For Quick Alerts
  ALLOW NOTIFICATIONS  
  For Daily Alerts

  'ರಾಣಾ' ಚಿತ್ರೀಕರಣ ಸೆಟ್‌ನಲ್ಲಿ ಅವಘಡ: ಫೊಟೊಗ್ರಾಫರ್‌ಗೆ ಗಂಭೀರ ಗಾಯ

  |

  ಕನ್ನಡ ಸಿನಿಮಾ 'ರಾಣಾ'ದ ಚಿತ್ರೀಕರಣ ಸೆಟ್‌ನಲ್ಲಿ ನಡೆದಿರುವ ಅವಘಡದಿಂದಾಗಿ ಸ್ಟಿಲ್ ಫೊಟೊಗ್ರಾಫರ್‌ ಪಳನಿಗೆ ತೀವ್ರ ಗಾಯವಾಗಿದ್ದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜು ನಟಿಸುತ್ತಿರುವ 'ರಾಣಾ' ಸಿನಿಮಾದ ಚಿತ್ರೀಕರಣವು ಮಿನರ್ವಾ ಮಿಲ್ಸ್‌ನಲ್ಲಿ ನಡೆಯುತ್ತಿತ್ತು. ಚಿತ್ರೀಕರಣದ ವೇಳೆ ಸ್ಟಿಲ್ ಫೊಟೊಗ್ರಾಫರ್‌ ಪಳನಿ ತಲೆಯ ಮೇಲೆ ಕಬ್ಬಿಣದ ಕಂಬವೊಂದು ಬಿದ್ದು ತೀವ್ರ ಪೆಟ್ಟಾಗಿದೆ.

  ಕೂಡಲೇ ಪಳನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪಳನಿಗೆ ನಳಿಕೆ ಮೂಲಕ ಆಮ್ಲಜನಕ ಹಾಗೂ ಆಹಾರ ಸರಬರಾಜು ಮಾಡಲಾಗುತ್ತಿದೆ. ಪಳನಿಯನ್ನು ಸುಗುಣ ಆಸ್ಪತ್ರೆಯಲ್ಲಿ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

  'ರಾಣಾ' ಸಿನಿಮಾವನ್ನು ನಂದ ಕಿಶೋರ್ ನಿರ್ದೇಶನ ಮಾಡುತ್ತಿದ್ದು ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ಕೆಲವು ದಿನಗಳಷ್ಟೆ ಆಗಿದೆ. ಈ ನಡುವೆ ಇಂಥಹಾ ಅವಘಡ ಸಂಭವಿಸಿದೆ.

  ಪಳನಿಯ ಜೀವನಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರಾದರೂ ಚೇತರಿಕೆಗೆ ಹೆಚ್ಚು ದಿನಗಳು ಬೇಕಾಗಿದೆ ಎನ್ನಲಾಗಿದೆ.

  English summary
  Accident in Rana Kannada movie set. Still photographer of the movie Palani got injured and admitted to hospital.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X