»   » ಆಗಸ್ಟ್ 25 ರಂದು ಸ್ಯಾಂಡಲ್ ವುಡ್ ಗೆ '5G' ಎಂಟ್ರಿ

ಆಗಸ್ಟ್ 25 ರಂದು ಸ್ಯಾಂಡಲ್ ವುಡ್ ಗೆ '5G' ಎಂಟ್ರಿ

Posted By:
Subscribe to Filmibeat Kannada

ದೇಶದಾದ್ಯಂತ ಇನ್ನೂ ಸಹ 4G ಹವಾ ಇರುವಾಗಲೇ, ಸ್ಯಾಂಡಲ್ ವುಡ್ ನಲ್ಲಿ 5G ಟ್ರೆಂಡ್ ಶುರುವಾಗಿದೆ. ಏನಿದು ಸ್ಯಾಂಡಲ್ ವುಡ್ ನಲ್ಲಿ 5G ನಾ? ಎಂಬ ಕುತೂಹಲ ಕಾಡುವುದು ಸಹಜ. ಅದಕ್ಕೆ ಉತ್ತರ ಇದೇ ತಿಂಗಳು ಸಿಗಲಿದೆ.

ಅಂದ್ಹಾಗೆ, '5G' (5th Generation) ಎಂಬುದು ಕನ್ನಡದ ಹೊಸ ಚಿತ್ರ. ಈಗಾಗಲೇ ಚಿತ್ರದ ಟ್ರೈಲರ್ ಮತ್ತು ಹಾಡುಗಳು ಬಿಡುಗಡೆಯಾಗಿದ್ದು, '5G' ಮೇಲೆ ಕುತೂಹಲ ಹೆಚ್ಚಾಗಿದೆ. ಯಾಕಂದ್ರೆ, ಇದೊಂದು ಪ್ರಸ್ತುತ ಸಮಾಜದ ಅಸಲಿ ಮುಖವನ್ನ ತೆರೆಮೇಲೆ ತರುತ್ತಿದೆ.

5G All Set To Release on august 25th

ಈ ಚಿತ್ರದ ವಿಶೇಷ ಅಂದ್ರೆ, ಚಿತ್ರಕ್ಕೆ ನಾಯಕ-ನಾಯಕಿಯೇ ಇಲ್ಲವಂತೆ. ಚಿತ್ರದ ಕಥೆಯೇ ರಿಯಲ್ ನಾಯಕ. ಇನ್ನೊಂದು ಮಾತು ಹೇಳುವುದಾದರೇ 500 ನೋಟು ಈ ಚಿತ್ರದ ನಿಜವಾದ ಕಥಾನಾಯಕನಂತೆ.

ಈ ವಿಭಿನ್ನ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವುದು ಗುರುವೇಂದ್ರ ಶೆಟ್ಟಿ. ಶ್ರೀಧರ್ ವಿ.ಸಂಭ್ರಮ್ ಚಿತ್ರಕ್ಕೆ ರಾಗ ಸಂಯೋಜನೆ ಮಾಡಿದ್ದಾರೆ. ಗುರು ಪ್ರಶಾಂತ ರೈ ಅವರು ಛಾಯಗ್ರಾಹಣ ಈ ಚಿತ್ರಕ್ಕಿದೆ. ಜಗದೀಶ, ದೀಪು ಹಾಗೂ ಗಿರೀಶ್ ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

5G All Set To Release on august 25th

'ಸಿಂಪಲಾಗ್ ಇನ್ನೊಂದು ಲವ್ ಸ್ಟೋರಿ' ಖ್ಯಾತಿಯ ನಟ ಪ್ರವೀಣ್ ಹಾಗೂ ನಿಧಿ ಸುಬ್ಬಯ್ಯ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ, ಟೈಟಲ್, ಹಾಗೂ ಟ್ರೈಲರ್ ನಿಂದ ಗಮನ ಸೆಳೆದಿರುವ '5G' ಸಿನಿಮಾ ಇದೇ ತಿಂಗಳು ಆಗಸ್ಟ್ 25 ರಂದು ಬಿಡುಗಡೆಯಾಗುತ್ತಿದೆ.

'5G' ಚಿತ್ರದ ಟ್ರೈಲರ್ ಇಲ್ಲಿದೆ ಮಾಡಿ

English summary
Kannada Movie 5G will be releasing on august 25th. The Movie directed by Guruvendra Shetty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada