Don't Miss!
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- News
ಉದ್ಯಾನವನಕ್ಕೆ ಇಟ್ಟಿದ್ದ ಟಿಪ್ಪು ಸುಲ್ತಾನ್ ಹೆಸರು ತೆಗೆದ ಮಹಾರಾಷ್ಟ್ರ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಟಿವಿ9ನಲ್ಲಿ ರವಿ ಬೆಳಗೆರೆ Vs ಕನ್ನಡ ಚಿತ್ರೋದ್ಯಮ
ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಶನಿವಾರ (ಏ.7) ಮಧ್ಯಾಹ್ನ ಪ್ರಸಾರವಾದ "ಭೀಮಾ ತೀರದಲ್ಲಿ ವಿವಾದ" ವಿಶೇಷ ಕಾರ್ಯಕ್ರಮ ಸತತ ನಾಲ್ಕು ಗಂಟೆಗಳಿಗೂ ಅಧಿಕ ಕಾಲ ನೇರ ಪ್ರಸಾರವಾಗುವ ಮೂಲಕ ಹೊಸ ದಾಖಲೆಗೆ ಕಾರಣವಾಯಿತು ಎಂದೇ ಹೇಳಬಹುದು.
'ಭೀಮಾ ತೀರದಲ್ಲಿ' ಚಿತ್ರದ ನಿರ್ಮಾಪಕ ಅಣಜಿ ನಾಗರಾಜ್ ಅವರಿಗೆ ಬೆದರಿಕೆ ಕರೆ ಬಂದಿದೆ ಎಂದು ಆರಂಭವಾದ ಸುದ್ದಿ ನಾನಾ ಕೋನಗಳಲ್ಲಿ ಪ್ರವಹಿಸಿತು. ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಅವರು ತಮ್ಮ "ಭೀಮಾ ತೀರದ ಹಂತಕರು" ಕೃತಿಯನ್ನು ಕದ್ದು ಚಿತ್ರ ಮಾಡಿದ್ದಾರೆ ಎಂದು ಆರೋಪಿಸುವ ಮೂಲಕ ಮತ್ತೊಂದು ತಿರುವು ಪಡೆದುಕೊಂಡಿತು.
ಬಳಿಕ ಟಿವಿ9 ಸ್ಟುಡಿಯೋದಲ್ಲಿ ದುನಿಯಾ ವಿಜಯ್, ಅಣಜಿ ನಾಗರಾಜ್ ಹಾಗೂ ರವಿ ಬೆಳೆಗೆರೆ ನಡುವೆ ಮಾತಿನ ಚಕಮಕಿ ನಡೆಯಿತು. ಕಾರ್ಯಕ್ರಮದ ನಿರೂಪಕ ಶಿವ ಪ್ರಸಾದ್ ಅವರು ಹೆಚ್ಚಾಗಿ ರವಿ ಬೆಳೆಗೆರೆ ಅವರನ್ನೇ ಟಾರ್ಗೆಟ್ ಮಾಡಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕಿ ದಿಕ್ಕು ತಪ್ಪುವಂತೆ ಮಾಡಿದರು.
ಭೀಮಾ ತೀರದಲ್ಲಿ ವಿವಾದಕ್ಕೆ ಹಲವು ತಾರೆಗಳು ಎಂಟ್ರಿ ಕೊಡುವ ಮೂಲಕ ಮತ್ತೊಂದು ತಿರುವು ಪಡೆದುಕೊಂಡಿತು. ಸುದೀಪ್, ದರ್ಶನ್ ಕೂಡ ಅಣಜಿ ನಾಗರಾಜ್ ಪರ ಮಾತನಾಡಿ ಬೆಂಬಲಿಸಿದರು. "ನೀನೇನು ಭಯ ಬೀಳಬೇಡ ನಾವೆಲ್ಲಾ ಇದ್ದೀವಿ" ಎಂಬ ಸ್ಪಷ್ಟ ಸಂದೇಶ ಕನ್ನಡ ಚಿತ್ರರಂಗದಿಂದ ರವಾನೆಯಾಯಿತು.
ಒಂದು ಹಂತದಲ್ಲಿ ಇಡೀ ಚಿತ್ರರಂಗ ರವಿ ಬೆಳಗೆರೆ ವಿರುದ್ಧ ತಿರುಗಿಬೀಳುವಂತೆ ಭಾಸವಾಯಿತು. ದುನಿಯಾ ವಿಜಯ್ ಅವರಂತೂ ಸ್ಟುಡಿಯೋದಲ್ಲೇ ರವಿ ಬೆಳಗೆರೆ ವಿರುದ್ಧ ಮಾತಿನ ಸಮರ ಮಾಡಿದರು. ರವಿ ಬೆಳಗೆರೆ ಅಂದ 'ಅವಿವೇಕಿ', 'ಯೋಗ್ಯತೆ', 'ಪ್ರಾಮಾಣಿಕತೆ' ಎಂಬ ಪದ ಪ್ರಯೋಗಗಳಿಗೆ ತೀವ್ರವಾಗಿ ಖಂಡಿಸಿದರು.
ಈ ನಾಟಕೀಯ ಬೆಳವಣಿಗೆಗಳಿಗೆ ಕನ್ನಡ ಚಿತ್ರರಂಗದ ನಿರ್ಮಾಪಕರಾದಂತಹ ಕೊಬ್ರಿ ಮಂಜು ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಕೂಡ ಮಧ್ಯ ಪ್ರವೇಶಿಸಿದರು. ಅವರದೂ ಒಂದೇ ಮಾತು, ವಿಷಯ ಇಷ್ಟಕ್ಕೆ ಬಿಟ್ಟುಬಿಡಿ ಎಂದು ಹೇಳುವ ಜೊತೆಗೆ ಅಣಜಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.
ಓಂ ಪ್ರಕಾಶ್ ರಾವ್ ಅವರಂತೂ ತಾವು ಕದ್ದು ಕತೆ ಮಾಡಿಲ್ಲ. ಹಲವಾರು ಜನರನ್ನು ಸಂಪರ್ಕಿಸಿ ಚಿತ್ರ ಮಾಡಿದ್ದೇವೆ. ಒಂದು ವೇಳೆ ಕದ್ದಿದರೆ ಎದೆ ತಟ್ಟಿ ಹೇಳಿಕೊಳ್ಳುತ್ತಿದ್ದೆ ಎಂದರು. ಕಡೆಗೆ ವಾದ ವಿವಾದಗಳು, ಚರ್ಚೆಗಳು ಎತ್ತೆತ್ತಲೋ ಹೊರಳಿ ಕಡೆಗೆ ರವಿ ಬೆಳಗೆರೆ ಹೇಳಿದಿಷ್ಟೇ.
ಭೀಮಾ ತೀರದ ಹಂತಕರ ಬಗ್ಗೆ ಮೊಟ್ಟ ಮೊದಲ ಬಾರಿಗೆ ಬರೆದವರು ತಾವೇ. ಆ ರೀತಿಯ ಪದ ಬಳಿಸಿದ್ದೂ ತಾವೆ. ಚಿತ್ರ ಮಾಡುವುದಕ್ಕೂ ಮುನ್ನ ಒಮ್ಮೆ ತಮ್ಮನ್ನು ಸಂಪರ್ಕಿಸಬೇಕಾಗಿತ್ತು. ಇದನ್ನು ಬೆಳಕಿಗೆ ತಂದ ಲೇಖಕನಿಗೆ ಸಂತಸವಾಗುತ್ತಿತ್ತು. ಆದರೆ ಚಿತ್ರದ ನಿರ್ಮಾಪಕರಾಗಲಿ, ನಿರ್ದೇಶಕರಾಗಲಿ ತಮ್ಮನ್ನು ಸಂಪರ್ಕಿಸಲೇ ಇಲ್ಲ ಎಂಬ ಬೇಸರ ತಮ್ಮ ಸಿಟ್ಟಿಗೆ ಕಾರಣವಾಯಿತು ಎಂದರು. ಅಲ್ಲಿಗೆ ಟಿವಿ9 ವಿಶೇಷ ಕಾರ್ಯಕ್ರಮ ಫುಲ್ ಸ್ಟಾಪ್ ಬಿತ್ತು. (ಒನ್‌ಇಂಡಿಯಾ ಕನ್ನಡ)