ಮತ್ತೆ ದೆವ್ವದ ಬೆನ್ನತ್ತಿ ಹೋದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್

ಸಸ್ಪೆನ್ಸ್, ಥ್ರಿಲ್ಲರ್, ಹಾರರ್ ಚಿತ್ರಗಳಿಗೆ ಖ್ಯಾತಿ ಹೊಂದಿರುವ ನಿರ್ದೇಶಕ ಪಿ ವಾಸು 'ಆಯುಷ್ಮಾನ್ ಭವ' ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಬರ್ತಿದ್ದಾರೆ. 2016ರಲ್ಲಿ ಶಿವರಾಜ್ ಕುಮಾರ್ ಜೊತೆ 'ಶಿವಲಿಂಗ' ಮಾಡಿದ್ದ ಪಿ ವಾಸು, ಈಗ 'ಆಯುಷ್ಮಾನ್ ಭವ' ಮೂಲಕ ಮತ್ತೆ ಪ್ರೇಕ್ಷಕರನ್ನ ರಂಜಿಸಲು ಬರುತ್ತಿದ್ದಾರೆ.

ಎಲ್ಲರ ನಿರೀಕ್ಷೆಯಂತೆ 'ಆಯುಷ್ಮಾನ್ ಭವ' ಚಿತ್ರದಲ್ಲೂ ಹಾರರ್ ಟಚ್ ಇರೋದು ಪಕ್ಕಾ ಆಗಿದೆ. ಸದ್ಯ ಆಯುಷ್ಮಾನ್ ಭವ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಅಭಿಮಾನಿಗಳಲ್ಲಿ ಥ್ರಿಲ್ ಹೆಚ್ಚಿಸಿದೆ.

Recommended Video

ಶಿವರಾಜ್ ಕುಮಾರ್ ರವರ ಆನಂದ್ ಚಿತ್ರತಂಡದಿಂದ ಹೊರ ಬಂತು ವಿಶೇಷ ಸುದ್ದಿ | FILMIBEAT KANNADA

ಸಿನಿಮಾದಲ್ಲಿ ದೆವ್ವ ಇದೆ ಎನ್ನುವುದರ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ. ಆದರೆ, ಯಾರ ದೇಹದ ಮೇಲೆ ದೆವ್ವ ಬರುತ್ತೆ, ಯಾರು ದೆವ್ವ ಎಂಬುದು ಗೌಪ್ಯವಾಗಿದೆ. ಶಿವಲಿಂಗ ಸಿನಿಮಾದ ಬಳಿಕ ಮತ್ತೆ ಶಿವರಾಜ್ ಕುಮಾರ್ ಅವರು ದೆವ್ವದ ಬೆನ್ನತ್ತಿ ಹೋಗಿರುವುದು ಅಭಿಮಾನಿಗಳಲ್ಲಿ ಕೌತುಕ ಹೆಚ್ಚಿಸಿದೆ.

 Aayushmanbhava Teaser Released

ಶಿವರಾಜ್ ಕುಮಾರ್ ನಾಯಕನಾಗಿ ನಟಿಸಿದ್ದು, ರಚಿತಾ ರಾಮ್ ನಾಯಕಿಯಾಗಿದ್ದಾರೆ. ಶಿವಾಜಿ ಪ್ರಭು, ಸುಹಾಸಿನಿ ಮಣಿರತ್ನಂ, ಸಾಧುಕೋಕಿಲಾ, ರಂಗಾಯಣ ರಘು ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.

ಕನ್ನಡದ ಆಪ್ತಮಿತ್ರ, ತಮಿಳಿನಲ್ಲಿ ಚಂದ್ರಮುಖಿ, ತೆಲುಗಿನಲ್ಲಿ ನಾಗವಲ್ಲಿ, ದೃಶ್ಯ, ಶಿವಲಿಂಗ, ಆರಕ್ಷಕ ಅಂತಹ ಥ್ರಿಲ್ಲಿಂಗ್ ಹಾಗೂ ಹಾರರ್ ಚಿತ್ರಗಳನ್ನ ನಿರ್ದೇಶನ ಮಾಡಿದ ಖ್ಯಾತಿ ಹೊಂದಿದ್ದಾರೆ ಪಿ ವಾಸು. ಇನ್ನುಳಿದಂತೆ ದ್ವಾರಕೀಶ್ ನಿರ್ಮಾಣದ ಈ ಚಿತ್ರ ಈಗಾಗಲೇ ಶೂಟಿಂಗ್ ಮುಗಿಸಿ ತೆರೆಗೆ ಬರಲು ಸಜ್ಜಾಗಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ.

More from Filmibeat

English summary
Kannada actor shiva rajkumar starrer Aayushmanbhava movie teaser released. the movie directed by p vasu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X