»   » ನಟ ಅಂಬರೀಶ್ ಆರೋಗ್ಯದ ಬಗ್ಗೆ ಮುಚ್ಚಿಟ್ಟ ಸತ್ಯಗಳು

ನಟ ಅಂಬರೀಶ್ ಆರೋಗ್ಯದ ಬಗ್ಗೆ ಮುಚ್ಚಿಟ್ಟ ಸತ್ಯಗಳು

By: ಜೀವನರಸಿಕ
Subscribe to Filmibeat Kannada
<ul id="pagination-digg"><li class="next"><a href="/news/what-actually-happend-to-actor-ambareesh-082173.html">Next »</a></li></ul>

ನಾವೂ, ನೀವು ಅಂದುಕೊಂಡ ಹಾಗೆ ವಿಕ್ರಂ ಆಸ್ಪತ್ರೆಯ ವೈದ್ಯರು ಪ್ರತಿನಿತ್ಯ ಕೊಡುತ್ತಿದ್ದ ಹೆಲ್ತ್ ರಿಪೋರ್ಟ್ನ ಹಾಗೆ ರೆಬೆಲ್ ಸ್ಟಾರ್ ಆರೋಗ್ಯ ಸ್ಥಿತಿ ಇದ್ದಿದ್ರೆ ಅವರನ್ನ ಸಿಂಗಪೂರ್ ಗೆ ಕರೆದುಕೊಂಡು ಹೋಗೋ ಸ್ಥಿತಿ ಇರ್ತಿರಲಿಲ್ಲ. ಆದರೆ ಅಂಬಿಯ ಆರೋಗ್ಯ ಸ್ಥಿತಿ ನಿಜಕ್ಕೂ ಸುಧಾರಿಸಿಲ್ಲ.

ಅಂಬರೀಶ್, ಸುಮಲತಾ ಮಗ ಅಭಿಷೇಕ್ ಜೊತೆ ಮಾತ್ನಾಡಿದ್ರು, ಕಣ್ಸನ್ನೇ ಮಾಡಿದ್ರು ಅಪ್ಪಿಕೊಂಡ್ರು ಅಂತೆಲ್ಲಾ ವೈದ್ಯರು ಹೇಳಿದ್ರು. ಆದರೆ ವೈದ್ಯರು ಹೇಳಿದ್ದು ಸತ್ಯ ಆಗಿದ್ದರೆ ಅವ್ರನ್ನ ಸಿಂಗಾಪುರಕ್ಕೆ ಕರೆದುಕೊಂಡು ಹೋಗೋ ಅವಶ್ಯಕಥೆಯೇ ಇರಲಿಲ್ಲ.

Actor Ambareesh health on behind closed doors

ಅಂಬರೀಷ್ ಆಸ್ಪತ್ರೆ ಸೇರಿದ ನಂತರ ವಿಕ್ರಮ್ ಆಸ್ಪತ್ರೆ ವೈದ್ಯರು ನಿಜಕ್ಕೂ ಏನನ್ನಾದ್ರೂ ಮುಚ್ಚಿಟ್ರಾ? ಬೆಳಿಗ್ಗೆ ವೆಂಟಿಲೇಟರ್ ತೆಗೆದಿದ್ದೇವೆ ಅಂತ ಹೇಳಿ ಮಧ್ಯಾಹ್ನದ ವೇಳೆಗೆ ಮತ್ತೆ ವೆಂಟಿಲೇಟರ್ ಹಾಕಿದ್ದೀವಿ ಅಂತ ಹೇಳಿದ್ಯಾಕೆ? ದೆಹಲಿಯಿಂದ ವೈದ್ಯರನ್ನ ಕರೆಸಿದ್ಯಾಕೆ? ರಾತ್ರೋ ರಾತ್ರಿ ಅಂಬರೀಶ್ ರನ್ನ ಸಿಂಗಪುರ್ ಗೆ ಕಳಿಸಿದ್ಯಾಕೆ? ಈ ಎಲ್ಲ ಅನುಮಾನಗಳಿಗೆ ಸ್ಪಷ್ಟ ಉತ್ತರ ನಾವ್ ಕೊಡ್ತಿದ್ದೀವಿ.

ರೆಬೆಲ್ ಸ್ಟಾರ್ ಅಂಬಿ ವಿಕ್ರಂ ಆಸ್ಪತ್ರೆಗೆ ಫೆ.21ರಂದು ಶುಕ್ರವಾರ ರಾತ್ರಿ 9:30ಕ್ಕೆ ದಾಖಲಾಗಿದ್ದು ತೀವ್ರ ಉಸಿರಾಟದ ತೊಂದರೆಯಿಂದ. ಅದಕ್ಕೆ ಕಾರಣ ಶ್ವಾಸಕೋಶದಲ್ಲಿ ತುಂಬಿಕೊಂಡಿದ್ದ ನೀರು.

ಇದರಿಂದಾಗಿ ಅಂಬಿಗೆ ರಾತ್ರಿ ನಿದ್ರೆಯ ವೇಳೆ ಉಸಿರಾಡೋದು ಕಷ್ಟವಾಗ್ತಿತ್ತು. ಮೂರು ದಿನಗಳಿಂದ ಜ್ವರ ಅಂಬಿಯನ್ನ ಬಾಧಿಸುತ್ತಿತ್ತು. ಕಿಡ್ನಿಯಲ್ಲಿ ಕೂಡ ಸಮಸ್ಯೆ ಇದ್ದಿದ್ದು ಅಂಬಿಯ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಡೋಕೆ ಕಾರಣವಾಯ್ತು

<ul id="pagination-digg"><li class="next"><a href="/news/what-actually-happend-to-actor-ambareesh-082173.html">Next »</a></li></ul>
English summary
What actually happened to Rebel Star Amabareesh when he undergoes treatment at Vikram hospital, Bangalore. Ever wonder what goes on behind closed doors at Vikram Hospital. Here is an inside story on Ambareesh healthc condition.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada