»   » ದರ್ಶನ್ ವಿಚಾರದಲ್ಲಿ 'ಡೆಡ್ಲಿ ಆದಿತ್ಯ' ಟಾಂಗ್ ಕೊಟ್ಟಿದ್ದು ಯಾರಿಗೆ?

ದರ್ಶನ್ ವಿಚಾರದಲ್ಲಿ 'ಡೆಡ್ಲಿ ಆದಿತ್ಯ' ಟಾಂಗ್ ಕೊಟ್ಟಿದ್ದು ಯಾರಿಗೆ?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ನಡುವಿನ ಸ್ನೇಹ ಸಮರ, ಕನ್ನಡ ಇಂಡಸ್ಟ್ರಿಯಲ್ಲಿ ಟಾಕ್ ಆಫ್ ದಿ ಟೌನ್ ಆಗಿದೆ. ಇದೀಗ, ಇವರಿಬ್ಬರ ಗೆಳತನದಲ್ಲಿ ಮೂಡಿರುವ ಬಿರುಕಿಗೆ ಸಂಬಂಧಪಟ್ಟಂತೆ ನಟ ಆದಿತ್ಯ ಪರೋಕ್ಷವಾಗಿ ಕೆಲವರಿಗೆ ಟಾಂಗ್ ಕೊಟ್ಟಿದ್ದಾರೆ.[ದರ್ಶನ್ ಪ್ರಶ್ನೆಗೆ ಹುಬ್ಬಳಿಯಲ್ಲಿ ಘರ್ಜಿಸಿದ ಸುದೀಪ್!]

ದರ್ಶನ್ ಮತ್ತು ಸುದೀಪ್ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಆದಿತ್ಯ, ''ದರ್ಶನ್ ಅವರ ಹೆಸರನ್ನ ಬಳಸಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದಿತ್ಯ ಮಾಡಿರುವ ಟ್ವೀಟ್.....

''ಸ್ವಲ್ಪ ಜನ ತಮ್ಮ ಪಬ್ಲಿಸಿಟಿಗೋಸ್ಕರ ದರ್ಶನ್ ಅವರ ಹೆಸರನ್ನ ಬಳಿಸಿಕೊಳ್ಳುತ್ತಿದ್ದಾರೆ. ಅದರ ಬದಲು ಪ್ರಚಾರಕ್ಕೆ ಬೇರೆ ಕೆಲಸ ಮಾಡಿ. ದರ್ಶನ್ ಅವರ ಶ್ರಮಕ್ಕೆ ಬೆಲೆ ಕೊಡಿ'' ಎಂದು ಪ್ರತಿಕ್ರಿಯಿಸಿದ್ದಾರೆ.[ದರ್ಶನ್ ಒಡಲೊಳಗಿಂದ ದಿಢೀರ್ ಅಂತ ಸಿಡಿದ ಐದು ಸಿಡಿಗುಂಡುಗಳಿವು.!]

ಈ ಟ್ವೀಟ್ ಯಾರಿಗೆ ಅನ್ವಯವಾಗುತ್ತೆ!

ಆದಿತ್ಯ ಅವರ ಈ ಟ್ವೀಟ್ ನ್ನ ಸೂಕ್ಷ್ಮವಾಗಿ ಗಮನಿಸಿದ್ರೆ, ದರ್ಶನ್ ಅವರ ಹೆಸರನ್ನ ನಿಜಕ್ಕೂ ಪ್ರಚಾರಕ್ಕಾಗಿ ಬಳಸಿಕೊಳ್ಳುವವರು ಇದ್ದಾರಾ ಎಂಬ ಅನುಮಾನ ಮೂಡುತ್ತಿದೆ. ಅದೇನೇ ಇರಲಿ, ದರ್ಶನ್ ಮತ್ತು ಸುದೀಪ್ ನಡುವಿನ ಈ ಸಮರದಿಂದ ಇವರಿಬ್ಬರ ಮಧ್ಯೆ ಕಾಣದ ಕೈಗಳ ಕೈವಾಡ ಇರಬಹುದಾ ಎಂಬ ಅನುಮಾನ ಮತ್ತಷ್ಟು ದಟ್ಟವಾಗುತ್ತಿದೆ.[ದರ್ಶನ್ ಕಿವಿಗೆ ಪುಂಗಿ ಊದೋರು ಇದ್ದಾರಾ.? ಕಿಚ್ಚ-ದಚ್ಚು ಮಹಾಬಿರುಕಿಗೆ ಕಾರಣ ಇದೇನಾ.?]

ಆದಿತ್ಯ ಮತ್ತು ದರ್ಶನ್ ಬೆಸ್ಟ್ ಫ್ರೆಂಡ್!

ಅಂದ್ಹಾಗೆ, ನಟ ಆದಿತ್ಯ ಮತ್ತು ದರ್ಶನ್ ಆತ್ಮೀಯ ಗೆಳೆಯರು. ಒಬ್ಬರ ಸಿನಿಮಾಗೆ ಮತ್ತೊಬ್ಬರು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಈ ಹಿಂದೆ 'ಸ್ನೇಹನಾ ಪ್ರೀತಿನಾ' ಚಿತ್ರದಲ್ಲಿ ಒಟ್ಟಾಗಿ ಅಭಿನಯಿಸಿದ್ದ ಇಬ್ಬರು ಈಗ 'ಚಕ್ರವರ್ತಿ' ಚಿತ್ರದಲ್ಲೂ ಒಂದಾಗಿದ್ದಾರೆ.

ದರ್ಶನ್ ವರ್ಸಸ್ ಸುದೀಪ್ ಮಧ್ಯೆ ಏನಿದು!

'ಮೆಜೆಸ್ಟಿಕ್' ಚಿತ್ರಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಸುದೀಪ್ ಅವರ ಮಧ್ಯೆ ಮನಸ್ತಾಪ ಉಂಟಾಗಿದೆ ಎನ್ನಲಾಗುತ್ತಿದ್ದು, ಇದನ್ನ ನಟ ದರ್ಶನ್ ಅವರು ಬಹಿರಂಗವಾಗಿ, ತಮ್ಮ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದರು. 'ಮೆಜೆಸ್ಟಿಕ್' ಚಿತ್ರಕ್ಕೆ ದರ್ಶನ್ ಅವರನ್ನ, ಸುದೀಪ್ ಸೂಚಿಸಿದ್ದರು ಎಂಬ ಹೇಳಿಕೆಯನ್ನ ಸಾಬೀತು ಪಡಿಸಿ ಎಂದು ಸುದೀಪ್ ಗೆ ದರ್ಶನ್ ಚಾಲೆಂಜ್ ಮಾಡಿದ್ದರು.

English summary
Kannada Actor Adithya Tweet on Darshan-Sudeep Controversy and He Says, '' For some people using Darshans name gives them publicity...look for other means of publicity and give credit to darshans hard work''

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada