For Quick Alerts
  ALLOW NOTIFICATIONS  
  For Daily Alerts

  ಪುಸ್ತಕ ರೂಪದಲ್ಲಿ ಪಾರ್ವತಮ್ಮ ಬದುಕಿನ ಪುಟಗಳು

  By Rajendra
  |

  ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಬಗ್ಗೆ ಸಾಕಷ್ಟು ಪುಸ್ತಕಳು, ಮಾಹಿತಿ ಸಿಗುತ್ತದೆ. ಆದರೆ ಅವರ ಧರ್ಮಪತ್ನಿ ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ಬಗೆಗಿನ ಮಾಹಿತಿ, ಪುಸ್ತಕ ಸಿಗುವುದು ಬಲು ಅಪರೂಪ.

  ಅವರೊಬ್ಬ ಸದಭಿರುಚಿ ಕನ್ನಡ ಚಿತ್ರಗಳ ನಿರ್ಮಾಪಕಿ, ವಿತರಕಿ ಎಂಬ ಮಾಹಿತಿಗಳನ್ನು ಬಿಟ್ಟರೆ ಅವರ ಬದುಕಿನ ಪುಟಗಳು ದುರ್ಲಬ. ಕನ್ನಡ ಚಿತ್ರೋದ್ಯಮದ ಕೇಂದ್ರಬಿಂದು ಎಂದೇ ಗುರುತಿಸುವ ಪಾರ್ವತಮ್ಮ ಅವರ ಬದುಕಿನ ಪುಟಗಳನ್ನು ತೆರೆದಿಡಲು ಹೊರಟಿದ್ದಾರೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಜಾಹೀರಾತು ವಿಭಾಗದ ಆರ್ ಮಂಜುನಾಥ್. [ಡಾ.ರಾಜ್ ಕುಮಾರ್ ವಿಶ್ವಕೋಶ ಬೆಲೆ ರು.15,೦೦೦]

  ಅವರೊಂದಿಗೆ ಅವರ ಪತ್ನಿ ಡಾಕ್ಟರ್ ಸೌಮ್ಯಾ ಅವರು ಕೈಜೋಡಿಸಿದ್ದು ಪಾರ್ವತಮ್ಮ ಅವರ ಬದುಕಿನ ಪುಟಗಳನ್ನು ಸಿದ್ಧಮಾಡಿದ್ದಾರೆ. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಈ ಪುಸ್ತವನ್ನು ಹೊರತರುತ್ತಿದ್ದಾರೆ. ಈ ದಂಪತಿಗಳು ಪಾರ್ವತಮ್ಮ ಅವರೊಂದಿಗೆ ಬಹಳ ಒಡನಾಟ ಬೆಳೆಸಿಕೊಂಡು ಒಂದೂವರೆ ವರ್ಷಗಳಿಂದ ಸಾಕಷ್ಟು ಶ್ರಮಪಟ್ಟು ಮಾಹಿತಿಯನ್ನು ಕಲೆಹಾಕಿ ಇದೀಗ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

  ಪುಸ್ತಕದ ಹೆಸರು 'ಪಾರ್ವತಮ್ಮ ರಾಜ್ ಕುಮಾರ್ ಬದುಕಿನ ಪುಟಗಳು'. ಇದೇ ಅಕ್ಟೋಬರ್ 20ರಂದು ಕೃತಿ ಲೋಕಾರ್ಪಣೆಯಾಗುತ್ತಿದೆ. ಸುಮಾರು 260 ಪುಟಗಳ ಕೃತಿ ಇದಾಗಿದ್ದು ಪಾರ್ವತಮ್ಮ ಅವರ ಬದುಕಿನ ಪುಟಗಳನ್ನು ತೆರೆದಿಡುವ ಪ್ರಯತ್ನವನ್ನು ಮಾಡಲಾಗಿದೆ.

  ಈ ಹಿಂದೆ ಇದೇ ದಂಪತಿಗಳು ಅಣ್ಣಾವ್ರ 'ಡಾ.ರಾಜ್ ಕುಮಾರ್ ವ್ಯಕ್ತಿತ್ವದ ಹಿಂದಿನ ವ್ಯಕ್ತಿ' ಕೃತಿಯ ಇಂಗ್ಲಿಷ್ ಆವೃತ್ತಿಯನ್ನು ಲಂಡನ್ ನ ಪ್ರತಿಷ್ಠಿತ ಬ್ರಿಟೀಷ್ ಲೈಬ್ರರಿಗೆ ಹಸ್ತಾಂತರಿಸಿದ್ದರು. ಇದೀಗ ಪಾರ್ವತಮ್ಮ ಅವರ ಜೀವನದ ಹತ್ತು ಹಲವು ಸಂಗತಿಗಳನ್ನು ತಮ್ಮ ಕೃತಿಯಲ್ಲಿ ತರುತ್ತಿದ್ದಾರೆ. (ಏಜೆನ್ಸೀಸ್)

  English summary
  A book on Kannada films most admirable producer and distributor Parvathamma Rajkumar all set to release on 20th October, 2014. The book titled 'Parvathamma Rajkumar Badukina Putagalu', written by R Manjunath.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X