»   » ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಉಪೇಂದ್ರ ಆಡಿರುವ ಮಾತಿದು...

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಉಪೇಂದ್ರ ಆಡಿರುವ ಮಾತಿದು...

Posted By:
Subscribe to Filmibeat Kannada

ಪ್ರಜೆಗಳೇ ಪ್ರಭುಗಳು ಎನ್ನುತ್ತಾ ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ಧುಮುಕಿ 'ಪ್ರಜಾಕೀಯ'ಕ್ಕೆ ಚಾಲನೆ ನೀಡಿದ್ದಾರೆ.

''ರಾಜಕೀಯ ತೊಲಗಲಿ, ಪ್ರಜಾಕೀಯ ಬರಲಿ'' ಎಂಬ ಸಂದೇಶ ಸಾರುತ್ತಿರುವ ಉಪೇಂದ್ರ ಇಂದು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮಾಡಿರುವ ಟ್ವೀಟ್ ನತ್ತ ಒಮ್ಮೆ ಕಣ್ಣಾಡಿಸಿ...

71st Independence Day: Check out Upendra Tweet

''ಸ್ವಾತಂತ್ರ್ಯ ಅಂದರೆ ಬಿಡುಗಡೆ
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ
ಈಗ ನಮ್ಮೊಳಗಿನ ಅಪನಂಬಿಕೆ, ಅನುಮಾನ, ಆಲಸ್ಯದಿಂದ ನಮಗೆ ಬಿಡುಗಡೆ ಬೇಕಾಗಿದೆ
ಹಣ, ತೋಳ್ಬಲ, ಜಾತಿವರ್ಗಗಳಿಂದ ಮುಕ್ತವಾದ ಪ್ರಜಾಕೀಯ ಪಕ್ಷ ಉದಯವಾಗಬೇಕಿದೆ
ಐಡಿಯಾ ಓಕೆ ಆದರೆ...

ಈ ಆದರೆ ಎಂಬ ಪದವನ್ನು ಕಿತ್ತೆಸೆಯೋಣ
ಆಗಿಯೇ ಆಗುತ್ತದೆ ಎಂದು ನಂಬೋಣ
ನಂಬಿಕೆಯೇ ಶಕ್ತಿ, ನಂಬಿಕೆಯೇ ಬಲ, ನಂಬಿಕೆಯೇ ಜೀವನ

ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು'' ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ.

ದೇಶದ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರುವುದರ ಜೊತೆಗೆ 'ಪ್ರಜಾಕೀಯ' ಪಕ್ಷದ ಪ್ರಾಮುಖ್ಯತೆ ಬಗ್ಗೆಯೂ ಉಪೇಂದ್ರ ಟ್ವೀಟಿಸಿದ್ದಾರೆ.

ಉಪೇಂದ್ರ ರವರ ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಉಪ್ಪಿಗೆ ಜೈ ಎನ್ನುವವರ ಸಂಖ್ಯೆ ಹೆಚ್ಚಾಗಿದೆ.

English summary
Check out Real Star Upendra's Tweet on the occasion of 71st Independence Day.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada