»   » ಯಶ್ ಸಿನಿಮಾದಿಂದ 'ಡೆಡ್ಲಿ' ಆದಿತ್ಯ ಔಟ್ ಆಗಿದ್ದೇಕೆ?

ಯಶ್ ಸಿನಿಮಾದಿಂದ 'ಡೆಡ್ಲಿ' ಆದಿತ್ಯ ಔಟ್ ಆಗಿದ್ದೇಕೆ?

Posted By:
Subscribe to Filmibeat Kannada

ನಿರ್ಮಾಪಕ ಕೆ.ಮಂಜು ಅವರು ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಅವರನ್ನು ಮತ್ತೊಮ್ಮೆ ತೆರೆಮೇಲೆ ಒಂದಾಗಿಸುತ್ತಾರೆ ಎಂದು ನಾವು ನಿಮಗೆ ಹೇಳಿದ್ವಿ. ಮಾತ್ರವಲ್ಲದೇ, ನಟ ಆದಿತ್ಯ ಮತ್ತು ಯಶ್ ಅವರನ್ನು ಒಂದಾಗಿಸಲು ನಿರ್ಮಾಪಕರು ಪ್ರಯತ್ನ ಪಟ್ಟಿದ್ದರು.

ಆದರೆ ಇನ್ನೂ ಹೆಸರಿಡದ ಈ ಚಿತ್ರದಿಂದ ಇದೀಗ ಆದಿತ್ಯ ಅವರು ಔಟ್ ಆಗಿದ್ದಾರೆ, ಅನ್ನೋದು ಸದ್ಯದ ಮಾಹಿತಿ. ಆದ್ರೆ ಆದಿತ್ಯ ಅವರು ಯಾಕೆ ಈ ಸಿನಿಮಾದಿಂದ ಹೊರಬಂದ್ರು ಅನ್ನೋದಕ್ಕೆ ಕಾರಣ ಇಲ್ಲಿದೆ.[ಮತ್ತೆ ಮೋಡಿ ಮಾಡಲಿರುವ 'ಮಿ.ಅಂಡ್ ಮಿಸಸ್' ರಾಮಾಚಾರಿ ಜೋಡಿ]

Actor Aditya replaced from Yash-K Manju Movie

'ಕೇಸ್ ನಂಬರ್ 18/9' ಚಿತ್ರದ ಖ್ಯಾತಿಯ ನಿರ್ದೇಶಕ ಮಹೇಶ್ ರಾವ್ ಅವರು ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ಈ ಚಿತ್ರಕ್ಕೆ ನಾಯಕನಾದರೆ 'ಎದೆಗಾರಿಕೆ' ಖ್ಯಾತಿಯ ನಟ ಆದಿತ್ಯ ಅವರು ಯಶ್ ಎದುರು ಪ್ರಮುಖ ಪಾತ್ರವೊಂದರಲ್ಲಿ ನಟಿಸುವುದು ಎಂದು ನಿರ್ಧರಿಸಲಾಗಿತ್ತು.

ಅಂದಹಾಗೆ ಈ ಸಿನಿಮಾದ ಶೂಟಿಂಗ್ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ನಡೆಯಬೇಕಿತ್ತು. ಇದಕ್ಕಾಗಿ ಆದಿತ್ಯ ಅವರ ಲುಕ್ ನಲ್ಲಿ ತುಂಬಾ ವಿಭಿನ್ನ ಪ್ರಯತ್ನಗಳನ್ನು ಮಾಡಲಾಗಿತ್ತು.[ಚಿತ್ರಗಳು: ಯಾರ್ಯಾರು ಎಲ್ಲೆಲ್ಲಿ ಹೊಸ ವರ್ಷ ಆಚರಿಸಿಕೊಂಡರು]

Actor Aditya replaced from Yash-K Manju Movie

ಈ ಪಾತ್ರಕ್ಕಾಗಿ ನಟ ಆದಿತ್ಯ ಅವರು ಗಡ್ಡ, ಮೀಸೆಯನ್ನು ಬೆಳೆಸಬೇಕಂತೆ. ಆದರೆ ಆದಿತ್ಯ ಅವರು ಇದೇ ಸಮಯದಲ್ಲಿ 'ನಾನೇ ನೆಕ್ಸ್ಟ್ ಸಿ.ಎಂ' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಎರಡೆರಡು ಚಿತ್ರಕ್ಕೆ ಬೇರೆ ಬೇರೆ ಲುಕ್ ಗಳನ್ನು ಒಂದೇ ಸಮಯದಲ್ಲಿ ನಿಭಾಯಿಸುವುದು ಕಷ್ಟಸಾಧ್ಯ.

ನಾವು ಕೃತಕ ಗಡ್ಡ ಮೀಸೆಯೊಂದಿಗೆ ಮುಂದುವರೆಯಲು ಸಾಧ್ಯವಿಲ್ಲ ಆದ್ದರಿಂದ ಈ ದೃಢ ನಿರ್ಧಾರಕ್ಕೆ ಬರಬೇಕಾಯಿತು ಎಂದು ನಿರ್ದೇಶಕ ಮಹೇಶ್ ತಿಳಿಸಿದ್ದಾರೆ. ಹೀಗಾಗಿ ಅನಿವಾರ್ಯ ಕಾರಣದಿಂದ 'ರೆಬೆಲ್' ನಟ ಆದಿತ್ಯ ಕೆ.ಮಂಜು ಅವರ ಚಿತ್ರತಂಡದಿಂದ ಹೊರನಡೆದಿದ್ದಾರೆ.

Actor Aditya replaced from Yash-K Manju Movie

ಇನ್ನು ಈ ಚಿತ್ರಕ್ಕೆ ಬರೀ ಕೋ-ನಟ ಮಾತ್ರವಲ್ಲದೇ, ಸಿನಿಮಾಟೋಗ್ರಾಫರ್ ಕೂಡ ಕೊನೆಯ ಕ್ಷಣಗಳಲ್ಲಿ ಬದಲಾಗಿದ್ದು, ಸುಧಾಕರ್ ರಾಜ್ ಮಾಡಬೇಕಿದ್ದ ಕೆಲಸವನ್ನು ಇದಿಗ ಮಲಯಾಳಂ ಸಿನಿಮಾಟೋಗ್ರಾಫರ್ ಆಂಡ್ರ್ಯೂ ಬಾಬು ಅವರು ಮಾಡುತ್ತಿದ್ದಾರೆ. ಸದ್ಯಕ್ಕೆ ಇನ್ನೂ ಯಾರು ಮತ್ತೊಬ್ಬ ನಟ ಎಂದು ತಿಳಿದುಬಂದಿಲ್ಲ.

ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮ ದಿನವಾದ ಮಾರ್ಚ್ 8 ರಂದು ಈ ಹೊಸ ಸಿನಿಮಾದ ಟೈಟಲ್ ಲಾಂಚ್ ಮಾಡುವುದಾಗಿ ನಿರ್ದೇಶಕ ಮಹೇಶ್ ರಾವ್ ಅವರು ತಿಳಿಸಿದ್ದಾರೆ.

English summary
Yash’s upcoming project with director Mahesh Rao is experiencing a few changes before it goes on the floors from mid-January. Aditya, who had a prominent role opposite Yash, had to drop out of the film at the last minute.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada