ಬರುತ್ತಿದೆ ಪವನ್ ಒಡೆಯರ್, ಲೂಸ್ ಮಾದ ಜೋಡಿ

ಈಗಾಗಲೇ ಗೋವಿಂದಾಯ ನಮಃ ನಿರ್ದೇಶಕ ಪವನ್ ಹೊಸ ಚಿತ್ರದ ಸ್ಕ್ರಿಪ್ಟ್ ತಯಾರಿಯಲ್ಲಿದ್ದಾರೆ. ಸುದ್ದಿಮೂಲಗಳ ಪ್ರಕಾರ ಅವರ ಮುಂದಿನ ಚಿತ್ರಕ್ಕೂ ಹಣ ಹಾಕಲಿದ್ದಾರೆ ಗೋವಿಂದಾಯ ನಮಃ ಚಿತ್ರದ ನಿರ್ಮಾಪಕರಾದ ಸುರೇಶ್. ಪವನ್ ರ ಮುಂದಿನ ಚಿತ್ರದ ಹೀರೋ ಲೂಸ್ ಮಾದ ಯೋಗೇಶ್ ಎಂದೇ ಹೇಳಲಾಗುತ್ತಿದೆ. ಸದ್ಯಕ್ಕೆ ರಾಗಿಣಿ ನಾಯಕಿಯಾಗಿರುವ ಬಂಗಾರಿ ಚಿತ್ರಕ್ಕೆ ನಾಯಕರಾಗಿ ಚಿತ್ರಕರಣದಲ್ಲಿ ಬ್ಯುಸಿಯಾಗಿರುವ ಯೋಗಿ, ಏಪ್ರಿಲ್ ನಲ್ಲಿ ಈ ಚಿತ್ರಕ್ಕೆ ಕಾಲ್ ಶೀಟ್ ನೀಡಿದ್ದಾರೆ.
ಏಪ್ರಿಲ್ 15 ರಂದು ಈ ಚಿತ್ರಕ್ಕೆ ಮುಹೂರ್ತ ಎಂಬುದು ಬಹುತೇಕ ಖಚಿತವಾಗಿದೆ. ಆದರೆ ಲೂಸ್ ಮಾದ ಯೋಗೇಶ್ ಹಾಗೂ ಪವನ್ ಸಂಗಮದ ಚಿತ್ರವನ್ನು ಸುರೇಶ್ ನಿರ್ಮಿಸುತ್ತಿದ್ದಾರೋ ಅಥವಾ ಅದು ಪವನ್ ನಿರ್ದೇಶನದ ಬೇರೆ ಚಿತ್ರವೋ ಎಂಬುದು ಸದ್ಯಕ್ಕೆ ಗೊಂದಲದ ವಿಚಾರವಾಗಿದೆ. ಕಾರಣ, ಮಾಹಿತಿಯ ಪ್ರಕಾರ ಯೋಗೇಶ್-ಪವನ್ ಚಿತ್ರಕ್ಕೆ ನಿರ್ಮಾಪಕರು ಬೇರೆ ಎನ್ನಲಾಗುತ್ತಿದೆ. ಯಾವುದಕ್ಕೂ ಪವನ್ ಹಾಗೂ ಯೋಗೇಶ್ ಮ್ಯಾಜಿಕ್ ನೋಡುವುದಕ್ಕೆ ಸಿದ್ಧರಾಗಿ... (ಒನ್ ಇಂಡಿಯಾ ಕನ್ನಡ)
More from Filmibeat
English summary
Actor Loose Mada Yogesh acts in upcoming movie of the Govindaya Namaha movie director Pavan Odeyer. It starts in April, 2012.


Click it and Unblock the Notifications











