Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಕ್ಕು ನಗಿಸಿದ ಹಾಸ್ಯ ಪ್ರತಿಭೆಗೆ ಕಣ್ಣೀರ ವಿದಾಯ: ಮಣ್ಣಲ್ಲಿ ಮಣ್ಣಾದ ಬುಲೆಟ್ ಪ್ರಕಾಶ್
ತಮ್ಮ ದೈತ್ಯ ದೇಹ, ವಿಶಿಷ್ಟ ಮ್ಯಾನರಿಸಂ ಹಾಸ್ಯದಿಂದ ಜನಪ್ರಿಯರಾಗಿದ್ದ ನಟ ಬುಲೆಟ್ ಪ್ರಕಾಶ್ ಅವರ ದೇಹ ಮಂಗಳವಾರ ಮಣ್ಣಲ್ಲಿ ಮಣ್ಣಾಯಿತು. ಬಹು ಅಂಗಾಂಗ ವೈಫಲ್ಯದಿಂದ ಸೋಮವಾರ ಮೃತಪಟ್ಟ ಬುಲೆಟ್ ಪ್ರಕಾಶ್ ಅಂತ್ಯಸಂಸ್ಕಾರ ಬೆಂಗಳೂರಿನ ಹೆಬ್ಬಾಳದ ರುದ್ರಭೂಮಿಯಲ್ಲಿ ನಡೆಯಿತು.
Recommended Video
ಲಾಕ್‌ಡೌನ್ ಕಾರಣದಿಂದ ಬುಲೆಟ್ ಪ್ರಕಾಶ್ ಅವರ ಮೃತದೇಹವನ್ನು ಸೋಮವಾರ ಅವರ ಕುಟುಂಬದವರಿಗೆ ಒಪ್ಪಿಸಿರಲಿಲ್ಲ. ಮಂಗಳವಾರ ಬೆಳಿಗ್ಗೆ ರಾಮಯ್ಯ ಆಸ್ಪತ್ರೆಯಿಂದ ಮೃತದೇಹವನ್ನು ಅವರ ಕುಟುಂಬದ ಸದಸ್ಯರು ಪಡೆದುಕೊಂಡು ಭುವನೇಶ್ವರಿ ನಗರದಲ್ಲಿನ ನಿವಾಸಕ್ಕೆ ಕೊಂಡೊಯ್ದರು. ಈ ಸಂದರ್ಭದಲ್ಲಿ ನಟ ದುನಿಯಾ ವಿಜಯ್ ಅವರ ಜತೆಗಿದ್ದರು. 44 ವರ್ಷದ ಮಹತ್ವಾಕಾಂಕ್ಷಿ ನಟ ತಮ್ಮ ನೂರಾರು ಕನಸುಗಳನ್ನು ಇಲ್ಲಿಯೇ ಬಿಟ್ಟು ನಡೆದರು. ತಮ್ಮ ಸಿನಿಮಾ ಪಯಣದಲ್ಲಿ ಕಚಗುಳಿ ಇರಿಸಿದ್ದ ನಟನಿಗೆ ಅಭಿಮಾನಿಗಳು ಕಣ್ಣೀರಿನ ವಿದಾಯ ಹೇಳಿದರು. ಮುಂದೆ ಓದಿ.
ಕೊನೆಯ
ಬಾರಿಗೆ
ನೋಡಲು
ಸಾಧ್ಯವಿಲ್ಲ
ಎನ್ನುವ
ದುಃಖ
ಕಾಡುತ್ತಿದೆ:
ಬುಲೆಟ್
ಸಾವಿಗೆ
ಕಂಬನಿ
ಮಿಡಿದ
ಗಣ್ಯರು

ಕುಟುಂಬದವರು, ಆಪ್ತರು ಭಾಗಿ
ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲದ ಕಾರಣ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಅಂತಿಮ ದರ್ಶನ ಪಡೆದುಕೊಳ್ಳಲು ಅವಕಾಶವಿರಲಿಲ್ಲ. ಹೀಗಾಗಿ ಅವರ ಆಪ್ತರು ಹಾಗೂ ಕುಟುಂಬದವರು ಮಾತ್ರವೇ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ 12 ಗಂಟೆ ವೇಳೆಗೆ ಹೆಬ್ಬಾಳದ ರುದ್ರಭೂಮಿಗೆ ಮೃತದೇಹವನ್ನು ತರಲಾಯಿತು.

ಮಗ ರಕ್ಷಕ್‌ರಿಂದ ಅಂತಿಮ ವಿಧಿ ವಿಧಾನ
ಲಾಕ್‌ಡೌನ್ ನಡುವೆಯೂ ಸ್ಥಳೀಯರು ಮತ್ತು ಬುಲೆಟ್ ಪ್ರಕಾಶ್ ಅಭಿಮಾನಿಗಳು ರುದ್ರಭೂಮಿಯತ್ತ ಧಾವಿಸಿದ್ದರು. ಆದರೆ ಪೊಲೀಸರು ಅವರನ್ನು ತಡೆದು ಕುಟುಂಬದವರಿಗೆ ಮಾತ್ರ ಅಂತಿಮ ವಿಧಿ ವಿಧಾನದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದರು. ಬುಲೆಟ್ ಪ್ರಕಾಶ್ ಮಗ ರಕ್ಷಕ್ ಸೇನ್ ಮಡಿವಾಳ ಸಂಪ್ರದಾಯದಂತೆ ಅಂತ್ಯಸಂಸ್ಕಾರದ ಪ್ರಕ್ರಿಯೆಗಳನ್ನು ನೆರವೇರಿಸಿದರು.
ಬುಲೆಟ್
ಪ್ರಕಾಶ್
ಪ್ರಾಣಕ್ಕೆ
ಕುತ್ತು
ತಂದಿತಾ
ಆ
ಒಂದು
ಆಪರೇಷನ್

ಸಾವಿರಾರು ಗೆಳೆಯರಿದ್ದರೂ ಯಾರೂ ಇಲ್ಲ
ಕುಟುಂಬದ ಹತ್ತಿರದ ಸಂಬಂಧಿಕರಿಗೆ ಮಾತ್ರ ಬುಲೆಟ್ ಪ್ರಕಾಶ್ ಅಂತಿಮದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಸಾ.ರಾ. ಗೋವಿಂದು, ಉಮೇಶ್ ಬಣಕಾರ್ ಸೇರಿದಂತೆ ಚಿತ್ರರಂಗದ ಕೆಲವೇ ಮಂದಿ ಭಾಗವಹಿಸಿದ್ದರು. ಚಿತ್ರರಂಗದಲ್ಲಿ ಸಾವಿರಾರು ಒಡನಾಡಿಗಳನ್ನು ಹೊಂದಿದ್ದರೂ ಅವರಾರಿಗೂ ತಮ್ಮ ಗೆಳೆಯನ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ.

ಶವಪೆಟ್ಟಿಗೆ ಏರಿ ಕುಳಿತ ಮುದ್ದಿನ ನಾಯಿ
ತನ್ನನ್ನು ಸಾಕಿದ ಯಜಮಾನನ ಅಗಲುವಿಕೆಗೆ ಬುಲೆಟ್ ಪ್ರಕಾಶ್ ಅವರ ಮುದ್ದಿನ ನಾಯಿ ಟೈಸನ್ ಕೂಡ ಕಣ್ಣೀರಿಟ್ಟಿತು. ಶವಪೆಟ್ಟಿಗೆ ಏರಿ ಕುಳಿತ ಟೈಸನ್ಅನ್ನು ಕಂಡು ನೆರೆದವರು ಮತ್ತಷ್ಟು ಭಾವುಕರಾದರು. ಬುಲೆಟ್ ಪ್ರಕಾಶ್ ಈ ಹಿಂದೆ ಆಸ್ಪತ್ರೆ ಸೇರಿದ್ದಾಗ ಸುಮಾರು 150 ದಿನ ಟೈಸನ್, ಅವರಿಲ್ಲದ ಕೋಣೆಗೆ ಹೋಗಿರಲಿಲ್ಲ ಎಂಬುದನ್ನು ಬುಲೆಟ್ ಪ್ರಕಾಶ್ ಅವರೇ ಹೇಳಿಕೊಂಡಿದ್ದರು. ಶವಪೆಟ್ಟಿಗೆ ಏರಿ ತನ್ನ ಒಡೆಯ ಏಳುತ್ತಾರೆ ಎಂದು ಕಾದಿದ್ದ ಮೂಕ ಪ್ರಾಣಿಯನ್ನು ಕೊನೆಗೆ ಬಲವಂತವಾಗಿ ಕೆಳಗಿಳಿಸಬೇಕಾಯಿತು.