»   » ನಟಿ ಹನ್ಸಿಕಾ ವಿರುದ್ಧ ದೂರು ದಾಖಲಿಸಿದ ಮ್ಯಾನೇಜರ್

ನಟಿ ಹನ್ಸಿಕಾ ವಿರುದ್ಧ ದೂರು ದಾಖಲಿಸಿದ ಮ್ಯಾನೇಜರ್

Posted By:
Subscribe to Filmibeat Kannada

ದಕ್ಷಿಣ ಭಾರತದ ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ವಿರುದ್ಧ ಮ್ಯಾನೇಜರ್ ಮುನಿಸ್ವಾಮಿ ದೂರು ನೀಡಿದ್ದಾರೆ. ತಮಿಳುನಾಡು ಕಲಾವಿದರ ಸಂಘದಲ್ಲಿ ನಟಿಯ ವಿರುದ್ಧ ಸಂಬಳ ನೀಡಿಲ್ಲವೆಂದು ಆರೋಪ ಮಾಡಿದ್ದಾರೆ.

ನಾನು ಹಲವು ವರ್ಷಗಳಿಂದ ಹನ್ಸಿಕಾ ಅವರ ಬಳಿ ಕೆಲಸ ಮಾಡುತ್ತಿದ್ದೇನೆ. ಬಹಳ ದಿನಗಳಿಂದ ಹನ್ಸಿಕಾ ನನಗೆ ಸಂಬಳ ನೀಡದೆ ಸತಾಯಿಸುತ್ತಿದ್ದಾರೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆದ್ರೆ, ಚಿತ್ರರಂಗದಲ್ಲಿರುವವರ ಪ್ರಕಾರ ''ಹನ್ಸಿಕಾ ಅವರ ಮೊದಲ ಸಿನಿಮಾದಿಂದ ಇದುವರೆಗೂ ಹನ್ಸಿಕಾ ಅವರ ತಾಯಿ ಮೋನಾ ಮೊಟ್ವಾನಿ ಅವರೇ ಡೇಟ್, ಸಂಭಾವನೆಗೆ ಸಂಬಂಧಪಟ್ಟ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು ಎನ್ನುತ್ತಿದ್ದಾರೆ.

ಸೌತ್ ನಟಿಯರನ್ನ ಅವಮಾನಿಸಿದ 'ಬಿಗ್ ಬಾಸ್' ಸ್ಪರ್ಧಿ ಮುಖಕ್ಕೆ ಮಂಗಳಾರತಿ.!

A complaint filed against actress Hansika Motwani

ಇನ್ನು ಈ ಸಂಬಂಧ ಹನ್ಸಿಕಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಂದು ವೇಳೆ ಮ್ಯಾನೇಜರ್ ಮುನಿಸ್ವಾಮಿ ಅವರ ದೂರಿನಲ್ಲಿ ಸತ್ಯ ಕಂಡು ಬಂದರೇ ಹನ್ಸಿಕಾ ಅವರು ತಮಿಳುನಾಡು ಕಲಾವಿದರ ಸಂಘ ಅಥವಾ ದಕ್ಷಿಣ ಭಾರತ ಕಲಾವಿದರ ಸಂಘಕ್ಕೆ ದೂರಿನ ಬಗ್ಗೆ ಪ್ರತಿಕ್ರಿಯೆ ನೀಡಬೇಕಾಗುತ್ತೆ.

ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಬಿಂದಾಸ್' ಚಿತ್ರದಲ್ಲಿ ನಟಿಸಿರುವ ಹನ್ಸಿಕಾ ತೆಲುಗು ಮತ್ತು ತಮಿಳಿನಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ. ಅಲ್ಲು ಅರ್ಜುನ್ ಅಭಿನಯದ 'ದೇಶಮುದುರು' ಚಿತ್ರದ ಮೂಲಕ ನಾಯಕಿಯಾದ ಹನ್ಸಿಕಾ, 'ಕಂತ್ರಿ', 'ಓ ಮೈ ಫ್ರೆಂಡ್', 'ಸಿಂಗಂ-2', 'ಪವರ್', 'ಬಿರಿಯಾನಿ', 'ವಾಲು' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

English summary
A complaint has been filed against actress Hansika Motwani at artist association for reportedly not paying salary to of one of her employees. The man, Munusamy, claimed to be her manager and alleged that the actress has settled his remuneration yet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada