Just In
Don't Miss!
- Sports
ಐಎಸ್ಎಲ್: ಕೊನೆಯಲ್ಲಿ ಗೌರವದೊಂದಿಗೆ ನಿರ್ಗಮಿಸಿದ ಒಡಿಶಾ
- Automobiles
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
- News
ಕಣಿವೆ ರಾಜ್ಯದಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ನಿಲ್ಲಿಸುವುದಿಲ್ಲ: ಭಾರತೀಯ ಸೇನೆ
- Lifestyle
ಮಾರ್ಚ್ ತಿಂಗಳಲ್ಲಿ ಹುಟ್ಟಿದವರು ಈ ವ್ಯಕ್ತಿತ್ವ ಹೊಂದಿರುತ್ತಾರೆ!!
- Finance
ಮತ್ತಷ್ಟು ಇಳಿಕೆಗೊಂಡ ಚಿನ್ನದ ಬೆಲೆ: ಫೆಬ್ರವರಿ 27ರ ಬೆಲೆ ಹೀಗಿದೆ
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಸ್ ನಾರಾಯಣ್ ಪುತ್ರ: ಸಿಎಂ ಸೇರಿ ಗಣ್ಯರು ಭಾಗಿ
ಕನ್ನಡದ ಹಿರಿಯ ನಿರ್ದೇಶಕ ಎಸ್ ನಾರಾಯಣ್ ಅವರ ಮನೆ ಮದುವೆ ಸಂಭ್ರಮದಿಂದ ಕೂಡಿದೆ. ನಟ, ನಿರ್ದೇಶಕ, ನಿರ್ಮಾಪಕ ಎಸ್ ನಾರಾಯಣ್ ಅವರ ಪುತ್ರ ಪವನ್ ಕುಮಾರ್ ಇಂದು ದಾಂಪತ್ಯ ಜೀವನ ಆರಂಭಿಸಿದ್ದಾರೆ.
ಫೆಬ್ರವರಿ 21ರ ಬೆಳಗ್ಗೆ 7.30 ರಿಂದ 8.30 ಗಂಟೆಗೆ ನಡೆದ ಶುಭ ಲಗ್ನದಲ್ಲಿ ಪವಿತ್ರಾ ಅವರನ್ನು ಪವನ್ ಕುಮಾರ್ ವರಿಸಿದ್ದಾರೆ. ನಂತರ 10 ಗಂಟೆಗೆ ಆರತಕ್ಷತೆ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿತ್ತು.
ಖ್ಯಾತ ನಿರ್ದೇಶಕ ಎಸ್ ನಾರಾಯಣ್ ಪುತ್ರ ಈಗ ನಿರ್ದೇಶಕ
ಎಸ್ ನಾರಾಯಣ್ ಅವರ ಪುತ್ರನ ವಿವಾಹಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವರು ಗಣ್ಯರು ಆಗಮಿಸಿದ್ದರು. ಸಚಿವ ಗೋಪಾಲಯ್ಯ ಸಹ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಚಿತ್ರರಂಗದಿಂದಲೂ ಅನೇಕ ಗಣ್ಯರು ಪವನ್ ಕುಮಾರ್ ಮದುವೆಗೆ ಆಗಮಿಸಿ ನವಜೋಡಿಗೆ ಶುಭಹಾರೈಸಿದ್ದರು. ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ರಾಕ್ ಲೈನ್ ವೆಂಕಟೇಶ್, ನಟ ಶರಣ್, ಶ್ರೀಮುರಳಿ, ಸುಧಾರಾಣಿ, ಮಾಳವಿಕಾ ಅವಿನಾಶ್, ಮುಖ್ಯಮಂತ್ರಿ ಚಂದ್ರು, ಅಮೂಲ್ಯ ಅವರು ಆರತಕ್ಷತೆಯಲ್ಲಿ ಭಾಗಿಯಾಗಿದ್ದರು.
ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಟ ಆದಿತ್ಯ, ಸುಂದರ್ ರಾಜ್, ಪ್ರಮಿಳಾ ಜೋಶಾಯ್ ಹಾಗೂ ಹಿರಿಯ ನಟ ದೇವರಾಜ್ ಸೇರಿದಂತೆ ಹಲವರು ಎಸ್ ನಾರಾಯಣ್ ಪುತ್ರನ ಮದುವೆಯಲ್ಲಿ ಪಾಲ್ಗೊಂಡಿದ್ದರು.
ಅಂದ್ಹಾಗೆ, ಪವನ್ ಕುಮಾರ್ 'ರತ್ನ' ಎಂಬ ಸಿನಿಮಾದಲ್ಲಿ ನಾಯಕನಟನಾಗಿ ನಟಿಸಿದ್ದರು. ಅದಾದ ಬಳಿಕ ನವಮಿ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು.