twitter
    For Quick Alerts
    ALLOW NOTIFICATIONS  
    For Daily Alerts

    ರಾಮಮಂದಿರ ನಮಗೆ ಬೇಕಿಲ್ಲ ಎಂದ ನಟ ಚೇತನ್, ಇಟ್ಟರು ಬೇರೆಯದ್ದೇ ಬೇಡಿಕೆ

    By ರಾಮನಗರ ಪ್ರತಿನಿಧಿ
    |

    ನಮಗೆ ರಾಮಮಂದಿರದ ಅಗತ್ಯವಿಲ್ಲ. ದೇವಸ್ಥಾನಗಳು ನಮ್ಮ ಬದುಕನ್ನು ಕಟ್ಟಿಕೊಡುವುದಿಲ್ಲ. ರಾಮದೇವರ ಬೆಟ್ಟವನ್ನು ದಕ್ಷಿಣ ಅಯೋಧ್ಯೆ ಮಾಡಲು ಸರ್ಕಾರ ಅನುಮತಿ ನೀಡಬಾರದು. ಇದು ಕೇವಲ ಪ್ರಚಾರಕ್ಕಾಗಿ ಮಾಡುತ್ತಿರುವ ಗಿಮಿಕ್ ಅಷ್ಟೇ. ರಾಮಮಂದಿರ ನಿರ್ಮಾಣ ಬಿಟ್ಟು ಮೊದಲು ಜನರಿಗೆ ಮೂಲಭೂತ ಸೌಕರ್ಯ ನೀಡಿ ಎಂದು ನಟ ಹಾಗೂ ಹೋರಾಟಗಾರ ಚೇತನ್ ರಾಜಕಾರಣಿಗಳ ವಿರುದ್ಧ ಹರಿಹಾಯ್ದರು.

    ಇಂದು ರಾಮನಗರದ ಜಿಲ್ಲಾಧಿಕಾರಿಗಳ ಸಂಕೀರ್ಣದ ಮುಂದೆ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ‌ ಪಾಲ್ಗೊಂಡು ಮಾತನಾಡಿದ ನಟ ಚೇತನ್, ರಾಮದೇವರ ಬೆಟ್ಟವನ್ನು ದಕ್ಷಣದ ಅಯೋಧ್ಯೆಯನ್ನಾಗಿ ಅಭಿವೃದ್ಧಿ ಮಾಡುವ ಮೊದಲು ದಲಿತ ಕಾಲೋನಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ನಟ ಚೇತನ್ ಆಗ್ರಹಿಸಿದರು.

    ತಾಲ್ಲೂಕಿನ ಕೂನಮುದ್ದನಹಳ್ಳಿ ಗ್ರಾಮಸ್ಥರು ನಟ ಚೇತನ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಸಂಕೀರ್ಣದ ಮುಂದೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಕಳೆದ ನೂರು ವರ್ಷಗಳಿಂದ ವಾಸ ಮಾಡುತ್ತಿರುವ 60 ಕ್ಕೂ ಹೆಚ್ಚು ದಲಿತ ಕುಟುಂಬಗಳಿಗೆ ಮೂಲ ಭೂತಸೌಕರ್ಯಗಳಾದ ಸ್ಮಶಾನ, ವಸತಿ ಹಕ್ಕು ಪತ್ರ ಹಾಗೂ ಬಯಲು ಶೌಚಾಲಯದಿಂದ ಮುಕ್ತಿ ನೀಡುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದರು.

    ಕೇಂದ್ರ ಬಜೆಟ್‌ ಬಗ್ಗೆ ಚೇತನ್ ವ್ಯಂಗ್ಯ

    ಕೇಂದ್ರ ಬಜೆಟ್‌ ಬಗ್ಗೆ ಚೇತನ್ ವ್ಯಂಗ್ಯ

    ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಅನ್ನು ಶ್ರೀಮಂತರ ಬಜೆಟ್ ಎಂದು ನಟ ಚೇತನ್ ವ್ಯಂಗ್ಯವಾಡಿದರು. ಕೇಂದ್ರದ ಬಜೆಟ್ ಶ್ರೀಮಂತರ ಪರವಾದ ಬಜೆಟ್. ಈ ಬಜೆಟ್ ನಲ್ಲಿ ಜನಸಾಮಾನ್ಯರಿಗೆ ಯಾವುದೇ ಅನುಕೂಲ ಇಲ್ಲ. ತೆರಿಗೆ ವಿನಾಯಿತಿಯಿಂದ ಬಡವರಿಗೆ ಉಪಯೋಗವಿಲ್ಲ, 7 ಲಕ್ಷ ರೂಪಾಯಿ ವರೆಗೆ ತೆರಿಗೆ ವಿನಾಯಿತಿ ನೀಡಿದ್ದಾರೆ, ಅಂದರೆ ತಿಂಗಳಿಗೆ 60 ಸಾವಿರ ಸಂಬಳ ಪಡೆಯುತ್ತಿರುವ 2% ಜನರಿಗೆ ತೆರಿಗೆ ಯಾಕಿಲ್ಲ, ಎಂದು ಪ್ರಶ್ನೆ ಮಾಡಿದರು.

    ಶ್ರೀಮಂತರ ಬಜೆಟ್ ಎಂದು ನಟ ಚೇತನ್ ವಾಗ್ದಾಳಿ

    ಶ್ರೀಮಂತರ ಬಜೆಟ್ ಎಂದು ನಟ ಚೇತನ್ ವಾಗ್ದಾಳಿ

    ತಿಂಗಳಿಗೆ ‌‌60‌ ಸಾವಿರ ವೇತನ ಪಡೆಯುವ 2% ಜನಕ್ಕೆ ತೆರಿಗೆ ಹಾಕದೆ ಯಾವ ರೀತಿಯಲ್ಲಿ ಸರ್ಕಾರಗಳು ಜನ ಕಲ್ಯಾಣ ಕಾರ್ಯಕ್ರಮ ನೀಡುತ್ತವೆ. ಸರ್ಕಾರಗಳು ಶ್ರೀಮಂತರ ಪರವಾದ ಸರ್ಕಾರಗಳು, ಶ್ರೀಮಂತರನ್ನು ಹೆಚ್ಚು ಹೆಚ್ವು ಶ್ರೀಮಂತರನ್ನಾಗಿ ಮಾಡುತ್ತಿವೆ ಹಾಗಾಗಿ ಬಡವ ಮತ್ತಷ್ಟು ಬಡವನಾಗುತ್ತಿದ್ದಾನೆ. ಬಂಡವಾಳ ಶಾಹಿ ಸರ್ಕಾರ ನೀಡಿರುವ ಬಜೆಟ್ ಶ್ರೀಮಂತರ ಬಜೆಟ್ ಎಂದು ನಟ ಚೇತನ್ ವಾಗ್ದಾಳಿ ನಡೆಸಿದರು.

    ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದ ಚೇತನ್

    ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದ ಚೇತನ್

    ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ನಟ ಚೇತನ್ ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ನಟ, ಚಿಂತಕ ಚೇತನ. ನಾನು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ‌ ಎನ್ನುವ ಮೂಲಕ ವದಂತಿಗಳಿಗೆ ತೆರೆ ಎಳೆದರು. ಸಮಾನತೆ ಪರವಾದ ಹೋರಾಟ ಮಾಡುವುದಷ್ಟೇ ನಮ್ಮ ಕೆಲಸ. ಬುದ್ದ, ಬಸವ, ಅಂಬೇಡ್ಕರ್ ತತ್ವಕ್ಕೆ ನಮ್ಮ ಬೆಂಬಲ. ರಾಜ್ಯವನ್ನಾಳಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರು ರಾಜಕೀಯ ಪಕ್ಷಗಳು ಜನರಿಗೆ ನ್ಯಾಯ ಒದಗಿಸಿಲ್ಲ. ಅಲ್ಲದೇ ದೆಹಲಿಯ ಬಂದಿರುವ ಪಕ್ಷ ಕೂಡ ದಲಿತರ ಪರವಿಲ್ಲ ತಮ್ಮ ಅಭಿವೃದ್ಧಿಯಷ್ಟೇ ಅವರುಗಳ ಹಿಡನ್ ಅಜೆಂಡ ಎಂದು ಆರೋಪಿಸಿದರು.

    English summary
    Actor and activist Chethan Ahimsa said people does not want Rama Mandir they want proper house to live. He participated in a protest in Ramanagara.
    Thursday, February 2, 2023, 21:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X