twitter
    For Quick Alerts
    ALLOW NOTIFICATIONS  
    For Daily Alerts

    ಯಾರು ಅತ್ಯುತ್ತಮ ನಟ: ಯಶ್ ಅಥವಾ ಪುನೀತ್.?

    By Suneetha
    |

    ಹೈದರಾಬಾದ್ ನಲ್ಲಿ ನಡೆಯಲಿರುವ 63ನೇ ಫಿಲ್ಮ್ ಫೇರ್ ಪ್ರಶಸ್ತಿ ಕಾರ್ಯಕ್ರಮಕ್ಕೆ ದಿನಗಣನೆ ಶುರುವಾಗಿದ್ದು, ಈಗಾಗಲೇ ನಾಮಿನೇಷನ್ ಕೂಡ ಆರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ಇಡೀ ದಕ್ಷಿಣ ಭಾರತದ ಸ್ಟಾರ್ ನಟ-ನಟಿಯರು ಭಾಗವಹಿಸಲಿದ್ದು, ಇಡೀ ವೇದಿಕೆ ಕಲರ್ ಫುಲ್ ಆಗಿ ವಿಜೃಂಭಿಸಲಿದೆ.

    ಬ್ರಿಟಾನಿಯಾ 63ನೇ ದಕ್ಷಿಣ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ, 2015 ರಲ್ಲಿ ಬಿಡುಗಡೆಯಾದ ಚಿತ್ರಗಳಿಗೆ ಹಾಗೂ ನಟ, ನಟಿ, ನಿರ್ದೇಶಕ ಹೀಗೆ ಹಲವಾರು ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.[ಸೈಮಾ ಪ್ರಶಸ್ತಿ ರೇಸ್: ಕೆಂಡಸಂಪಿಗೆ, ರಂಗಿತರಂಗ ಚಿತ್ರದ್ದೇ ಹವಾ!]

    ಇನ್ನು ಕನ್ನಡ ಚಿತ್ರರಂಗದ ಟಾಪ್ ಮೋಸ್ಟ್ ಸ್ಟಾರ್ ನಟರೇ 63ನೇ ಫಿಲ್ಮ್ ಫೇರ್ ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದು, ಫಿಲ್ಮ್ ಫೇರ್ ನಲ್ಲಿ ಕಪ್ಪು ಸುಂದರಿಯನ್ನು ತಮ್ಮ ಬಗಲಿಗೆ ಹಾಕಿಕೊಳ್ಳಲು ಕಾತರರಾಗಿದ್ದಾರೆ.

    ಅಂದಹಾಗೆ ಈ ಅದ್ದೂರಿ ಸಮಾರಂಭ ಜೂನ್ 18 ರಂದು, ಹೈದರಾಬಾದ್ ನ ಇಂಟರ್ ನ್ಯಾಷನಲ್ ಕನ್ವೆನ್ ಷನ್ ಸೆಂಟರ್ ನಲ್ಲಿ ಅದ್ದೂರಿಯಾಗಿ ಜರುಗಲಿದೆ.[61ನೇ ಫಿಲ್ಮ್ ಫೇರ್ ಪ್ರಶಸ್ತಿ: 'ಮಸ್ತಾನಿ' ಬಗಲಿಗೆ 9 ಪ್ರಶಸ್ತಿ]

    ಇದೀಗ ಕನ್ನಡ ಚಿತ್ರರಂಗದಿಂದ ನಾಮಾಂಕಿತಗೊಂಡಿರುವ ನಟ-ನಟಿ ಸೇರಿದಂತೆ ನಿರ್ದೇಶಕ, ಸಂಗೀತ ನಿರ್ದೇಶಕ ಮುಂತಾದವರ ಸಂಪೂರ್ಣ ಪಟ್ಟಿ ಬಿಡುಗಡೆ ಆಗಿದ್ದು, ಸ್ಯಾಂಡಲ್ ವುಡ್ ನ ಘಟಾನುಘಟಿಗಳು ರೇಸ್ ನಲ್ಲಿದ್ದಾರೆ. ನಾಮಾಂಕಿತರ ಪಟ್ಟಿ ಇಲ್ಲಿದೆ ನೋಡಿ...

    ಅತ್ಯುತ್ತಮ ನಟ

    ಅತ್ಯುತ್ತಮ ನಟ

    ರಾಕಿಂಗ್ ಸ್ಟಾರ್ ಯಶ್ : 'ಮಾಸ್ಟರ್ ಪೀಸ್'
    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ : 'ರಣವಿಕ್ರಮ'
    'ಕೃಷ್ಣ' ಅಲಿಯಾಸ್ ಅಜೇಯ್ ರಾವ್ : 'ಕೃಷ್ಣಲೀಲಾ'
    ಸಂಚಾರಿ ವಿಜಯ್ : 'ನಾನು ಅವನಲ್ಲ ಅವಳು'
    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ : 'ವಜ್ರಕಾಯ'

    ಅತ್ಯುತ್ತಮ ನಟಿ

    ಅತ್ಯುತ್ತಮ ನಟಿ

    ಮಯೂರಿ : 'ಕೃಷ್ಣಲೀಲಾ'
    ನಭಾ ನಟೇಶ್ : 'ವಜ್ರಕಾಯ'
    ಪಾರುಲ್ ಯಾದವ್ : 'ಆಟಗಾರ'
    ರಚಿತಾ ರಾಮ್ : 'ರನ್ನ'
    ಶಾನ್ವಿ ಶ್ರೀವಾತ್ಸವ್ : 'ಮಾಸ್ಟರ್ ಪೀಸ್'

    ಅತ್ಯುತ್ತಮ ಚಿತ್ರ

    ಅತ್ಯುತ್ತಮ ಚಿತ್ರ

    'ಆಟಗಾರ'
    'ಕೃಷ್ಣಲೀಲಾ'
    'ಮೈತ್ರಿ'
    'ರಣವಿಕ್ರಮ'
    'ರಂಗಿತರಂಗ'

    ಅತ್ಯುತ್ತಮ ನಿರ್ದೇಶಕ

    ಅತ್ಯುತ್ತಮ ನಿರ್ದೇಶಕ

    ಅನುಪ್ ಭಂಡಾರಿ : 'ರಂಗಿತರಂಗ'
    ಕೆ.ಎಂ ಚೈತನ್ಯ : 'ಆಟಗಾರ'
    ಪವನ್ ಒಡೆಯರ್ : 'ರಣವಿಕ್ರಮ'
    ಶಶಾಂಕ್ : 'ಕೃಷ್ಣಲೀಲಾ'
    ಸೂರಿ : 'ಕೆಂಡಸಂಪಿಗೆ'

    ಉತ್ತಮ ಪೋಷಕ ನಟ

    ಉತ್ತಮ ಪೋಷಕ ನಟ

    ಅನಂತ್ ನಾಗ್ : 'ವಾಸ್ತುಪ್ರಕಾರ'
    ರಾಮಕೃಷ್ಣ : 'ರಾಜರಾಜೇಂದ್ರ'
    ರವಿಶಂಕರ್: 'ಆಟಗಾರ'
    ಸಾಯಿ ಕುಮಾರ್ : 'ರಂಗಿತರಂಗ'
    ಸುಂದರ್ : 'ನಾನು ಅವನಲ್ಲ ಅವಳು'

    ಉತ್ತಮ ಪೋಷಕ ನಟಿ

    ಉತ್ತಮ ಪೋಷಕ ನಟಿ

    ಅವಂತಿಕಾ ಶೆಟ್ಟಿ : 'ರಂಗಿತರಂಗ'
    ಚಂದ್ರಿಕಾ : 'ಕೆಂಡಸಂಪಿಗೆ'
    ಮಧು ಶಾ : 'ರನ್ನ'
    ಪವನ್ : 'ಆಟಗಾರ'
    ಸುಧಾರಾಣಿ : 'ವಾಸ್ತು ಪ್ರಕಾರ'

    ಅತ್ಯುತ್ತಮ ಸಂಗೀತ

    ಅತ್ಯುತ್ತಮ ಸಂಗೀತ

    ಅನುಪ್ ಭಂಡಾರಿ : 'ರಂಗಿತರಂಗ'
    ಅರ್ಜುನ್ ಜನ್ಯ : 'ವಜ್ರಕಾಯ'
    ಶ್ರೀಧರ್ ವಿ ಸಂಭ್ರಮ್ : 'ಕೃಷ್ಣ ಲೀಲಾ'
    ಜೆಸ್ಸಿ ಗಿಫ್ಟ್ : 'ಲವ್ ಯೂ ಆಲಿಯಾ'
    ವಿ ಹರಿಕೃಷ್ಣ : 'ರಾಟೆ'

    ಉತ್ತಮ ಸಾಹಿತ್ಯ

    ಉತ್ತಮ ಸಾಹಿತ್ಯ

    ಜಯಂತ್ ಕಾಯ್ಕಿಣಿ : ನೆನಪೆ ನಿತ್ಯ ಮಲ್ಲಿಗೆ (ಕೆಂಡಸಂಪಿಗೆ)
    ಕವಿರಾಜ್ : ನೀ ಮುದ್ದಾದ (ರಥಾವರ)
    ಪವನ್ ಒಡೆಯರ್ : ಜಗವೇ ಒಂದು ರಣರಂಗ (ರಣವಿಕ್ರಮ)
    ವಿ.ನಾಗೇಂದ್ರ ಪ್ರಸಾದ್ : ಎದೆಯಲ್ ಯಾರೋ ಘಜಲ್ (ಮುದ್ದು ಮನಸೇ)
    ಯೋಗರಾಜ್ ಭಟ್ : ಮನೆಗೆ ನಾಕು ಮೂಲೆ ( ವಾಸ್ತುಪ್ರಕಾರ)

    ಅತ್ಯುತ್ತಮ ಗಾಯಕ

    ಅತ್ಯುತ್ತಮ ಗಾಯಕ

    ಧನುಷ್ - ನೋ ಪ್ರಾಬ್ಲಂ (ವಜ್ರಕಾಯ)
    ಜಾವೇದ್ ಅಲಿ - ಸಂಜೆ ವೇಳೇಲಿ ( ಲವ್ ಯೂ ಆಲಿಯಾ)
    ಕಾರ್ತಿಕ್ - ನೆನಪೆ ನಿತ್ಯ ಮಲ್ಲಿಗೆ ( ಕಾರ್ತಿಕ್)
    ಸಂತೋಷ್ ವೆಂಕಿ - ರಾಜ ರಾಣಿಯಂತೆ (ರಾಟೆ)
    ವಿಜಯ್ ಪ್ರಕಾಶ್ - ತುತ್ತೂರಿ ತಲವರಯ್ಯಾ (ಬುಲೆಟ್ ಬಸ್ಯಾ)

    ಅತ್ಯುತ್ತಮ ಗಾಯಕಿ

    ಅತ್ಯುತ್ತಮ ಗಾಯಕಿ

    ಅನುರಾಧ ಭಟ್ - ಇರಲಿ ಹೀಗೆ (ಬೆಂಕಿಪಟ್ನ)
    ಇಂಚರಾ ರಾವ್ - ಕರೆಯೋಲೆ ( ರಂಗಿತರಂಗ)
    ಇಂದು ನಾಗರಾಜ್ - ಕ ತಲಕಟು (ಮಿ.ಐರಾವತ)
    ಶ್ರೇಯಾ ಘೋಷಾಲ್ - ಶುರು ಶುರು (ಫಸ್ಟ್ ರ್ಯಾಂಕ್ ರಾಜು)
    ವಾಣಿ ಹರಿಕೃಷ್ಣ - ರಟ್ಟ ಪಟ್ಟ (ರಾಟೆ)

    English summary
    63rd edition of Britannia Filmfare Awards for south Indian cinema will be held on June 18 at the Hyderabad International Convention Centre. Here is the nominations list of Best Actor in Kannada cinema.
    Thursday, June 16, 2016, 17:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X