twitter
    For Quick Alerts
    ALLOW NOTIFICATIONS  
    For Daily Alerts

    ಸಮಾಜಮುಖಿ ಕೆಲಸ ಮಾಡುತ್ತಿರುವ ನಟ ಅನಿರುದ್ಧ; ಸ್ವಚ್ಛತೆಗಾಗಿ ಅವರ ಮುಂದಿರುವ 11 ಯೋಜನೆಗಳಿವು

    |

    ಇತ್ತೀಚಿಗೆ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದ್ದರು. ಅನಿರುದ್ಧ ಪೋಸ್ಟ್ ಗೆ ಬಿಬಿಎಂಪಿ ಅಧಿಕಾರಿಗಳು ತಕ್ಷಣಕ್ಕೆ ಪ್ರತಿಕ್ರಿಯಿಸಿ, ಎರಡು ಬಡಾವಣೆಗಳು ಸ್ವಚ್ಛವಾಗುವಂತೆ ಮಾಡಿದ್ದರು.

    ಇದೀಗ ಅನಿರುದ್ಧ ಬಿಬಿಎಂಪಿ ಸ್ಪೆಷಲ್ ಕಮಿಷನರ್ ರಣದೀಪ್ಅವರನ್ನು ಭೇಟಿಯಾಗಿದ್ದಾರೆ. ಈ ಸಮಯದಲ್ಲಿ ಅವರ ಜೊತೆ ಸಾಕಷ್ಟು ವಿಚಾರಗಳನ್ನು ಚರ್ಚಿಸಿದ್ದಾರೆ. ರಣದೀಪ್ ಜೊತೆ ಚರ್ಚಿಸಿದ ಹಲವು ವಿಚಾರಗಳನ್ನು ಅನಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    Actor Anirudh Jatkar Meets BBMP Special Commissioner For Discuss With Waste Management

    1) ಸಲಹೆಗಾರರ ಮಂಡಳಿಯನ್ನ ಸ್ಥಾಪಿಸಿ ಆ ಮಂಡಳಿಯಲ್ಲಿ ಸಂಶೋಧಕರು, ಪಟ್ಟಣ ಯೋಜಕರು, ಸಮಾಜ ಸೇವಕರು, ಸಾಮಾಜಿಕ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ಕೈಗಾರಿಕೋದ್ಯಮಿಗಳು, ಮಲ್ಟಿ ನ್ಯಾಷನಲ್ ಕಂಪನಿಗಳು, ಮತ್ತು ಇತರ ಗಣ್ಯರು ಇರುತ್ತಾರೆ.

    2) ತೆರೆದ ಕಾಲುವೆಗಳನ್ನ ಮುಚ್ಚಿ ಗುಜರಾತ್‌ ಮಾದರಿಯ ವಿದ್ಯುಚ್ಛಕ್ತಿ ಉತ್ಪಾದನೆಗೆ ಸೌರಫಲಕಗಳನ್ನ ಬಳಸುವುದು ಮತ್ತು ಎರಡೂ ಬದಿಯಲ್ಲಿ ಗೋಡೆಗಳನ್ನ ಕಟ್ಟಿ ಅವುಗಳ ಮೇಲೆ ವರ್ಟಿಕಲ್ ಗಾರ್ಡನಿಂಗ್ ಮಾಡುವುದು.

    3) ಮುಚ್ಚಿರೋ ಕಸ ಸಂಗ್ರಹಿಸೋ ಆಧುನಿಕ ವಾಹನ, ಅಭಿ‌ವೃದ್ಧಿಗೊಂಡಿರೋ ದೇಶಗಳಲ್ಲಿ ಇರೋಹಾಗೆ.

    ವಿಷ್ಣುವರ್ಧನ್ ಹಾಡಿಗೆ ದನಿಗೂಡಿಸಿದ ನಟ ಉಪೇಂದ್ರ-ಅನಿರುದ್ಧ್ವಿಷ್ಣುವರ್ಧನ್ ಹಾಡಿಗೆ ದನಿಗೂಡಿಸಿದ ನಟ ಉಪೇಂದ್ರ-ಅನಿರುದ್ಧ್

    4) ಸ್ವಚ್ಛ ಮುಚ್ಚಿರೋ (ಒಣ ಮತ್ತು ಹಸಿ) ಕಸದ ಪೆಟ್ಟಿಗೆಗಳನ್ನ ಅಲ್ಲಲ್ಲಿ ಇರಿಸುವುದು, ಇವುಗಳು ಕಸ ಸಂಗ್ರಹಿಸೋ ಆಧುನಿಕ ವಾಹನಗಳಿಂದ ಎತ್ತಲಾಗುವುದು.

    5) ಸಿಸಿಟಿವಿ ಗಳನ್ನ ಕಪ್ಪುಚುಕ್ಕೆ ಇರುವಂತಹ ಸ್ಥಳಗಳಲ್ಲಿ ಹಾಕುವುದು.

    6) ಪೌರಕಾರ್ಮಿಕರಿಗೆ ಸುರಕ್ಷಿತ ಕ್ರಮಗಳನ್ನ, ಕೈಗವಸುಗಳನ್ನ ಮತ್ತು ಬೂಟುಗಳನ್ನು ಒದಗಿಸುವುದು.

    7) ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು.

    8) 'ಆರ್ಯವರ್ಧನ್ ಯೋಜನೆ' - ಕಸ ಕೊಳ್ಳುವುದು. ಇದು ಆದಲ್ಲಿ ಜನಗಳಿಗೆ ಕಸದಲ್ಲಿ ಕಾಸು ಕಾಣುವುದು ಮತ್ತು ಅಲ್ಲಲ್ಲಿ ಹಾಕುವುದನ್ನು ನಿಲ್ಲಿಸಬಹುದು.

    9) ಒಳ್ಳೆ ರಸ್ತೆಗಳು, ವೈಜ್ಞಾನಿಕ ಹಂಪ್ ಗಳು ಮತ್ತು ಎರಡೂ ಬದಿಯಲ್ಲಿ ಫುಟ್‌ಪಾಥ್‌ಗಳು.

    10) ರೋಟರಿ, ಲಯನ್ಸ ತರಹದ ಸಾಮಾಜಿಕ ಸಂಸ್ಥೆಗಳಿಗೆ ಮತ್ತು ಮಲ್ಟಿ ನ್ಯಾಷನಲ್ ಕಂಪನಿಗಳಿಗೆ ಬಿ. ಬಿ.ಎಂ.ಪಿ ಯ ಜೊತೆಗೂಡಿ ಕೆಲಸ ಮಾಡಲು ಆಹ್ವಾಸಿವುದು.

    11) ರಸ್ತೆಯಲ್ಲಿ ಕಸ ಹಾಕಿದವರಿಗೆ ಅತಿಯಾದ ದಂಡ ಮತ್ತು ಕಠಿಣ ಶಿಕ್ಷೆ ವಿಧಿಸುವುದು.

    Recommended Video

    6 ತಿಂಗಳು ಲಾಕ್ ಡೌನ್ ನಲ್ಲಿ ಶಿವಣ್ಣ ಏನ್ ಮಾಡಿದ್ರು ಗೊತ್ತಾ? | Shivanna | Filmibeat Kannada

    ತಮ್ಮ ಸಹಭಾಗದಿಂದ, ಹಾರೈಕೆ, ಆಶೀರ್ವಾದದಿಂದ ಮುಂಬರುವ ದಿನಗಳಲ್ಲಿ ಸ್ವಚ್ಛ, ವೈಜ್ಞಾನಿಕ, ಶಕ್ತಿ ಉತ್ಪಾದನೆ ಮಾಡುವಂತಹ, ಹಸಿರು, ಸುರಕ್ಷಿತ ದೇಶ ನಾವು ನೋಡಬಹುದು. ಅಲ್ಲದೆ ತಮ್ಮಲ್ಲಿ ಕಳಕಳಿಯ ವಿನಂತಿ. ತಮ್ಮಲ್ಲಿ ಯಾರಾದರು ಸಂಶೋಧನೆ ಮಾಡಿದ್ದಾಗಲಿ ಅಥವಾ ಈ ಕ್ಷೆತ್ರದಲ್ಲಿ ಅನುಭವ ಇದ್ದಲ್ಲಿ ತಮ್ಮ ಅನಸಿಕೆಗಳನ್ನ, ಕಲ್ಪನೆಗಳನ್ನ ಇಲ್ಲಿ ಹಂಚಿಕೊಳ್ಳಿ ಎಂದು ಅನಿರುದ್ಧ ಹೇಳಿದ್ದಾರೆ.

    English summary
    Actor anirudh jatkar meets bbmp special commissioner for discuss with waste Management.
    Saturday, November 21, 2020, 15:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X