For Quick Alerts
  ALLOW NOTIFICATIONS  
  For Daily Alerts

  ಅಂಬರೀಷ್ ಮಗನ ಹೆಸರಿನಲ್ಲೊಂದು ನಕಲಿ ಟ್ವಿಟ್ಟರ್ ಖಾತೆ.!

  By Bharath Kumar
  |
  Sumalatha Ambareesh says Abhisheka Ambreesh does not have any twiiter account | Oneindia Kannada

  ಪ್ರಸ್ತುತ ಸಮಾಜದಲ್ಲಿ ಸಿನಿಮಾ ತಾರೆಯರು, ರಾಜಕೀಯ ಗಣ್ಯರು ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಸಕ್ರೀಯರಾಗಿರುತ್ತಾರೆ. ತಮ್ಮ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿರಲು ಉತ್ತಮ ವೇದಿಕೆ ಇದು. ಹೀಗಿದ್ದರೂ, ಕೆಲವರು ಟ್ವಿಟ್ಟರ್, ಫೇಸ್ ಬುಕ್ ಬಳಸಲ್ಲ.

  ಆದ್ರೂ, ಅಂತವರ ಹೆಸರಿನಲ್ಲಿ, ಅವರದ್ದೇ ಫ್ರೋಫೈಲ್ ಫೋಟೋ ಹೊಂದಿರುವ ಟ್ವಿಟ್ಟರ್ ಹಾಗೂ ಫೇಸ್ ಖಾತೆಗಳು ಚಾಲ್ತಿಯಲ್ಲಿರುತ್ತೆ. ಅದನ್ನ ಅಭಿಮಾನಿಗಳನ್ನ ಕೂಡ ನಂಬಿ ಬಿಡುತ್ತಾರೆ. ಅವರು ಪೋಸ್ಟ್ ಮಾಡುವ ಸಂದೇಶವನ್ನ ನಂಬುತ್ತಾರೆ.

  ಈಗ ಇಂತಹದ್ದೇ ನಕಲಿ ಖಾತೆ ಅಂಬರೀಷ್ ಮಗನ ಹೆಸರಿನಲ್ಲಿರುವುದು ಕಣ್ಣಿಗೆ ಬಿದ್ದಿದೆ. ಆದ್ರೆ, ಸತ್ಯ ಸಂಗತಿ ಏನಪ್ಪಾ ಅಂದ್ರೆ, ಇದು ಅಂಬರೀಷ್ ಅವರ ಮಗನ ಖಾತೆಯಲ್ಲವಂತೆ. ಮುಂದೆ ಓದಿ.....

  ನನ್ನ ಮಗ ಟ್ವಿಟ್ಟರ್ ಖಾತೆ ಹೊಂದಿಲ್ಲ

  ನನ್ನ ಮಗ ಟ್ವಿಟ್ಟರ್ ಖಾತೆ ಹೊಂದಿಲ್ಲ

  ''ಅಭಿಷೇಕ್ ಅಂಬರೀಷ್ ಪ್ರೊಫೈಲ್ ಫೋಟೋ ಹಾಕಿಕೊಂಡಿರುವ ಟ್ವಿಟ್ಟರ್ ಖಾತೆಗಳನ್ನು ನಿರ್ಲಕ್ಷಿಸಿ. ಯಾಕೆಂದರೆ ಅಭಿಷೇಕ್ ಯಾವುದೇ ಟ್ವಿಟ್ಟರ್ ಖಾತೆಯನ್ನು ಹೊಂದಿಲ್ಲ'' ಎಂದು ಸುಮಲತಾ ಅಂಬರೀಷ್ ಸ್ಪಷ್ಟಪಡಿಸಿದ್ದಾರೆ.

  ಅಂಬರೀಶ್ ಮಗನ ಸಿನಿಮಾ ಎಂಟ್ರಿ ಬಗ್ಗೆ ಇದೀಗ ಬಂದ ಸುದ್ದಿ.!

  ಅದು ನಕಲಿ ಖಾತೆ

  ಅದು ನಕಲಿ ಖಾತೆ

  ಹಾಗಿದ್ರೆ, ಇಷ್ಟು ದಿನ ಅಭಿಷೇಕ್ ಅಂಬರೀಷ್ ಅವರದ್ದೇ ಎಂದು ನಂಬಿಕೊಂಡಿದ್ದ ಖಾತೆ ಅಂಬರೀಷ್ ಪುತ್ರನದ್ದು ಅಲ್ಲ. ಅದು ನಕಲಿ ಟ್ವಿಟ್ಟರ್ ಖಾತೆಯಾಗಿದೆ.

  ನಕಲಿ ಖಾತೆ ಬಗ್ಗೆ ಪ್ರಿಯಾಂಕಾ ಟ್ವೀಟ್ ಮಾಡಿದ್ದರು

  ನಕಲಿ ಖಾತೆ ಬಗ್ಗೆ ಪ್ರಿಯಾಂಕಾ ಟ್ವೀಟ್ ಮಾಡಿದ್ದರು

  ಉಪೇಂದ್ರ ಅವರ 'ಪ್ರಜಾಕೀಯ' ಕುರಿತಾಗಿ ಮಾಹಿತಿಗಳನ್ನ ನೀಡಲು ಅಧಿಕೃತ ಟ್ವಿಟ್ಟರ್ ಖಾತೆ ಇದೆ. ಆದ್ರೆ, ಅದೇ ಮಾದರಿಯಲ್ಲಿ, ಅದೇ ಹೆಸರು ಮತ್ತು ಅದೇ ಫ್ರೋಫೈಲ್ ನಲ್ಲಿ ಮತ್ತೊಂದು ಖಾತೆ ಇತ್ತು. ಇದನ್ನ ಗಮನಿಸಿದ ಪ್ರಿಯಾಂಕಾ ಉಪೇಂದ್ರ ಅವರು ಅದು ನಕಲಿ ಖಾತೆ ಎಂದು ಟ್ವೀಟ್ ಮಾಡಿದ್ದರು.

  ಹಲವು ಸೆಲೆಬ್ರಿಟಿಗಳ ನಕಲಿ ಖಾತೆ ಇದೆ

  ಹಲವು ಸೆಲೆಬ್ರಿಟಿಗಳ ನಕಲಿ ಖಾತೆ ಇದೆ

  ಇದು ಕೇವಲ ಅಂಬರೀಷ್ ಅವರ ಮಗ ಹಾಗೂ ಉಪೇಂದ್ರ ಪ್ರಜಾಕೀಯದ ನಕಲಿ ಖಾತೆ ಮಾತ್ರವಲ್ಲ, ಹಲವು ಸೆಲೆಬ್ರಿಟಿಗಳ ನಕಲಿ ಖಾತೆಗಳು ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿದೆ. ಹೀಗಾಗಿ, ವೆರಿಫೈ ಆಗಿರುವ ಅಧಿಕೃತ ಖಾತೆಗಳನ್ನ ಮಾತ್ರ ಫಾಲೋ ಮಾಡಿ.

  English summary
  My son abhishek does not have any twitter account says Sumalatha Ambareesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X