»   » ಧ್ರುವ ಸರ್ಜಾಗೆ ಬರ್ತ್ ಡೇ ಸಂಭ್ರಮ: 'ಪೊಗರು' ಫಸ್ಟ್ ಲುಕ್ ಸೂಪರ್.!

ಧ್ರುವ ಸರ್ಜಾಗೆ ಬರ್ತ್ ಡೇ ಸಂಭ್ರಮ: 'ಪೊಗರು' ಫಸ್ಟ್ ಲುಕ್ ಸೂಪರ್.!

Posted By:
Subscribe to Filmibeat Kannada
Action prince dhruva sarja birthday celebration | Filmibeat Kannada

'ಅದ್ಧೂರಿ'ಯಾಗಿ ಎಂಟ್ರಿ ಕೊಟ್ಟು 'ಬಹದ್ದೂರ್' ಆಗಿ ಗೆದ್ದು 'ಭರ್ಜರಿ' ಆಗಿ ಮುನ್ನಗ್ಗುತ್ತಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 'ಭರ್ಜರಿ' ಚಿತ್ರದ ಯಶಸ್ಸಿನ ಬೆನ್ನಲ್ಲೆ ತಮ್ಮ ಬರ್ತ್ ಡೇಯನ್ನ ಅಭಿಮಾನಿಗಳ ಜೊತೆ ಆಚರಿಸಿಕೊಂಡಿದ್ದಾರೆ ಧ್ರುವ.

ಬೆಂಗಳೂರಿನ ಕೆ.ಆರ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಸೆಲೆಬ್ರೆಟ್ ಮಾಡಿಕೊಂಡ ನಟ ಧ್ರುವ, ಕರ್ನಾಟಕ ಕಲಾರಸಿಕರಿಗೆ ಹೃದಯಪೂರ್ವಕ ಧನ್ಯವಾದಗಳನ್ನ ತಿಳಿಸಿದರು.

ಇನ್ನು ಧ್ರುವ ಬರ್ತ್ ಡೇ ವಿಶೇಷವಾಗಿ, 'ಪೊಗರು' ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ. ಹಾಗಿದ್ರೆ, ಧ್ರುವ ಬರ್ತ್ ಡೇ ಸೆಲೆಬ್ರೆಷನ್ ಹೇಗಿತ್ತು? 'ಪೊಗರು' ಫಸ್ಟ್ ಲುಕ್ ಹೇಗಿದೆ ಅಂತ ಮುಂದೆ ನೋಡಿ.....

29ನೇ ವಸಂತಕ್ಕೆ ಕಾಲಿಟ್ಟ ಧ್ರುವ

ಕನ್ನಡದ ಯುವ ನಟ ಧ್ರುವ ಸರ್ಜಾ ಇಂದು (ಅಕ್ಟೋಬರ್ 6) 29ನೇ ವಸಂತಕ್ಕೆ ಕಾಲಿಟ್ಟಿದ್ದು, ಮನೆಯವರು ಜೊತೆ ಮತ್ತು ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡರು.

ಧ್ರುವ ಸರ್ಜಾ ಚಿತ್ರಕ್ಕೆ ಶ್ರುತಿ ಹಾಸನ್ ಜೋಡಿಯಂತೆ.!

ಕೇಕ್ ಕತ್ತರಿಸಿ ಸಂಭ್ರಮಿಸಿದ ಧ್ರುವ ಫ್ಯಾನ್ಸ್

ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನ ಆಚರಿಸಿದ ಧ್ರುವ ಸರ್ಜಾ ಫ್ಯಾನ್ಸ್ ಬಗೆ ಬಗೆಯ ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ತಡರಾತ್ರಿಯಿಂದಲೆ ಧ್ರುವ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿ ಬರ್ತ್ ಡೇ ಆಚರಿಸಿದರು.

'ಪೊಗರು' ಫಸ್ಟ್ ಲುಕ್ ರಿಲೀಸ್

ಇನ್ನು ಧ್ರುವ ಸರ್ಜಾ ಬರ್ತ್ ಡೇ ವಿಶೇಷವಾಗಿ ತಮ್ಮ ಮುಂದಿನ ಸಿನಿಮಾ ಪೊಗರು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ನಂದಕಿಶೋರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಸೆಲ್ಫಿ ಕ್ಲಿಕ್ಕಿಸಿ ಖುಷಿ ಪಟ್ಟ ಅಭಿಮಾನಿಗಳು

ನಟ ಧ್ರುವ ಸರ್ಜಾ ಅವರ ಜೊತೆ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಂಡು ಅಭಿಮಾನಿಗಳು ಫುಲ್ ಖುಷಿಯಾದರು. ನಿವಾಸದ ಬಳಿ ಬಂದಿದ್ದ ಎಲ್ಲ ಅಭಿಮಾನಿಗಳಿಗೂ ಮಾತನಾಡಿಸಿ ಧ್ರುವ ಕೂಡ ಖುಷಿ ಪಟ್ಟರು.

'ಭರ್ಜರಿ' ಕಲೆಕ್ಷನ್ ಮಾಡಿದ ಬಹದ್ದೂರ್ ಗಂಡು: ಗಲ್ಲಾ ಪೆಟ್ಟಿಗೆಯಲ್ಲಿ ಸಿಕ್ಕಾಪಟ್ಟೆ ಸದ್ದು

ಧ್ರುವಗೆ ವಿಶ್ ಮಾಡಿದ ಚಿರು

ಧ್ರುವ ಸರ್ಜಾ ಅವರ ಹುಟ್ಟುಹಬಕ್ಕೆ ಸಹೋದರ ಚಿರಂಜೀವಿ ಸರ್ಜಾ ಶುಭಕೋರಿದ್ದು, ತಮ್ಮನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.

English summary
Kannada Actor, Action Prince Dhruva sarja Celebrating his 29th Birthday with Fans (October 6th).
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada