»   »  ಮಹದಾಯಿ ಹೋರಾಟಕ್ಕೆ ಬಾರದ ನಟರ ವಿರುದ್ಧ ಸಿಟ್ಟಿಗೆದ್ದ ಚೇತನ್ !

ಮಹದಾಯಿ ಹೋರಾಟಕ್ಕೆ ಬಾರದ ನಟರ ವಿರುದ್ಧ ಸಿಟ್ಟಿಗೆದ್ದ ಚೇತನ್ !

Posted By:
Subscribe to Filmibeat Kannada

ಬೆಂಗಳೂರಿನಲ್ಲಿ ನಡೆಯುತ್ತಿರುವ ಮಹದಾಯಿ ಹೋರಾಟದ ಬಿಸಿ ಹೆಚ್ಚಾಗಿದೆ. ಕನ್ನಡದ ನಟರಾದ ಶಿವರಾಜ್ ಕುಮಾರ್, ಉಪೇಂದ್ರ ಮತ್ತು ಸಾ.ರಾ.ಗೋವಿಂದು ಈಗಾಗಲೇ ಪ್ರತಿಭಟನೆ ಬಗ್ಗೆ ಮಾತನಾಡಿದ್ದಾರೆ. ಈಗ ನಟ ಚೇತನ್ ಕೂಡ ಮಹದಾಯಿ ಹೋರಾಟದ ವಿಚಾರವಾಗಿ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಛೇರಿ ಮುಂದೆ ನಡೆಯುತ್ತಿರುವ ಆ ಪ್ರತಿಭಟನೆಯಲ್ಲಿ ನಟ ಚೇತನ್ ಭಾಗಿಯಾಗಿದ್ದರು. ಹೋರಾಟ ನಡೆಯುತ್ತಿರುವ ಸ್ಥಳಕ್ಕೆ ಬಂದು ರೈತರ ಪರ ತಮ್ಮ ಸಾಥ್ ಇದೆ ಎಂಬುದನ್ನು ಮತ್ತೆ ವ್ಯಕ್ತಪಡಿಸಿದರು. ಇದೇ ವೇಳೆ ಮಾತನಾಡಿದ ಅವರು ಹೋರಾಟಕ್ಕೆ ಬಾರದ ಕನ್ನಡ ಚಿತ್ರರಂಗದ ನಟರ ಮೇಲೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ''ಜನ ಕೇಳಿಕೊಂಡರು ಸಿನಿಮಾ ನಟರು ಮೂರು ದಿನ ಆದರೂ ಇಲ್ಲಿಗೆ ಬಂದಿಲ್ಲ'' ಎಂದು ಮಾಧ್ಯಮದವರ ಪ್ರಶ್ನೆಗೆ ಚೇತನ್ ಉತ್ತರಿಸಿದ್ದಾರೆ. ಮುಂದೆ ಓದಿ...

ನಿಮಿಷದಲ್ಲಿಯೇ ಬಗೆ ಹರಿಸಬಹುದು

''ಇದರಲ್ಲಿ ಮೂರು ಪಕ್ಷದ ಜವಾಬ್ದಾರಿ ಇದೆ. ನಮಗೆ ರಾಜಕೀಯ ಪಕ್ಷದ ಮಾತು ಬೇಡ ಕೆಲಸ ಬೇಕು. ಈ ವಿಷಯವನ್ನು ಮನಸು ಮಾಡಿದ್ದಾರೆ ರಾಷ್ಟ್ರಪತಿ ಅವರ ಮೂಲಕ ಕೆಲವು ನಿಮಿಷದಲ್ಲಿಯೇ ಬಗೆ ಹರಿಸಬಹುದು. ರಾಜಕಾರಣಿಗಳ ಬಳಿ ಅಧಿಕಾರ ಶಕ್ತಿ, ಹಣದ ಶಕ್ತಿ ಇದ್ದರೆ, ರೈತರ ಬಳಿ ಜನಶಕ್ತಿ ಇದೆ. ಸಂವಿಧಾನದ ಶಕ್ತಿ ಇದೆ'' ಎಂದು ಚೇತನ್ ಪ್ರತಿಭಟನೆಯಲ್ಲಿ ಮಾತನಾಡಿದ್ದಾರೆ.

ಚಿತ್ರ ನಟರು ಜನರ ಜೊತೆ ಇರಬೇಕು

''ಚಿತ್ರರಂಗದ ಹಿರಿಯರು ಕುಳಿತು ಏನು ಮಾಡಬಹುದು ಎಂಬುದರ ಬಗ್ಗೆ ಚರ್ಚೆ ಮಾಡಬೇಕು. ಎಷ್ಟೋ ವರ್ಷದ ಹಿಂದೆ ಉತ್ತರ ಕರ್ನಾಟಕಕ್ಕೆ ಹೋಗಿ ಹೋರಾಟದಲ್ಲಿ ಭಾಗಿಯಾಗಿದ್ದರು. ಅದು ಒಳ್ಳೆಯ ಕೆಲಸನೇ. ಆದರೆ ಹೋರಾಟ ಅಂದರೆ ಬರಿ ಒಂದು ಕಡೆ ಹೋಗಿ ಕೈ ಆಡಿಸಿ ಮೆರವಣಿಗೆ ಮಾಡುವುದು ಅಲ್ಲ. ಹೋರಾಟ ಅಂದರೆ ಅದು ಬಗೆ ಹರಿಯುವ ವರೆಗೆ ಜನರ ಜೊತೆ ಇರಬೇಕು.'' - ಚೇತನ್, ನಟ

''ಮಹದಾಯಿ ಹೋರಾಟಕ್ಕೆ ನಮ್ಮನ್ನು ಮಾತ್ರ ಯಾಕೆ ಕರೆಯುತ್ತೀರಾ'' ಎಂದ ಶಿವಣ್ಣ.!

ಎಲ್ಲರೂ ಬರಬೇಕು

''ಇದರಲ್ಲಿ ಸಿನಿಮಾರಂಗ ಪ್ರತಿಗತಿಪರರು, ಹೋರಾಟಗಾರು ಜನರ ಪರವಾಗಿ ಸಂವಿಧಾನದ ಪರವಾಗಿ ಯಾರು ಯಾರು ಇದ್ದಾರೋ ಅವರೆಲ್ಲರು ಬರಬೇಕು. ನಮ್ಮ ದೇಶದಲ್ಲಿ ಶ್ರೀಮಂತರು ಬೆಳೆಯುತ್ತಿದ್ದಾರೆ. ಬಡವರು ಅದೇ ರೀತಿ ಇರಲಿ ಎನ್ನುವ ಯೋಚನೆ ಇದೆ. ಸರ್ಕಾರಗಳು ಎತ್ತ ಸ್ಥಿತಿಯ ರಾಜಕೀಯ ಮಾಡುತ್ತಿದೆ'' - ಚೇತನ್, ನಟ

ಮಹದಾಯಿ ಹೋರಾಟಗಾರರ ಬೆಂಬಲಕ್ಕೆ ನಿಂತ ಕನ್ನಡ ಸಿನಿಮಾರಂಗ

ಚಿತ್ರರಂಗದ ಮಾತು

ಈಗಾಗಲೇ ಮಹದಾಯಿ ಹೋರಾಟದ ಬಗ್ಗೆ ಕನ್ನಡದ ನಟರಾದ ಶಿವರಾಜ್ ಕುಮಾರ್, ಉಪೇಂದ್ರ ಮತ್ತು ಸಾ.ರಾ.ಗೋವಿಂದು ಮಾತನಾಡಿದ್ದಾರೆ. ಇನ್ನು ಶಿವಣ್ಣ ''ಹೋರಾಟಕ್ಕೆ ನಮ್ಮ ಬೆಂಬಲ ಯಾವಾಗಲೂ ಇದೆ. ಆದರೆ ನೀವು ಯಾವಾಗಲೂ ನಮ್ಮನ್ನು ಯಾಕೆ ಪ್ರಶ್ನೆ ಮಾಡುತ್ತೀರಾ. ಹೋಗಿ ನೀವೇ ಆರಿಸಿ ಕಳುಹಿಸಿರುವ ಜನಪ್ರತಿನಿಧಿಗಳನ್ನು ಕೇಳಿ'' ಎಂದಿದ್ದಾರೆ.

English summary
Kannada actor Chethan spoke about Mahadayi protest. The protest is held by farmers in front of BJP Office, Malleshwaram Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X