For Quick Alerts
  ALLOW NOTIFICATIONS  
  For Daily Alerts

  ಪೈಲ್ವಾನ್ ನಾಯಕಿ ಆಕಾಂಕ್ಷ ಸಿಂಗ್ 'ಮುತ್ತಿನ' ಫೋಟೋ ವೈರಲ್

  |

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಯಶಸ್ವಿ ಪ್ರದರ್ಶನ ಕಾಣ್ತಿದ್ದು, 25 ದಿನಗಳನ್ನ ಪೂರೈಸಿ ಮುನ್ನುಗ್ಗುತ್ತಿದೆ. ಈ ಚಿತ್ರದಲ್ಲಿ ಮುಂಬೈ ಹುಡುಗಿ ಆಕಾಂಕ್ಷ ಸಿಂಗ್ ನಾಯಕಿಯಾಗಿ ಅಭಿನಯಿಸಿದ್ದರು.

  ಆಕಾಂಕ್ಷ ಸಿಂಗ್ ಅವರಿಗೆ ಪೈಲ್ವಾನ್ ಮೊದಲ ಕನ್ನಡ ಸಿನಿಮಾ. ಚೊಚ್ಚಲ ಚಿತ್ರದಲ್ಲಿಯೇ ಸ್ಯಾಂಡಲ್ ವುಡ್ ಅಭಿಮಾನಿಗಳು ಹೃದಯದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಮುದ್ದಾದ ನಟನೆಯ ಮೂಲಕ ಹೊಸ ಕ್ರಶ್ ಎನಿಸಿಕೊಂಡಿದ್ದರು.

  'ಪೈಲ್ವಾನ್' ನೋಡಿ ನಟಿ ಆಕಾಂಕ್ಷ ಸಿಂಗ್ ಬಗ್ಗೆ ಅಚ್ಚರಿ ಟ್ವೀಟ್ ಮಾಡಿದ ಅಭಿಮಾನಿಗಳು'ಪೈಲ್ವಾನ್' ನೋಡಿ ನಟಿ ಆಕಾಂಕ್ಷ ಸಿಂಗ್ ಬಗ್ಗೆ ಅಚ್ಚರಿ ಟ್ವೀಟ್ ಮಾಡಿದ ಅಭಿಮಾನಿಗಳು

  ಆಕಾಂಕ್ಷ ಸಿಂಗ್ ಕುರಿತು ಅನೇಕರಿಗೆ ಗೊತ್ತಿಲ್ಲದ ವಿಚಾರ ಅಂದ್ರೆ, ಅವರಿಗೆ ಮದುವೆ ಆಗಿದೆ. ಕುನಾಲ್ ಸೇನ್ ಎಂಬುವವರ ಜೊತೆ ಆಕಾಂಕ್ಷ ಸಿಂಗ್ ಮದುವೆಯಾಗಿದ್ದು, ಸದ್ಯ ಮಾಲ್ಡೀವ್ಸ್ ನಲ್ಲಿ ಹಾಲಿ ಡೇ ಎಂಜಾಯ್ ಮಾಡ್ತಿದ್ದಾರೆ.

  ಮಾಲ್ಡೀವ್ಸ್ ಪ್ರವಾಸದಲ್ಲಿ 'ಪೈಲ್ವಾನ್' ರಾಣಿ ಆಕಾಂಕ್ಷ ಸಿಂಗ್ಮಾಲ್ಡೀವ್ಸ್ ಪ್ರವಾಸದಲ್ಲಿ 'ಪೈಲ್ವಾನ್' ರಾಣಿ ಆಕಾಂಕ್ಷ ಸಿಂಗ್

  ಪತಿಯ ಜೊತೆ ಮಾಲ್ಡೀವ್ಸ್ ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಒಂದು ಫೋಟೋ ಬಹಳ ವಿಶೇಷವಾಗಿ ಗಮನ ಸೆಳೆಯುತ್ತಿದೆ.

  ಸೈಕಲ್ ಮೇಲೆ ಕುಳಿತುಕೊಂಡಿರುವ ಆಕಾಂಕ್ಷ ಸಿಂಗ್ ತಮ್ಮ ಪತಿಗೆ ಚುಂಬಿಸುತ್ತಿರುವ ಫೋಟೋ ಸಖತ್ ವೈರಲ್ ಆಗಿದೆ. 'ನೆಮ್ಮದಿ ಬೇಕು ಎಂದಾಗ ನಮಗೆ ನೆಚ್ಚಿನ ಸ್ಥಳ ಇದು'' ಎಂದು ಆಕಾಂಕ್ಷ ಸಿಂಗ್ ಪೋಸ್ಟ್ ಮಾಡಿಕೊಂಡಿದ್ದಾರೆ.

  ಈಗಷ್ಟೇ ಪೈಲ್ವಾನ್ ಮುಗಿಸಿರುವ ಆಕಾಂಕ್ಷ ಸಿಂಗ್ ಮುಂದಿನ ಸಿನಿಮಾದ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಕನ್ನಡದಲ್ಲಿ ಮುಂದುರವರಿಯುತ್ತಾರಾ ಅಥವಾ ಈ ಹಿಂದಿನ ನಟಿಯರಂತೆ ಒಂದೇ ಸಿನಿಮಾ ಮಾಡಿ ಸ್ಯಾಂಡಲ್ ವುಡ್ ಗೆ ಗುಡ್ ಬೈ ಹೇಳ್ತಾರಾ ಕಾದುನೋಡಬೇಕಿದೆ.

  English summary
  Pailwaan actress Aakanksha Singh kissing photo viral on social media.
  Tuesday, October 8, 2019, 17:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X