»   » 'ತಾರಕ್' ನೋಡೋಕೂ ಮುಂಚೆ, ನೀವು ತಿಳಿಯಬೇಕಾದ 8 ಸಂಗತಿಗಳು.!

'ತಾರಕ್' ನೋಡೋಕೂ ಮುಂಚೆ, ನೀವು ತಿಳಿಯಬೇಕಾದ 8 ಸಂಗತಿಗಳು.!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಚಿತ್ರ ಇದೇ ವಾರ (ಸೆಪ್ಟೆಂಬರ್ 29) ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಈಗಾಗಲೇ ಆನ್ ಲೈನ್ ಬುಕ್ಕಿಂಗ್ ಶುರುವಾಗಿದ್ದು, ಫಸ್ಟ್ ಡೇ, ಫಸ್ಟ್ ಶೋ ನೋಡುವುದಕ್ಕೆ ಚಿತ್ರಪ್ರೇಮಿಗಳು ತುದಿಗಾಲಲ್ಲಿ ನಿಂತು ಕಾಯ್ತಿದ್ದಾರೆ.

'ತಾರಕ್' ಚಿತ್ರವನ್ನ ಯಾಕೆ ಮೊದಲ ದಿನವೇ ನೋಡಬೇಕು? ದರ್ಶನ್ ಅವರ ಈ ಚಿತ್ರದಲ್ಲಿ ಏನಿದೆ ಅಂತಹ ವಿಶೇಷತೆ? ರೆಗ್ಯೂಲರ್ ಚಿತ್ರಗಳಿಗಿಂತ ಈ ಚಿತ್ರವೇಕೆ ಕುತೂಹಲ ಮೂಡಿಸಿದೆ? ಇಂತಹ ಪ್ರಶ್ನೆಗಳು ಕಾಡುವುದು ಸಹಜ.

ಅಂತಹ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. 'ತಾರಕ್' ಚಿತ್ರವನ್ನ ಯಾಕೆ ನೋಡಬೇಕು ಎನ್ನುವುದಕ್ಕೆ ಮುಖ್ಯವಾದ 8 ಕಾರಣಗಳನ್ನ ಪಟ್ಟಿ ಮಾಡಿದ್ದೀವಿ. ಈ 8 ಅಂಶಗಳು ಸಾಕು ಈ ಚಿತ್ರವನ್ನ ಮೊದಲ ದಿನವೇ ನೋಡುವುದಕ್ಕೆ. ಏನದು ಪ್ರಮುಖ ಕಾರಣಗಳು? ಮುಂದೆ ಓದಿ.....

ಪಕ್ಕಾ ಫ್ಯಾಮಿಲಿ ಮನರಂಜನೆ

ತಾರಕ್....ಪಕ್ಕಾ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಸಿನಿಮಾ ಎನ್ನುವುದು ಈ ಚಿತ್ರದ ವಿಶೇಷ. 'ಬೃಂದಾವನ' ನಂತರ ಇಂತಹದೊಂದು ಚಿತ್ರದಲ್ಲಿ ಮತ್ತೆ ದರ್ಶನ್ ಅಭಿನಯಿಸಿದ್ದಾರೆ. ಇಷ್ಟು ದಿನ ಪಕ್ಕಾ ಮಾಸ್ ಆಗಿ ರಂಜಿಸುತ್ತಿದ್ದ 'ಡಿ-ಬಾಸ್' ತುಂಬ ದಿನಗಳ ನಂತರ ಕ್ಲಾಸ್ ಆಗಿ ಬರ್ತಿದ್ದಾರೆ.

5 ದಿನದಲ್ಲಿ 'ತಾರಕ್' ಟ್ರೈಲರ್ ಮಾಡಿದ ದಾಖಲೆ ಏನು?

ಸ್ಟೈಲಿಶ್ ದರ್ಶನ್

'ತಾರಕ್' ಟ್ರೈಲರ್, ಪೋಸ್ಟರ್ ಗಳಲ್ಲಿ ನಟ ದರ್ಶನ್ ರವರೇ ಆಕರ್ಷಣೆ. ಯಾಕಂದ್ರೆ, ದರ್ಶನ್ ಅವರ ಹೇರ್ ಸ್ಟೈಲ್, ಗೆಟಪ್, ಅವರ ಮ್ಯಾನರಿಸಂ ಈ ಚಿತ್ರದಲ್ಲಿ ಬದಲಾಗಿದೆ. ಹೀಗಾಗಿ, 'ತಾರಕ್' ಚಿತ್ರದಲ್ಲಿ ಹೊಸ ರೀತಿಯ ದರ್ಶನ್ ನೋಡಬಹುದು. ಅಂದ್ಹಾಗೆ, ದರ್ಶನ್ ಗೆ ಈ ಚಿತ್ರದಲ್ಲಿ ನಿರ್ದೇಶಕ ಪ್ರಕಾಶ್ ಅವರ ಪತ್ನಿ ವಸ್ತ್ರವಿನ್ಯಾಸ ಮಾಡಿದ್ದಾರಂತೆ.

'ಸಂಜೆ ಹೊತ್ತಲ್ಲಿ' ದರ್ಶನ್-ಶ್ರುತಿ ಹರಿಹರನ್ ಡ್ಯುಯೆಟ್ ನೋಡಿ.!

ಚೆಂದದ ನಾಯಕಿಯರು

ದರ್ಶನ್ ಸಿನಿಮಾಗಳಲ್ಲಿ ಇಬ್ಬರು ಅಥವಾ ಮೂವರು ನಾಯಕಿಯರು ಇರುವುದು ಹೊಸದೇನಲ್ಲ. ಆದ್ರೆ, 'ತಾರಕ್' ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ಮತ್ತು ಶ್ರುತಿ ಹರಿಹರನ್ ಅಂತಹ ಚೆಂದದ ನಟಿಯರು ಈ ಬಾರಿ ಜೋಡಿಯಾಗಿರುವುದು ಖುಷಿ ಕೊಟ್ಟಿದೆ.

ಪ್ರಕಾಶ್ ನಿರ್ದೇಶನ

'ತಾರಕ್' ಚಿತ್ರದ ಸೂತ್ರಧಾರ ನಿರ್ದೇಶಕ ಪ್ರಕಾಶ್ ಸಿನಿಮಾ ಎನ್ನುವುದು ಮತ್ತೊಂದು ಪ್ರಮುಖ ಕಾರಣ. ಯಾಕಂದ್ರೆ, 'ರಿಷಿ', 'ಖುಷಿ', 'ಮಿಲನ', 'ಸಿದ್ಧಾರ್ಥ್' ಅಂತಹ ಯಶಸ್ವಿ ಸಿನಿಮಾಗಳನ್ನ ನೀಡಿದವರು ಪ್ರಕಾಶ್. ಹೀಗಾಗಿ, 'ತಾರಕ್' ಚಿತ್ರದ ಮೇಲೂ ನಿರೀಕ್ಷೆ ಬೆಟ್ಟದಷ್ಟಿದೆ.

'ತಾರಕ್'ಗೆ ತಾತನಾಗಲು ದೇವರಾಜ್ ವಿಧಿಸಿದ್ದ ಷರತ್ತು ಏನು?

ದೇವರಾಜ್-ದರ್ಶನ್

ದರ್ಶನ್ ನಾಯಕನಾಗಿರುವ 'ತಾರಕ್' ಚಿತ್ರದಲ್ಲಿ ದೇವರಾಜ್ ತಾತನ ಪಾತ್ರ ನಿರ್ವಹಿಸಿದ್ದಾರೆ. ಮೊದಲ ಬಾರಿಗೆ ದೇವರಾಜ್ ತಾತನಾಗಿ ಬಣ್ಣ ಹಚ್ಚಿರುವುದು ಸಹಜವಾಗಿ ಕುತೂಹಲ ಹುಟ್ಟುಹಾಕಿದೆ. ಈ ಮೂಲಕ ತೆರೆ ಮೇಲೆ ಹೊಸ ತಾತ-ಮೊಮ್ಮಗನ ಜೋಡಿ ನೋಡಬಹುದು.

ಫ್ರೆಶ್ ಕಾಂಬಿನೇಷನ್

ವಿಶೇಷ ಅಂದ್ರೆ 'ತಾರಕ್' ಚಿತ್ರದಲ್ಲಿ ಹಲವು ಫ್ರೆಶ್ ಕಾಂಬಿನೇಷನ್ ಕೆಲಸ ಮಾಡಿದೆ. ದರ್ಶನ್ ಮತ್ತು ನಿರ್ದೇಶಕ ಪ್ರಕಾಶ್ ಇದೇ ಮೊದಲ ಬಾರಿಗೆ ಕೆಲಸ ಮಾಡಿದ್ದಾರೆ. ದರ್ಶನ್ ಜೊತೆ ನಟಿ ಶ್ರುತಿ ಮತ್ತು ಶಾನ್ವಿ ಕೂಡ ಫಸ್ಟ್ ಟೈಂ ತೆರೆ ಹಂಚಿಕೊಂಡಿದ್ದಾರೆ. ನಿರ್ಮಾಪಕರ ಜೊತೆಯಲ್ಲೂ ದರ್ಶನ್ ಅವರದ್ದು ಮೊದಲ ಸಿನಿಮಾ.

ಸ್ವಮೇಕ್ ಸಿನಿಮಾ

ಅಂದ್ಹಾಗೆ, 'ತಾರಕ್' ಪಕ್ಕಾ ಸ್ವಮೇಕ್ ಸಿನಿಮಾ. ರೀಮೇಕ್ ಸಿನಿಮಾಗಳ ಅಪ್ಪಟ ವಿರೋಧಿಗಳು ಈ ಸಿನಿಮಾವನ್ನ ಖುಷಿಯಿಂದ ನೋಡಬಹುದು.

ದಸರಾ ಹಬ್ಬಕ್ಕೆ 'ದರ್ಶನ'

ದಸರಾ ಹಬ್ಬದ ಪ್ರಯುಕ್ತ 'ತಾರಕ್' ಸಿನಿಮಾ ಬರುತ್ತಿರುವುದು ಹಬ್ಬದ ಮೆರುಗನ್ನ ಮತ್ತಷ್ಟು ಹೆಚ್ಚಿಸುತ್ತಿದೆ. ಮನೆಯಲ್ಲಿ ಆಯುಧ ಪೂಜೆ ಮಾಡಿ, ಚಿತ್ರಮಂದಿರಕ್ಕೆ ಹೋಗಿ ದರ್ಶನ್ ಅವರ 'ತಾರಕ್' ಸಿನಿಮಾ ದರ್ಶನ ಮಾಡಿ ಈ ಬಾರಿಯ ಹಬ್ಬವನ್ನ ಆಚರಿಸಬಹುದು.

ಶುರುವಾಯಿತು ಚಿತ್ರಮಂದಿರದ ಮುಂದೆ 'ಡಿ ಬಾಸ್' ತಾರಕೋತ್ಸವ !

English summary
Challenging star darshan starrer 'Tarak' is releasing on Friday (september 29th) all Over Karnataka. The Movie also features shruthi hariharan shanvi srivastava, Devaraj. Here Are 8 Reasons As to why you should watch 'Tarak'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada