For Quick Alerts
  ALLOW NOTIFICATIONS  
  For Daily Alerts

  ಹೊಸ ಆಡಿಯೋ ಸಂಸ್ಥೆ ಸ್ಥಾಪಿಸಿದ ಗುರುಕಿರಣ್ ಮತ್ತು ದ್ವಾರಕೀಶ್

  By Bharath Kumar
  |
  ದ್ವಾರಕೀಶ್-ಗುರುಕಿರಣ್ ರಿಂದ ಆರಂಭವಾದ ಆಡಿಯೋ ಕಂಪನಿ | FIlmibeat Kannada

  ಕನ್ನಡದ ಖ್ಯಾತ ನಟ, ನಿರ್ಮಾಪಕ ಹಾಗೂ ನಿರ್ದೇಶಕ ದ್ವಾರಕೀಶ್ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಇಬ್ಬರು ಸೇರಿ ಸ್ಯಾಂಡಲ್ ವುಡ್ ಗೆ ಹೊಸ ಆಡಿಯೋ ಸಂಸ್ಥೆಯನ್ನ ಪರಿಚಯಿಸಿದ್ದಾರೆ.

  'ಡಿಜೆಕೆ' ಎಂಬ ಹೆಸರಿನಲ್ಲಿ ಹೊಸ ಆಡಿಯೋ ಸಂಸ್ಥೆ ಹುಟ್ಟುಹಾಕಿದ್ದು, ಚಿರು ಸರ್ಜಾ ಅಭಿನಯದ 'ಅಮ್ಮ ಐ ಲವ್ ಯೂ' ಚಿತ್ರವನ್ನ ಮೊದಲ ಬಾರಿಗೆ ಈ ಆಡಿಯೋ ಕಂಪನಿ ಮೂಲಕ ಬಿಡುಗಡೆ ಮಾಡಿದ್ದಾರೆ. ಹೀಗಾಗಿ, ಗುರುಕಿರಣ್ ಅವರ ಬಹುವರ್ಷದ ಕನಸನ್ನ ಈಡೇರಿಸಿಕೊಂಡಿದ್ದಾರೆ.

  ವಿಶೇಷ ಅಂದ್ರೆ, 'ಅಮ್ಮ ಐ ಲವ್ ಯೂ' ಚಿತ್ರಕ್ಕೆ ಸಂಗೀತ ನೀಡಿರುವುದು ಸ್ವತಃ ಗುರುಕಿರಣ್. ಈ ಚಿತ್ರವನ್ನ ನಿರ್ಮಾಣ ಮಾಡಿರುವುದು ದ್ವಾರಕೀಶ್ ಚಿತ್ರ ಸಂಸ್ಥೆ. ಹೀಗಾಗಿ, ಆಡಿಯೋ ಬಿಡುಗಡೆ ಮತ್ತು ಆಡಿಯೋ ಕಂಪನಿ ಉದ್ಘಾಟನೆ ಒಟ್ಟೊಟ್ಟಿಗೆ ನೆರವೇರಿದೆ.

  ಈ ಅದ್ಧೂರಿ ಕಾರ್ಯಕ್ರಮದಲ್ಲಿ ಹಿರಿಯ ನಿರ್ದೇಶಕ ಭಾರ್ಗವ, ನಟ ಶಿವರಾಜ್ ಕುಮಾರ್, ನಟ ಉಪೇಂದ್ರ, ಪುನೀತ್ ರಾಜ್ ಕುಮಾರ್, ಸಾಧು ಕೋಕಿಲಾ, ಪ್ರಿಯಾಂಕಾ ಉಪೇಂದ್ರ, ಧ್ರುವ ಸರ್ಜಾ ಸೇರಿದಂತೆ ಹಲವು ಸಿನಿತಾರೆಯರು ಭಾಗಿಯಾಗಿದ್ದರು.

  ಅಂದ್ಹಾಗೆ, 2016ರ ತಮಿಳಿನ ಸೂಪರ್ ಹಿಟ್ ಸಿನಿಮಾ 'ಪಿಚ್ಚಕಾರನ್' ಚಿತ್ರದ ಕನ್ನಡ ಅವತರಣಿಕೆ 'ಅಮ್ಮ ಐ ಲವ್ ಯೂ'. ಕೆ.ಎಂ ಚೈತನ್ಯ ನಿರ್ದೇಶನ ಈ ಚಿತ್ರಕ್ಕೆ ಚಿರಂಜೀವಿ ಸರ್ಜಾ ನಾಯಕನಾಗಿದ್ದು, ಹಿರಿಯ ನಟಿ ಸಿತಾರ ತಾಯಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಾಯಕಿಯಾಗಿ ನಿಶ್ವಿಕಾ ನಾಯ್ಡು ಕಾಣಿಸಿಕೊಂಡಿದ್ದಾರೆ. ಸದ್ಯ, ಆಡಿಯೋ ಮೂಲಕ ಭರವಸೆ ಮೂಡಿಸಿರುವ ಅಮ್ಮ ಐ ಲವ್ ಯೂ ಜೂನ್ 15 ರಂದು ತೆರೆಗೆ ಬರ್ತಿದೆ.

  English summary
  A new audio company has been launched in Sandalwood. It is a collaboration between Dwarakish Chitra and composer Gurukiran. It has been named DGK Audio Inc.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X