For Quick Alerts
  ALLOW NOTIFICATIONS  
  For Daily Alerts

  ಅರ್ಜುನ್ ಸರ್ಜಾ ಹನುಮ ದೇವಾಲಯ ನಿರ್ಮಾಣ

  By Rajendra
  |

  ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಸದ್ಯಕ್ಕೆ ಕನ್ನಡದಲ್ಲಿ 'ಅಭಿಮನ್ಯು' ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರವನ್ನು ಅದ್ದೂರಿಯಾಗಿ ಆರಂಭಿಸಿದ ಅರ್ಜುನ್ ಸರ್ಜಾ ಚಿತ್ರವನ್ನೂ ಅಷ್ಟೇ ಅದ್ದೂರಿಯಾಗಿ ತೆರೆಗೆ ತರುತ್ತಿದ್ದಾರೆ. ಈ ಚಿತ್ರದ ನಾಯಕಿ ಸುರ್ವಿನ್ ಚಾವ್ಲಾ. ಇನ್ನೊಬ್ಬ ನಾಯಕಿ ಶಾರ್ಲೆಟ್‌ ಕ್ಲೇರ್‌.

  ಅರ್ಜುನ್ ಸರ್ಜಾ ಅವರ ಕುಟುಂಬಿಕರಿಗೆ ಹನುಮಂತನ ಬಗ್ಗೆ ಎಲ್ಲಿಲ್ಲದ ಭಕ್ತಿ ಭಾವಗಳಿವೆ. ಈಗ ಚೆನ್ನೈನಲ್ಲಿ ಅರ್ಜುನ್ ರಾಮನ ಬಂಟ ಹನುಮನ ದೇವಾಲಯವನ್ನು ನಿರ್ಮಿಸುತ್ತಿದ್ದಾರೆ. ಚೆನ್ನೈನ ಗೇರುಗಂಬಕ್ಕಂ ಪ್ರದೇಶದಲ್ಲಿರುವ ಅವರದೇ ಸೈಟ್ ನಲ್ಲಿ ಈ ದೇವಾಯಲ ತಲೆ ಎತ್ತಲಿದೆ.

  ಸುಮಾರು 35 ಅಡಿ ಎತ್ತರದ ಹನುಮನ ವಿಗ್ರಹವನ್ನು ನಿರ್ಮಿಸಲಾಗುತ್ತಿದೆ. ಆಲಯ ನಿರ್ಮಾಣಕ್ಕಾಗಿ ಸುಮಾರು 27 ಟನ್ ಕಬ್ಬಿಣವನ್ನು ಬಳಸಿಕೊಳ್ಳುತ್ತಿರುವುದು ವಿಶೇಷ. ಒಟ್ಟಾರೆಯಾಗಿ ಅರ್ಜುನ್ ಸರ್ಜಾ ಅವರ ಕನಸಿನ ಕೂಸು ಇದು.

  ತಮ್ಮ ಚಿತ್ರಗಳ ನಿರ್ಮಾಣದ ಜೊತೆಗೆ ಅರ್ಜುನ್ ಸರ್ಜಾ ಅವರು ಆಲಯ ನಿರ್ಮಾಣದ ಜವಾಬ್ದಾರಿಯನ್ನೂ ಸ್ವತಃ ತಾವೇ ಹೊತ್ತಿದ್ದಾರೆ. ಅವರೇ ನಿಂತು ಕೆಲಸ ಮಾಡಿಸುತ್ತಿರುವುದು ಹನುಮಂತನ ಮೇಲಿರುವ ಭಕ್ತಿಗೆ ನಿದರ್ಶನ.

  ಈ ಬಗ್ಗೆ ಮಾತನಾಡಿರುವ ಅರ್ಜುನ್ ಸರ್ಜಾ, "ನನ್ನ ಕನಸಿನ ಪ್ರಾಜೆಕ್ಟ್ ನನಸಾಗುತ್ತಿದೆ. ಈಗಷ್ಟೇ ಒಂದು ರೂಪ ಪಡೆಯುತ್ತಿದ್ದು ಶೀಘ್ರದಲ್ಲೇ ನಿಜವಾಗಲಿದೆ. ಶೀಘ್ರದಲ್ಲೇ ಮಹಾಕುಂಭಾಭಿಷೇಕ ಹಮ್ಮಿಕೊಂಡಿದ್ದೇವೆ. ಆಲಯ ನಿರ್ಮಾಣದ ಬಳಿಕ ಭಕ್ತಾದಿಗಳಿಗೆ ಪೂಜೆಗೆ ಅನುವು ಮಾಡಿಕೊಡುತ್ತೇವೆ" ಎಂದಿದ್ದಾರೆ. (ಏಜೆನ್ಸೀಸ್)

  English summary
  Action king Arjun Sarja is busy constructing a temple for his God in his own site at Gerugambakkam in Chennai. A 35 feet statue of the deity was sculpted exclusively for the temple. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X