬ ಚಿತ್ರಗಳು ಬಿಡುಗಡೆಯಾಗುತ್ತಿದೆ.

ಈ ಚಿತ್ರಗಳ ಮಧ್ಯೆ ದೊಡ್ಡ ಸಿನಿಮಾ, ಸ್ಟಾರ್ಸ್ ಸಿನಿಮಾ, ಕಮರ್ಷಿಯಲ್ ಸಿನಿಮಾ ಎಂಬ ಟ್ಯಾಗ್ ಲೈನ್ ಹೊಂದಿರುವ 'ಜಾನಿ' ಚಿತ್ರವನ್ನ ಯಾಕೆ ನೋಡಬೇಕು ಎನ್ನುವುದು ಸಾಮಾನ್ಯ ಪ್ರೇಕ್ಷಕನ ಪ್ರಶ್ನೆ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ....

'ಜಾನಿ' ಸೀಕ್ವೆಲ್

2011 ರಲ್ಲಿ ಸೂಪರ್ ಹಿಟ್ ಆಗಿದ್ದ 'ಜಾನಿ' ಚಿತ್ರದ ಮುಮದುವರೆದ ಭಾಗ 'ಜಾನಿ ಜಾನಿ ಎಸ್ ಪಪ್ಪಾ'. ಜಾನಿ ಸಂಪೂರ್ಣ ಮನರಂಜನೆ ಮೂಲಕ ಎಲ್ಲ ಪ್ರೇಕ್ಷಕರನ್ನ ನಕ್ಕು ನಗಿಸಿದ್ದರು. ಔಟ್ ಅಂಡ್ ಔಟ್ ಎಂಟರ್ ಟೈನ್ ಮೆಂಟ್ ಮೂಲಕ ವರ್ಷದ ಹಿಟ್ ಸಿನಿಮಾ ಆಗಿ ಹೊರಹೊಮ್ಮಿತ್ತು. ಹೀಗಾಗಿ, ಸೀಕ್ವೆಲ್ ನಲ್ಲಿ 'ಜಾನಿ' ಹೇಗಿರಬಹುದು ಎಂಬ ಕುತೂಹಲ.

ಹೊಸ ಪದ್ಮಾವತಿ

'ಜಾನಿ' ಸಿನಿಮಾದ ಸೀಕ್ವೆಲ್ ಎಂದಾಕ್ಷಣ ಹೊಸ ಪದ್ಮಾವತಿ ಯಾರು ಎಂಬ ಪ್ರಶ್ನೆ ದೊಡ್ಡ ಚರ್ಚೆಯಾಗಿತ್ತು. ಯಾಕಂದ್ರೆ, ಮೊದಲ ಚಿತ್ರದಲ್ಲಿ ರಮ್ಯಾ ನಾಯಕಿಯಾಗಿದ್ದರು. ಈಗ ರಮ್ಯಾ ಬದಲು ರಚಿತಾ ರಾಮ್ ನಾಯಕಿಯಾಗಿದ್ದಾರೆ. ಆ ಸಿನಿಮಾದಲ್ಲಿ ದುನಿಯಾ ವಿಜಯ್ ಮತ್ತು ರಮ್ಯಾ ಕಾಂಬಿನೇಷನ್ ವರ್ಕೌಟ್ ಆಗಿತ್ತು. ಈ ಸಿನಿಮಾದಲ್ಲಿ ರಚಿತಾ-ವಿಜಿ ಜೋಡಿ ಹೇಗಿರಬಹುದು ಎಂಬ ಕಾತುರ.

ಪ್ರೀತಂ ಗುಬ್ಬಿ ಡೈರೆಕ್ಷನ್

ನಿರ್ದೇಶಕ ಪ್ರೀತಂ ಗುಬ್ಬಿ ಸಿನಿಮಾ ಎನ್ನುವುದು 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರದ ವಿಶೇಷತೆಗಳಲ್ಲಿ ಒಂದು. 'ಜಾನಿ' ಸಿನಿಮಾ ಗೆಲ್ಲುವುದಕ್ಕೆ ಪ್ರೀತಂ ಗುಬ್ಬಿ ಮತ್ತು ವಿಜಿ ಜೋಡಿಯೂ ಮುಖ್ಯ ಕಾರಣ. ಈಗ 'ಪಾರ್ಟ್-2' ಚಿತ್ರದ ಮೇಲೂ ಪ್ರೀತಂ ಶಕ್ತಿ ಇದೆ. ಜಾನಿಯಲ್ಲಿ ಮಾಡಿದ್ದ ಮೋಡಿ ಈಗಲೂ ಮಾಡಬಹುದು ಎಂಬ ನಿರೀಕ್ಷೆ ಪ್ರೇಕ್ಷಕರದ್ದು.

ವಿಜಿ-ರಂಗಾಯಣ ರಘು ಜುಗಲ್ ಬಂದಿ

ದುನಿಯಾ ವಿಜಯ್ ಮತ್ತು ಪ್ರೀತಂ ಗುಬ್ಬಿ, ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಜೋಡಿಯ ಮೇಲೆ ಹೇಗೆ ನಂಬಿಕೆ ಇದೆಯೋ ಅದೇ ರೀತಿ ದುನಿಯಾ ವಿಜಯ್ ಮತ್ತು ರಂಗಾಯಣ ರಘು ಜುಗಲ್ ಬಂದಿ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಯಾಕಂದ್ರೆ, ಇವರಿಬ್ಬರ ಕಾಂಬಿನೇಷನ್ ನಲ್ಲಿ ಅಷ್ಟು ಪವರ್ ಇದೆ. ಈ ಹಿಂದೆ 'ಜಾನಿ' ಚಿತ್ರದಲ್ಲೂ ಈ ಫಾರ್ಮೂಲ ಕೆಲಸ ಮಾಡಿತ್ತು. ಜೊತೆಗೆ ಸಾಧುಕೋಕಿಲಾ ಕಾಮಿಡಿ ಕೂಡ ಈ ಚಿತ್ರಕ್ಕೆ ಸಾಥ್ ನೀಡಲಿದೆ.

'ಜಾನಿ ಜಾನಿ ಎಸ್ ಪಪ್ಪಾ' ಟ್ರೈಲರ್-ಹಾಡುಗಳ ಮೋಡಿ

ಇಷ್ಟೆಲ್ಲ ವಿಶೇಷತೆಗಳ ಜೊತೆ ಈಗಾಗಲೇ ಚಿತ್ರದ ಟ್ರೈಲರ್ ಮತ್ತು ಹಾಡುಗಳು ಮೋಡಿ ಮಾಡಿದೆ. ಸಿನಿಮಾದಲ್ಲಿ ಮನರಂಜನೆ ಚೆನ್ನಾಗಿರಬಹುದು ಎಂಬುದನ್ನ ಟೀಸರ್ ಪ್ರೂವ್ ಮಾಡಿದೆ. ಇನ್ನು ಹಾಡುಗಳು ಕೂಡ ಹಿಟ್ ಆಗಿದ್ದು, ಚಿತ್ರಕ್ಕೆ ಸಾಥ್ ನೀಡಿರಬಹುದು ಎಂಬ ಸಮಾಧಾನ ತಂದಿದೆ. ಹೀಗಾಗಿ, ಜಾನಿ ಮುಂದುವರೆದ ಭಾಗವನ್ನ ನೋಡೊದಕ್ಕೆ ಇಷ್ಟು ಕಾರಣ ಸಾಕು ಅಲ್ವಾ.! ಮತ್ತೇಕೆ ತಡ ಒಮ್ಮೆ ಸಿನಿಮಾ ನೋಡಿ.

English summary
Kannada actor duniya vijay and actress rachita ram starrer johny johny yes papa will releasing on march 30th. the movie directed by preetham gubbi. here is the 5 reason to watch johny johny yes papa.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X