For Quick Alerts
  ALLOW NOTIFICATIONS  
  For Daily Alerts

  ಲೂಸಿಯಾ : ಇದು ಹೊಸ ಬದಲಾವಣೆಗೆ ಮುನ್ನುಡಿಯಾಗಲಿ

  By ಕೃಪೆ: ಏನ್ ಗುರು
  |

  ಹೊಸತನದ ಕನ್ನಡ ಚಿತ್ರಗಳನ್ನು ಎದುರು ನೋಡುತ್ತಿರುವ ಚಿತ್ರ ಪ್ರೇಮಿಗಳಷ್ಟೇ ಅಲ್ಲ ಚಿತ್ರೋದ್ಯಮವೂ ಕುತೂಹಲದ ಕಣ್ಣು ನೆಟ್ಟಿರುವ ಚಿತ್ರ 'ಲೂಸಿಯಾ'. ಈ ವಾರ (ಸೆ.6) ಕೇವಲ ರಾಜ್ಯದಾದ್ಯಂತ ಅಲ್ಲ ಭಾರತದಾದ್ಯಂತ ಬಿಡುಗಡೆಯಾಗುತ್ತಿದೆ.

  ಹಲವಾರು ಕಾರಣಗಳಿಗಾಗಿ ಈ ಚಿತ್ರ ಕುತೂಹಲಕ್ಕೆ, ಚರ್ಚೆಗೆ ಕಾರಣವಾಗಿದೆ. ಜನರೇ ನಿರ್ಮಾಪಕರಾಗಿರುವ (Crowd funding movie) ಕನ್ನಡದ ಮೊಟ್ಟ ಮೊದಲ ಚಿತ್ರ 'ಲೂಸಿಯಾ'. ಈ ಚಿತ್ರ ಈಗಾಗಲೆ ಹಾಡುಗಳಿಂದ ಹಾಗೂ ವಿಭಿನ್ನ ಪ್ರೊಮೋಗಳಿಂದ ಕನ್ನಡ ಚಿತ್ರರಸಿಕರ ಗಮನಸೆಳೆದಿದೆ.

  ಆಡಿಯನ್ಸ್ ಫಿಲಂಸ್ & ಹೋಮ್ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರ 'ಲೂಸಿಯಾ'. ಪವನ್ ಕುಮಾರ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಸಿದ್ಧಾರ್ಥ್ ನುನಿ ಅವರ ಛಾಯಾಗ್ರಹಣವಿದೆ.

  ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ, ಸನತ್ ಸುರೇಶ್ ಮತ್ತು ಪವನ್ ಕುಮಾರ್ ಸಂಕಲನ, ಹರ್ಷ, ಮುರಳಿ, ಸೌಮ್ಯ ಜಗನ್ ಮೂರ್ತಿ ನೃತ್ಯ ನಿರ್ದೇಶನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಎಂ.ಕೆ.ಸುಬ್ರಹ್ಮಣ್ಯ. ಈ ಚಿತ್ರದ ಬಗ್ಗೆ 'ಏನ್ ಗುರು' ಬ್ಲಾಗ್ ನಲ್ಲಿ ಪ್ರಕಟವಾದ ಲೇಖನದ ಮೇಲೆ ಒಮ್ಮೆ ಕಣ್ಣಾಡಿಸೋಣ.

  ಈ ಪ್ರಯೋಗವನ್ನು ಮೆಚ್ಚದವರು ಯಾರಿದ್ದಾರೆ?

  ಈ ಪ್ರಯೋಗವನ್ನು ಮೆಚ್ಚದವರು ಯಾರಿದ್ದಾರೆ?

  "ಈ ಹೊಸತನದ ಪ್ರಯೋಗವನ್ನು ಮೆಚ್ಚದವರು ಯಾರಾದರೂ ಇದ್ದೀರಾ?" ಎಂದು ಟಾರ್ಚ್ ಬಿಟ್ಕೊಂಡು ನೋಡ್ತಿರೋ ಹಾಗಿರೋ ಈ ಜಾಹಿರಾತು "ಲೂಸಿಯಾ" ಚಿತ್ರತಂಡದ ಕ್ರಿಯಾಶೀಲತೆಗೆ, ಕನ್ನಡ ಚಿತ್ರರಂಗದಲ್ಲಿನ್ನೂ ಹೊಸ ಹೊಸ ಸೃಜನಶೀಲ ಪ್ರಯತ್ನಗಳು ಆಗುತ್ತಿವೆ ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದೆ. ಇದಷ್ಟೇ ಆಗಿಲ್ಲದೆ ಕನ್ನಡದ ನುಡಿ ಸಾಧ್ಯತೆಯ ಪಟ್ಟಿಗೆ "ನೋಡುಗರ ಹೂಡಿಕೆಯ ಸಿನಿಮಾ" ಎನ್ನುವ ಹೊಸದೊಂದು ಸಾಲನ್ನು ಸೇರಿಸುತ್ತಿದೆ.

  "ಆಡಿಯನ್ಸ್ ಫಿಲ್ಮ್" ಎಂಬ ಹೊಸ ವಿಧಾನ

  "ಲೂಸಿಯಾ" ಹೆಸರಿನ ಹೊಸ ಸಿನಿಮಾವೊಂದು ಒಂದೆರಡು ತಿಂಗಳುಗಳಲ್ಲಿ ಬಿಡುಗಡೆಯಾಗಲಿದ್ದು ನಿಧಾನವಾಗಿ ಪ್ರಚಾರ ಕಳೆಗಟ್ಟತೊಡಗಿದೆ. ಲೂಸಿಯ ಸಿನಿಮಾಗಿಂತಲೂ ನಮಗೆ ಮಹತ್ವದ್ದಾಗಿ ಕಾಣುತ್ತಿರುವುದು ಆ ಸಿನಿಮಾ ತಯಾರಾದ ಬಗೆ. ನೋಡುಗರೇ ಹೂಡಿಕೆದಾರರಾಗುವ ವಿಭಿನ್ನವಾದ ಅವಕಾಶದಿಂದಾಗಿ "ಆಡಿಯನ್ಸ್ ಫಿಲ್ಮ್" ಎಂಬ ಹೊಸ ವಿಧಾನವೊಂದು ನಮ್ಮ ನಾಡಲ್ಲಿ ಚಿಗುರುತ್ತಿರುವುದು ಎಲ್ಲರ ಕುತೂಹಲ ಮತ್ತು ಮೆಚ್ಚುಗೆಗೆ ಕಾರಣವಾಗಿದೆ. ಕನ್ನಡ ಚಿತ್ರರಂಗದ ಈ ಹೊಸ ಬೆಳವಣಿಗೆ ಹೊಸತನದಿಂದ ಕೂಡಿದ್ದು ಹೊಸದೊಂದು ಮಾದರಿಯಾಗುವ ಲಕ್ಷಣ ಹೊಂದಿದೆ.

  ಈ ಬಗೆಯ ಸಿನಿಮಾ ನಾಡಿಗೆ ಹೊಸದು

  ಈ ಬಗೆಯ ಸಿನಿಮಾ ನಾಡಿಗೆ ಹೊಸದು

  ಸಿನಿಮಾವೊಂದಕ್ಕೆ ದೊಡ್ಡಮೊತ್ತದ ಬಂಡವಾಳ ಬೇಕೆನ್ನುವುದು ಗೊತ್ತಿರುವ ಸಂಗತಿಯೇ! ಈ ಬಂಡವಾಳವನ್ನು ತನ್ನ ಹಿಂದಿನ ಸಿನಿಮಾ ಹುಟ್ಟುಹಾಕಿದ ಭರವಸೆಯನ್ನು ಮುಂದೊಡ್ಡಿ ನೋಡುಗರೇ ತೊಡಗಿಸುವಂತೆ ಮಾಡಿದ ಈ ಬಗೆ ನಾಡಿಗೆ ಹೊಸದು. ಇದೇ ಕಾರಣಕ್ಕಾಗಿ ಲೂಸಿಯಾ ತಂಡಕ್ಕೆ ಪ್ರಶಸ್ತಿಯೂ ಬಂದದ್ದು, ಈ ಪ್ರಯತ್ನಕ್ಕೊಂದು ದೊಡ್ಡಬಲ ಬಂದಂತಾಗಿದೆ.

  ಈ ಪ್ರಯತ್ನದ ಹಿಂದೆ ದೊಡ್ಡ ಪ್ರಯೋಗಶೀಲತೆ

  ಈ ಪ್ರಯತ್ನದ ಹಿಂದೆ ದೊಡ್ಡ ಪ್ರಯೋಗಶೀಲತೆ

  ಇಂಥದ್ದೊಂದು ಪ್ರಯತ್ನದ ಹಿಂದೆ ದೊಡ್ಡದಾದ ಪ್ರಯೋಗಶೀಲತೆಯಿದೆ. ಮೇಲ್ನೋಟಕ್ಕೆ ಬಹಳ ಸುಲಭವಾದ ಪಟ್ಟಿನಂತೆ ಕಾಣುವ ಈ ಪ್ರಯೋಗವು ಬಹಳ ಎದೆಗಾರಿಕೆಯಿಂದ ಕೂಡಿರುವುದಾಗಿದೆ. ಈ ರೀತಿಯ ಹೊಸಪ್ರಯತ್ನಗಳು ಗೆಲ್ಲುವುದಾದಲ್ಲಿ ಇಂತಹ ಇನ್ನಷ್ಟು ಪ್ರಯೋಗಗಳು ನಮ್ಮಲ್ಲಾಗುತ್ತದೆ.

  ನಿರ್ದೇಶಕನ ಮೇಲೆ ನಂಬಿಕೆಯೇ ಸ್ಫೂರ್ತಿ

  ನಿರ್ದೇಶಕನ ಮೇಲೆ ನಂಬಿಕೆಯೇ ಸ್ಫೂರ್ತಿ

  ವಾಸ್ತವವಾಗಿ ಸಿನಿಮಾವೊಂದನ್ನು ಹೀಗೆ ನೋಡುಗರೇ ಒಂದಷ್ಟು ಮಂದಿ ಹಣ ತೊಡಗಿಸಿ ನಿರ್ಮಾಣ ಮಾಡಬೇಕೆಂದರೆ ಅದರ ನಿರ್ಮಾಣದ ಬಗ್ಗೆ ಗಟ್ಟಿಯಾದ ನಂಬಿಕೆ ಇರಬೇಕಾಗುತ್ತದೆ. ಇಂತಹ ನಂಬಿಕೆ ಒಂದೇ ಬಾರಿಗೇ/ ಮೊದಲಬಾರಿಗೇ ಒಬ್ಬ ನಿರ್ದೇಶಕರ ಮೇಲೆ ಹುಟ್ಟುವುದು ಕಷ್ಟ!

  'ಲೂಸಿಯಾ' ಚಿತ್ರ ಗೆಲ್ಲಲೇಬೇಕು

  'ಲೂಸಿಯಾ' ಚಿತ್ರ ಗೆಲ್ಲಲೇಬೇಕು

  ಹಾಗಾಗಿ ಯಾವುದೇ ನಿರ್ದೇಶಕರಾದರೂ ಕೂಡಾ ಜನರಿಗೆ ತಮ್ಮ ಹಿಂದಿನ ಯಶಸ್ಸನ್ನು ತೋರಿಸಿ, ತಮ್ಮಲ್ಲಿರುವ ಪ್ರತಿಭೆಯ ಬಗ್ಗೆ ನಂಬಿಕೆ ಮೂಡಿಸಿಯೇ ಇಂಥಾ ಹೂಡಿಕೆ ಗಳಿಸಿಕೊಳ್ಳಲು ಸಾಧ್ಯ. ಈ ಕಾರಣದಿಂದಲೇ ಕನ್ನಡಚಿತ್ರರಂಗದಲ್ಲಿ ಇನ್ನಷ್ಟು ಮತ್ತಷ್ಟು ಹೊಸ ಪ್ರತಿಭೆಗಳು, ಒಳ್ಳೆಯ ಚಿತ್ರಗಳು ಮೂಡಿಬರಲಿವೆ. ಈ ಕಾರಣಕ್ಕಾಗಿ ಲೂಸಿಯಾ ಚಿತ್ರ ಗೆಲ್ಲಬೇಕು. ಹಾಗೆ ಗೆಲ್ಲಬೇಕೆಂದರೆ, ಅದಾಗುವುದು ನಾವೂ ನೀವು ಮನಸ್ಸು ಮಾಡಿದರೆ ಮಾತ್ರವೇ!

  English summary
  A new kind of Kannada film Lucia directed by Pawan Kumar, winner of the Audience award at the London Indian Film Festival, will release in India on September 6. The movie is awesome collaboration of love, laughter, action, drama, surrealism and tears.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X