ಕಲಿಯುಗ ಕರ್ಣನಿಗೆ ಲಂಡನ್ ನಲ್ಲಿ ಸನ್ಮಾನ

Ambareesh
ಇದೇ ಅಕ್ಟೋಬರ್ 23 ಮತ್ತು 24ರಂದು ನಡೆದ ಯುರೋಪ್ ವಿಶ್ವಕನ್ನಡ ಸಮ್ಮೇಳನ - 2011 ದಲ್ಲಿ ಅಂಬರೀಷ್ ದಂಪತಿಗಳನ್ನು ಸನ್ಮಾನಿಸಲಾಗಿತ್ತು. ಲಂಡನ್ ಕನ್ನಡಿಗರ ಸಂಘಟನೆ ಈ ಕಾರ್ಯಕ್ರಮ ಆಯೋಜಿಸಿತ್ತು.

ಲಂಡನ್ ನಗರದಲ್ಲಿ ವೈಭವಯುತವಾಗಿ ನಡೆದ ಈ ಸಮ್ಮೇಳನದಲ್ಲಿ ಯುರೋಪ್ ಖಂಡದಿಂದ ಸಾವಿರಾರು ಕನ್ನಡಿಗರು ಭಾಗವಹಿಸಿದ್ದರು. ಅಂಬರೀಷ್ ಅಲ್ಲದೆ ರಮ್ಯಾ, ಹಂಸಲೇಖ, ಶ್ರೀನಾಥ್ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು, ಶಾಲು ಹೊದೆಸಿ, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಂಬರೀಷ್, ನೀವು ನಮ್ಮ ಮೇಲೆ ತೋರಿದ ಪ್ರೀತಿಗೆ ಇಡೀ ಚಿತ್ರರಂಗ ಅಭಾರಿಯಾಗಿದೆ. ಕನ್ನಡ ಚಿತ್ರರಂಗದ ಏಳಿಗೆಗೆ ರಾಜಣ್ಣ, ವಿಷ್ಣು, ಪುಟ್ಟಣ್ಣ ಮುಂತಾದವರ ಕೊಡುಗೆ ಅಪಾರ. ಈ ಸನ್ಮಾನ ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಕನ್ನಡ ಚಿತ್ರಗಳನ್ನು ಕರ್ನಾಟಕದಲ್ಲಿ ಬಿಡುಗಡೆಯಾದಂತೆ ವಿಶ್ವದೆಲ್ಲದೆ ಏಕಕಾಲದಲ್ಲಿ ಬಿಡುಗಡೆ ಮಾಡಲು ಅಗತ್ಯ ಪ್ರಯತ್ನ ಮಾಡುತ್ತೇವೆ.

ನಿಮ್ಮ ಪ್ರೀತಿ ವಿಶ್ವಾಸ ನಮ್ಮ ಮೇಲೆ ಹೀಗೆ ಇರಲಿ. ಇತ್ತೀಚಿಗೆ ಕೆಲವೊಂದು ಘಟನೆಗಳು ನಮ್ಮ ಚಿತ್ರರಂಗದಲ್ಲಿ ನಡೆಯಬಾರದಿತ್ತು. ಈ ಬಗ್ಗೆ ನಮಗೂ ಬಹಳಾ ವಿಷಾದವಿದೆ. ಇಂತಹ ಘಟನೆಗಳಿಂದ ನಮ್ಮ ಚಿತ್ರರಂಗದ ಮೇಲೆ ಏಟು ಬೀಳುತ್ತದೆ ಎಂದು ಅರಿತ್ತಿದ್ದೇವೆ. ಮತ್ತೆ ಮತ್ತೆ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸುತ್ತೇವೆ ಎಂದು ಅಂಬರೀಷ್ ಹೇಳಿಕೆ ನೀಡಿದ್ದಾರೆ.

More from Filmibeat

English summary
Rebel star Ambarish and Sumalatha Ambarish honored by Europe Vishva Kannada Sammela - 2011 in London. Grand function organized by London Kannada Organization on October 23 and 24. Along with Ambarish, other film stars Ramya, Shrinath, Hamsalekha also honored.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X