»   » ಎಲ್ರದ್ದೂ ದಿಲ್‌ಗೆ ಗೆದ್‌ಬಿಟ್ಟೈತೆ ಗೋವಿಂದಾಯ ನಮಃ

ಎಲ್ರದ್ದೂ ದಿಲ್‌ಗೆ ಗೆದ್‌ಬಿಟ್ಟೈತೆ ಗೋವಿಂದಾಯ ನಮಃ

Posted By:
Subscribe to Filmibeat Kannada

ಕೋಮಲ್ ಅಭಿನಯದ 'ಗೋವಿಂದಾಯ ನಮಃ' ರಾಜ್ಯದಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು ಎಲ್ರದ್ದೂ ದಿಲ್‌ಗೆ ಗೆದ್‌ಬಿಟ್ಟೈತೆ. ಮಲ್ಟಿಫೆಕ್ಸ್‌ಗಳಲ್ಲೂ 'ಗೋವಿಂದ' ಎಲ್ಲರಿಗೂ ಪ್ಯಾರ್‌ಗೆ ಆಗ್ಬಿಟ್ಟಿದ್ದಾನೆ. ಪವನ್ ಒಡೆಯರ್ ಚೊಚ್ಚಲ ನಿರ್ದೇಶನದಲ್ಲೇ ಗಮನಸೆಳೆದಿದ್ದಾರೆ.

ಒಂದೇ ವಾರದಲ್ಲಿ ಗೋವಿಂದಾಯ ನಮಃ ಚಿತ್ರ ರು.4ರಿಂದ ರು.5 ಕೋಟಿ ಬಾಚಿದ್ದಾನೆ ಎನ್ನುತ್ತವೆ ವಾಣಿಜ್ಯ ಮೂಲಗಳು. ಚಿತ್ರದ ನಿರ್ಮಾಪಕ ಸುರೇಶ್ ಅವರಂತೂ ಗೋವಿಂದನ ಮಹಿಮೆಗೆ ಮಾರುಹೋಗಿದ್ದಾರೆ. "ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸವಿತ್ತು. ಆದರೆ ಈ ಮಟ್ಟದಲ್ಲಿ ಯಶಸ್ವಿಯಾಗುತ್ತದೆ ಎಂದು ಊಹಿಸಿರಲಿಲ್ಲ" ಎಂದಿದ್ದಾರೆ.

"ಪ್ಯಾರ್‌ಗೆ ಆಗ್ಬಿಟ್ಟೈತೆ..'" ಹಾಡು ಚಿತ್ರದ ಪ್ರಮುಖ ಆಕರ್ಷಣೆಯಾಗಿತ್ತು. ಡೈಲಾಗ್‌ಗಳು ಪ್ರೇಕ್ಷಕರಿಗೆ ಇಷ್ಟವಾಗಿವೆ. ಈ ಚಿತ್ರದಲ್ಲಿ ಕೋಮಲ್‍‌ ಜೊತೆ ನಾಲ್ಕು ಮಂದಿ ನಾಯಕಿಯರು ಅಭಿನಯಿಸಿದ್ದಾರೆ. ಮುಂಬೈ ಬೆಡಗಿ ಪಾರುಲ್, ಕನ್ನಡತಿ ರೇಖಾ, ಜಾರ್ಜಿಯಾ ಸುಂದರಿ ಆನಾ ಬಾರ್ಬರಾ ಹಾಗೂ ಮಧುಲಿಕಾ. ( ಒನ್‌ಇಂಡಿಯಾ ಕನ್ನಡ)

English summary
Comedy actor Komal Kumar lead Kannada movie Govindaya Namaha running successfully all over Karnataka. The movie showing successfully in all the centres said the producer Suresh.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X