For Quick Alerts
  ALLOW NOTIFICATIONS  
  For Daily Alerts

  ನ್ಯಾಯಾಧೀಶರ ನಿಂದನೆ ಆರೋಪ ಹಿನ್ನೆಲೆ ನಟ ಚೇತನ್‌ರನ್ನು ವಶಕ್ಕೆ ಪಡೆದ ಪೊಲೀಸ್: ಪತ್ನಿಯಿಂದ ಕಿಡ್ನಾಪ್ ಆರೋಪ

  |

  'ಆ ದಿನಗಳು' ಖ್ಯಾತಿಯ ನಟ ಚೇತನ್ ವಿವಾದ, ಪ್ರತಿಭಟನೆ, ಹೋರಾಟದ ಮೂಲಕವೇ ಸುದ್ದಿಯಾಗುತ್ತಾರೆ. ಈಗಾಗಲೇ ವಿವಾದಗಳಿಂದ ಜನಪ್ರಿಯರಾಗಿರುವ ನಟನನ್ನು ಶೇಷಾದ್ರಿಪುರಂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಟ ಚೇತನ್ ನ್ಯಾಯಾಧೀಶರನ್ನು ನಿಂದಿಸಿದ ಆರೋಪವನ್ನು ಎದುರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಕರೆದೊಯ್ಯಲಾಗಿದೆ.

  ಎರಡು ವರ್ಷದ ಹಿಂದೆ ನಟ ಚೇತನ್ ಅತ್ಯಾಚಾರ ಪ್ರಕರಣವೊಂದರ ಬಗ್ಗೆ ನ್ಯಾಯಮೂರ್ತಿಗಳನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದರು. ಅದನ್ನೇ ಮತ್ತೆ ನೆನಪಿಸಿ ಫೆಬ್ರವರಿ 16 ರಂದು ನ್ಯಾಯಮೂರ್ತಿಗಳ ಹಿಜಾಬ್ ವಿಚಾರಣೆ ಪೀಠದಲ್ಲಿ ಇದ್ದಾಗ ಟೀಕೆ ಮಾಡಿದ್ದರು. ರೀ ಟ್ವೀಟ್ ಮಾಡಿ ನ್ಯಾಯಾಧೀಶರು ಸ್ತ್ರೀ ವಿರೋಧಿ ಎಂದು ಟ್ವೀಟ್‌ನಲ್ಲಿ ಹೇಳಿದ್ದರು.

  ಹಿಜಾಬ್ ವಿಚಾರಣೆ ವೇಳೆ ಪ್ರಚೋದನಕಾರಿ ಹೇಳಿಕೆ ನೀಡಬಾರದು, ಬರಹ ಬರೆಯಬಾರದು ಎಂದು ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದರು. ಫೆಬ್ರವರಿ 12 ರಂದು ಕಮಲ್ ಪಂತ್ ಮೌಖಿಕ ಸೂಚನೆ ನೀಡಿದ್ದರು. ಆ ಬಳಿಕವೂ 16 ನೇ ತಾರೀಖು ಚೇತನ್ ಟ್ವೀಟ್ ಮಾಡಿದ್ದರು. ಈ ಸಂಬಂಧ ಚೇತನ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಸಾಧ್ಯತೆ ಇದೆ. ಇದೇ ವೇಳೆ ನಟ ಚೇತನ್‌ರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ಪತ್ನಿ ಮೇಘಾ ಫೇಸ್‌ಬುಕ್ ಲೈವ್ ಬಂದು ಪತಿಯನ್ನು ಪೊಲೀಸರು ಕಿಡ್ನಾಪ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

  'ಆದಿನಗಳು' ನಟ ಚೇತನ್‌ರನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಪತ್ನಿ ಮೇಘಾ ಆತಂಕ ವ್ಯಕ್ತಪಡಿಸಿದ್ದಾರೆ. ಫೇಸ್ ಬುಕ್‌ನಲ್ಲಿ ಲೈವ್ ಮಾಡಿ ತನ್ನ ಪತಿಯನ್ನು ಯಾವುದೇ ನೋಟಿಸ್ ನೀಡದೆ ವಿಚಾರಣೆಗೆಂದು ಕರೆದುಕೊಂಡು ಹೋಗಿದ್ದರು. ಆದ್ರೀಗ ಅವರು ಪೊಲೀಸ್ ಠಾಣೆಯಲ್ಲಿ ಇಲ್ಲಾ ಎಂದು ಹೇಳುತ್ತಿದ್ದಾರೆ. ಬೇರೆ ಎಲ್ಲೋ ಅವರನ್ನು ವಿಚಾರಣೆ ಮಾಡಲಾಗುತ್ತಿದ್ದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಹೀಗಾಗಿ ಒಂಥರಾ ನನ್ನ ಪತಿಯನ್ನು ಪೊಲೀಸರೇ ಕಿಡ್ನಾಪ್ ಮಾಡಿದಂತೆ ಎಂದು ಕಿಡಿಕಾರಿದ್ದಾರೆ.

  ಚೇತನ್ ಎಲ್ಲಿದ್ದಾರೆ ಅನ್ನೋದು ಗೊತ್ತಿಲ್ಲ

  ಚೇತನ್ ಎಲ್ಲಿದ್ದಾರೆ ಅನ್ನೋದು ಗೊತ್ತಿಲ್ಲ

  "ನಾನು ಚೇತನ್ ಫೇಸ್‌ಬುಕ್ ಪೇಜ್‌ನಿಂದ ಲೈವ್ ಬರುತ್ತಿದ್ದೇನೆ. ನಾನು ಮನೆಯಲ್ಲಿ ಇದ್ದೆ, ನನಗೆ ಗೊತ್ತಿರಲಿಲ್ಲ. ನಾನು ಚೇತನ್‌ ಎಲ್ಲಿದ್ದಾರೆ ಎಂದು ಹುಡುಕಿದೆ. ಅವರು ಮನೆಯಲ್ಲಿ ಇರಲಿಲ್ಲ. ಮನೆಯಲ್ಲಿ ಕೆಲಸ ಮಾಡುವವರು ಚೇತನ್‌ರನ್ನು ಪೊಲೀಸ್ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದರು. ಯಾರಿಗೂ ಈ ವಿಚಾರ ಹೇಳಿಲ್ಲ. ಅವರ ಪೋನ್ ಸ್ವಿಚ್ ಆಫ್ ಆಗಿದೆ. ಅವರ ಗನ್ ಮ್ಯಾನ್ ಫೋನ್ ಕೂಡ ಆಫ್ ಆಗಿದೆ. ನನಗೆ ಅವರು ಎಲ್ಲಿದ್ದಾರೆ ಅನ್ನುವುದು ಏನೂ ಗೊತ್ತಿಲ್ಲ. ಅದಕ್ಕೆ ನಾನು ಶೇಷಾದ್ರಿಪುರಂ ಪೊಲೀಸ್ ಸ್ಟೇಷನ್‌ಗೆ ಬಂದಿದ್ದೇನೆ." ಎಂದು ಲೈವ್‌ನಲ್ಲಿ ಚೇತನ್ ಪತ್ನಿ ಮೇಘಾ ಹೇಳಿದ್ದಾರೆ.

  ಚೇತನ್‌ಗೆ ನೊಟೀಸ್ ನೀಡಿಲ್ಲ

  ಚೇತನ್‌ಗೆ ನೊಟೀಸ್ ನೀಡಿಲ್ಲ

  "ಈಗ ನನ್ನ ಪತಿ ನನಗೆ ಮಿಸ್ ಆಗಿರುವ ವ್ಯಕ್ತಿ. ಆದ್ರೀಗ ಪೊಲೀಸರು ಅವರ ಕಸ್ಟಡಿಯಲ್ಲಿ ಚೇತನ್ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಚೇತನ್ ಅವರನ್ನು ಬೇರೆ ಕಡೆ ವಿಚಾರಣೆಗೆಂದು ಕರೆದುಕೊಂಡು ಹೋಗಿದ್ದಾರೆ ಎಂದು ಹೇಳುತ್ತಿದ್ದಾರೆ. ಈಗ ಚೇತನ್‌ಗೆ ಏನೂ ನೊಟೀಸ್ ಬಂದಿಲ್ಲ. ಮನೆಯವರಿಗೆ ತಿಳಿಸಿಲ್ಲ. ಸುಮ್ಮನೆಗೆ ಮನೆಗೆ ಬಂದು ಕರೆದುಕೊಂಡು ಹೋಗಿದ್ದಾರೆ." ಎಂದು ಪೊಲೀಸರ ಮೇಲೆ ಆರೋಪ ಮಾಡಿದ್ದಾರೆ.

  ಚೇತನ್ ಎಲ್ಲಿದ್ದಾರೆ ಅಂತ ಹೇಳುತ್ತಿಲ್ಲ

  "ಚೇತನ್ ಎಲ್ಲಿದ್ದಾರೆ ಅಂತ ಹೇಳುತ್ತಿಲ್ಲ. ಅವರನ್ನು ಒಂದು ರೀತಿ ಕಿಡ್ನಾಪ್ ಮಾಡಿದ್ದಾರೆ. ಯಾರಿಗೂ ಅವರು ಎಲ್ಲಿದ್ದಾರೆ ಅಂತ ಗೊತ್ತಿಲ್ಲ. ಯಾರೂ ಈ ಬಗ್ಗೆ ಸರಿಯಾದ ಉತ್ತರ ನೀಡುತ್ತಿಲ್ಲ. ವಶಕ್ಕೆ ಪಡೆದವರಿಗೆ ವಕೀಲರನ್ನು ಕರೆಸಿಕೊಳ್ಳುವ ಹಕ್ಕು ಇದೆ. ಕುಟುಂಬಕ್ಕೆ ಹೇಳಬೇಕು. ನೊಟೀಸ್ ಕೊಡಬೇಕು. ಆದರೆ ಅವರು ಅದೇನನ್ನೂ ಮಾಡಿಲ್ಲ. ಅವರು ಎಲ್ಲಿದ್ದಾರೆ. ಎಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಅನ್ನುವುದನ್ನು ಹೇಳಿಲ್ಲ. ಕೊನೆ ಪಕ್ಷ ಅವರ ಹೆಂಡ್ತಿಗಾಗಿದರೂ ಹೇಳಬೇಕು. ಅದನ್ನೂ ಮಾಡಿಲ್ಲ." ಎಂದು ಆರೋಪಿಸಿದ್ದಾರೆ.

  ಪೊಲೀಸ್ ಠಾಣೆ ಮುಂದೆ ಬೆಂಬಲಿಗರು

  ಪೊಲೀಸ್ ಠಾಣೆ ಮುಂದೆ ಬೆಂಬಲಿಗರು

  ಶೇಷಾದ್ರಿಪುರಂ ಪೊಲೀಸ್ ಸ್ಟೇಷನ್‌ನಲ್ಲಿ ಮಾಹಿತಿ ಕೊಡುತ್ತಿಲ್ಲ ಅಂತ ಚೇತನ್ ಪತ್ನಿ ಗಂಭೀರ ಆರೋಪ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಚೇತನ್ ಬೆಂಬಲಿಗರು ಪೊಲೀಸ್ ಸ್ಟೇಷನ್ ಮುಂದೆ ಜಮಾಯಿಸಿದ್ದು, ಚೇತನ್ ಬಗ್ಗೆ ಮಾಹಿತಿ ಕೊಡುವಂತೆ ಪಟ್ಟು ಹಿಡಿದು ಕೂತಿದ್ದಾರೆ. ಪೊಲೀಸರು ಬಳಿಕ ಚೇತನ್ ಎಲ್ಲಿದ್ದಾರೆ ಅಂತ ಮತ್ತೆ ಕೇಳುತ್ತೇವೆ ಎಂದು ಚೇತನ್ ಪತ್ನಿ ಮೇಘನಾ ಹೇಳಿದ್ದಾರೆ.

  English summary
  Kannada actor and activist Chetan kidnapped says wife Megha. She came facebook live and blame sheshadripuram police.
  Wednesday, February 23, 2022, 9:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X