Just In
Don't Miss!
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Automobiles
ವಿನೂತನ ಫೀಚರ್ಸ್ಗಳೊಂದಿಗೆ ಬಿಡುಗಡೆಯಾಗಲಿದೆ ಫೋರ್ಸ್ ಗೂರ್ಖಾ ಎಸ್ಯುವಿ
- News
ಲಾಲು ಪ್ರಸಾದ್ ಆರೋಗ್ಯ ಮತ್ತಷ್ಟು ಗಂಭೀರ: ರಾಂಚಿಯಿಂದ ದೆಹಲಿಗೆ ಏರ್ಲಿಫ್ಟ್
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಟಿ ಶ್ರುತಿಯನ್ನು ರಿಯಲ್ ಸೂಪರ್ ಸ್ಟಾರ್ ಎಂದಿದ್ದೇಕೆ ಚಂದನ್ ಕುಮಾರ್?
ಸ್ಯಾಂಡಲ್ ವುಡ್ ನಟ ಚಂದನ್ ಕುಮಾರ್ ಸದ್ಯ ನಟನೆ ಜತೆಗೆ ಹೊಸ ವ್ಯಾಪಾರ ಶುರು ಮಾಡಿದ್ದಾರೆ. ಸಿನಿಮಾ, ಧಾರಾವಾಹಿ ಅಂತ ಬ್ಯುಸಿ ಇರುವ ಚಂದನ್ ಇದೀಗ ಬಿರಿಯಾನಿ ಹೋಟೆಲ್ ಶುರು ಮಾಡಿದ್ದಾರೆ. ಚಂದನ್ ಕುಮಾರ್ ಹೊಸ ವ್ಯಪಾರಕ್ಕೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಹಿರಿಯ ನಟಿ ಶ್ರುತಿ ಸಾಥ್ ನೀಡಿದ್ದಾರೆ.
ಇತ್ತೀಚಿಗಷ್ಟೆ ಚಂದನ್ ಅವರ ಹೊಸ ಬಿರಿಯಾನಿ ಹೋಟೆಲ್ ಅದ್ದೂರಿಯಾಗಿ ಉದ್ಘಾಟನೆಯಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಹಿರಿಯ ನಟಿ ಶ್ರುತಿ ಬಿರಿಯಾನಿ ಹೋಟೆಲ್ ಅನ್ನು ಉದ್ಘಾಟನೆ ಮಾಡಿ ಚಂದನ್ ಗೆ ವಿಶ್ ಮಾಡಿದ್ದಾರೆ. ಹೋಟೆಲ್ ಉದ್ಘಾಟನೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನಟಿ ಶ್ರುತಿ ಜೊತೆಗಿನ ಫೋಟೋವನ್ನು ಶೇರ್ ಮಾಡಿ ಚಂದನ್ ಭಾವುಕ ಸಾಲುಗಳನ್ನು ಬರೆದಿದ್ದಾರೆ.
ಬಿರಿಯಾನಿ ವ್ಯಾಪಾರ ಶುರು ಮಾಡಿದ ನಟ ಚಂದನ್; ಸಾಥ್ ನೀಡಿದ ಶಿವಣ್ಣ

'ಬಿಗ್ ಬಾಸ್' ದಿನಗಳಿಂದ ಚಂದನ್-ಶ್ರುತಿ ಆಪ್ತರು
ನಟ ಚಂದನ್ ಕುಮಾರ್ ಮತ್ತು ನಟಿ ಶ್ರುತಿ ಬಿಗ್ ಬಾಸ್ ದಿನಗಳಿಂದ ತುಂಬಾ ಪರಿಚಿತರು. ಬಿಗ್ ಮನೆಯಲ್ಲಿ ಬೆಳೆದ ಸ್ನೇಹ ಇಂದಿಗೂ ಮುಂದುವರೆದುಕೊಂಡು ಬಂದಿದ್ದಾರೆ. ಶ್ರುತಿ ಅವರನ್ನು ಚಂದನ್ ಮಾರ್ಗದರ್ಶಕರು ಎಂದು ಕರೆಯುತ್ತಾರೆ. ತನ್ನ ಬಿರಿಯಾನಿ ಹೋಟೆಲ್ ಉದ್ಘಾಟನೆಗೆ ಬಂದಿದ್ದ ಶ್ರುತಿ ಅವರ ಜೊತೆಗಿನ ಒಂದಿಷ್ಟು ಫೋಟೋಗಳನ್ನು ಚಂದನ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ಭಾವುಕ ಸಾಲುಗಳನ್ನು ಬರೆದಿದ್ದಾರೆ.
ಡಾರ್ಲಿಂಗ್ ಕೃಷ್ಣ 'Shrikrishnagmail.com'ನಲ್ಲಿ ನಟ ಚಂದನ್ ಕುಮಾರ್

ಚಂದನ್ ಕುಮಾರ್ ಭಾವುಕ ಸಾಲಗಳು
'ನಮ್ಮ ಮಂದರ್ ಇಂಡಿಯಾ ಶ್ರುತಿ ಮೇಡಮ್ ನಾನು ನೋಡಿದ ಅತ್ಯುತ್ತಮ ಶಿಕ್ಷಕರಲ್ಲಿ ಒಬ್ಬರು. ಇವರು ಜೀವನದ ನೈಜ ಸೂಪರ್ ಸ್ಟಾರ್. ಬಿಗ್ ಬಾಸ್ ದಿನಗಳಿಂದ ನಾನು ಅವರನ್ನು ಮಾರ್ಗದರ್ಶಕಿ ಹಾಗೂ ಗೌರವಾನ್ವಿತ ಮಹಿಳೆ ಎಂದು ಯಾವಾಗಲು ಮೆಚ್ಚುತ್ತೇನೆ. ಬಿಗ್ ಬಾಸ್ ಬಳಿಕವು ನಾವು ಅಷ್ಟೆ ಚೆನ್ನಾಗಿದ್ದೇವೆ. ಮುಂದೆಯೂ ಹಾಗೆ ಇರುತ್ತೇವೆ. ನನ್ನ ಜೀವನದ ಅತ್ಯಂತ ನಂಬಲಾಗದ ದಿನದ ಭಾಗವಾಗಿದ್ದಕ್ಕೆ ಧನ್ಯವಾದಗಳು ಶ್ರುತಿ ಮಾ' ಎಂದು ಬರೆದುಕೊಂಡಿದ್ದಾರೆ.

Shrikrishna@gmail.com ಸಿನಿಮಾದಲ್ಲಿ ಚಂದನ್ ನಟನೆ
ಚಂದನ್ ಕುಮಾರ್ ಸದ್ಯ ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಪ್ರೇಮ ಬರಹ ಸಿನಿಮಾ ಬಳಿಕ ಚಂದನ್ ಡಾರ್ಲಿಂಗ್ ಕೃಷ್ಣ ಅಭಿನಯದ Shrikrishna@gmail.com ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಚಂದನ್ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ನಾಗಶೇಖರ್ ಆಕ್ಷನ್ ಕಟ್ ಹೇಳಿದ್ದಾರೆ.

ಕನ್ನಡದ ಜೊತೆಗೆ ಮಲಯಾಳಂನಲ್ಲೂ ಬರ್ತಿದೆ ಸಿನಿಮಾ
ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಂದನ್ ಕುಮಾರ್ ಸಿನಿಮಾ ರಿಲೀಸ್ ದೆ ಎದುರು ನೋಡುತ್ತಿದ್ದಾರೆ. ಮುಂದಿನ ವರ್ಷ ಈ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ. ವಿಶೇಷ ಎಂದರೆ ಈ ಸಿನಿಮಾ ಕನ್ನಡದ ಜೊತೆಗೆ ಮಲಯಾಳಂನಲ್ಲೂ ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ನಾಯಕಿಯಾಗಿ ಭಾವನಾ ಕಾಣಿಸಿಕೊಂಡಿದ್ದಾರೆ.