Don't Miss!
- News DK Shivakumar: ಕಾಂಗ್ರೆಸ್ ಭವಿಷ್ಯದಲ್ಲಿ ನನ್ನನ್ನು ಸಿಎಂ ಮಾಡಲಿದೆ
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿರಿಯಾನಿ ವ್ಯಾಪಾರ ಶುರು ಮಾಡಿದ ನಟ ಚಂದನ್; ಸಾಥ್ ನೀಡಿದ ಶಿವಣ್ಣ
ಸ್ಯಾಂಡಲ್ ವುಡ್ ನಟ ಚಂದನ್ ಕುಮಾರ್ ಸದ್ಯ ನಟನೆ ಜತೆಗೆ ಹೊಸ ವ್ಯಾಪಾರ ಶುರು ಮಾಡಿದ್ದಾರೆ. ಸಿನಿಮಾ, ಧಾರಾವಾಹಿ ಅಂತ ಬ್ಯುಸಿ ಇರುವ ಚಂದನ್ ಇದೀಗ ಬಿರಿಯಾನಿ ವ್ಯಾಪಾರ ಶುರು ಮಾಡಿದ್ದಾರೆ.
ಹೌದು, ಚಂದನ್ ಬಿರಿಯಾನಿ ಹೋಟೆಲ್ ಪ್ರಾರಂಭ ಮಾಡಿದ್ದಾರೆ. ಬೆಂಗಳೂರಿನ ಸಹಕಾರ ನಗರದಲ್ಲಿ ಬಿರಿಯಾನಿ ಹೋಟೆಲ್ ಪ್ರಾರಂಭ ಮಾಡಿದ್ದು, ಇಂದು ಉದ್ಘಾಟನೆ ಮಾಡಿದ್ದಾರೆ. ಬಿರಿಯಾನಿ ಹೋಟೆಲ್ ಪ್ರಾರಂಭ ಮಾಡಿರುವ ಬಗ್ಗೆ ನಟ ಚಂದನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಡಾರ್ಲಿಂಗ್ ಕೃಷ್ಣ 'Shrikrishnagmail.com'ನಲ್ಲಿ ನಟ ಚಂದನ್ ಕುಮಾರ್
ವಿಶೇಷ ಎಂದರೆ ಚಂದನ್ ಹೊಸ ವ್ಯಾಪಾರಕ್ಕೆ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಥ್ ನೀಡಿದ್ದಾರೆ. ಹೌದು, ಚಂದನ್ ಬಿರಿಯಾನಿ ಹೋಟೆಲ್ ಅನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಉದ್ಘಾಟನೆ ಮಾಡಿ, ಒಳ್ಳೆಯದಾಗಲಿ ಎಂದು ವಿಶ್ ಮಾಡಿದ್ದಾರೆ.
ಚಂದನ್ ಕುಮಾರ್ ಸದ್ಯ ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಪ್ರೇಮ ಬರಹ ಸಿನಿಮಾ ಬಳಿಕ ಚಂದನ್ ಡಾರ್ಲಿಂಗ್ ಕೃಷ್ಣ ಅಭಿನಯದ [email protected] ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಚಂದನ್ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ನಾಗಶೇಖರ್ ಆಕ್ಷನ್ ಕಟ್ ಹೇಳಿದ್ದಾರೆ.
Recommended Video
ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಂದನ್ ಕುಮಾರ್ ಸಿನಿಮಾ ರಿಲೀಸ್ ದೆ ಎದುರು ನೋಡುತ್ತಿದ್ದಾರೆ. ಮುಂದಿನ ವರ್ಷ ಈ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ. ವಿಶೇಷ ಎಂದರೆ ಈ ಸಿನಿಮಾ ಕನ್ನಡದ ಜೊತೆಗೆ ಮಲಯಾಳಂನಲ್ಲೂ ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ನಾಯಕಿಯಾಗಿ ಭಾವನಾ ಕಾಣಿಸಿಕೊಂಡಿದ್ದಾರೆ.