»   » ತುಮಕೂರಿನಲ್ಲಿ ದರ್ಶನ್ ಅಭಿಮಾನಿಗಳಿಗೆ ಲಾಠಿ ಪ್ರಹಾರ

ತುಮಕೂರಿನಲ್ಲಿ ದರ್ಶನ್ ಅಭಿಮಾನಿಗಳಿಗೆ ಲಾಠಿ ಪ್ರಹಾರ

Posted By:
Subscribe to Filmibeat Kannada
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ತುಮಕೂರಿನಲ್ಲಿ ಪೊಲೀಸರ ಬೆತ್ತದ ರುಚಿ ಅನುಭವಿಸಿದ್ದಾರೆ. ತುಮಕೂರಿನಲ್ಲಿ ದರ್ಶನ್ ಅಭಿಮಾನಿಗಳ ಸಂಘ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಟದ ವೇಳೆ, ಭಾರಿ ನೂಕು-ನುಗ್ಗಲು ಸಂಭವಿಸಿತು. ಜನರನ್ನು ಕಂಟ್ರೋಲ್ ಮಾಡಲು ಹರಸಾಹಸ ಪಟ್ಟ ಪೊಲೀಸರು ಜನರನ್ನು ಚದುರಿಸಲು ಲಘು ಲಾಠಿ ಪ್ರಹಾರ ಮಾಡಿದ್ದಾರೆ.

ತುಮಕೂರಿನ ಸರ್ಕಾರಿ ಕಲಾ ಕಾಲೇಜು ಮೈದಾನದಲ್ಲಿ ನಡೆದ ಈ ಪಂದ್ಯಾವಳಿ ನೋಡಲು ದರ್ಶನ್ ಹೋಗಿದ್ದರು. ಆ ವೇಳೆ ತಮ್ಮ ಮೆಚ್ಚಿನ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೋಡಲು ಅವರ ಅಭಿಮಾನಿಗಳು ಮುಗಿಬಿದ್ದರು. ಏನೇ ಹರಸಾಹಸ ಪಟ್ಟರೂ ಅಭಿಮಾನಿಗಳ ನೂಕು-ನುಗ್ಗಲು ತಡೆಯಲು ವಿಫಲರಾದ ಪೊಲೀಸರು ಕೊನೆಗೆ ವಿಧಿಯಿಲ್ಲದೇ ತಮ್ಮ ಲಾಠಿಗೆ ಕೆಲಸ ಕೊಟ್ಟಿದ್ದಾರೆ.

ಲಘು ಲಾಠಿ ಪ್ರಹಾರ ಮಾಡಿದ ಪೊಲೀಸರು ನಂತರ ಅಭಿಮಾನಿಗಳ ಗುಂಪನ್ನು ಚದುರಿಸುವಲ್ಲಿ ಯಶಸ್ವಿಯಾದರು. ಸ್ವತಃ ದರ್ಶನ್, ಅದೆಷ್ಟೇ ಪ್ರಯತ್ನ ಪಟ್ಟರೂ ಅಭಿಮಾನಿಗಳನ್ನು ನಿಯಂತ್ರಿಸಲಾಗಲಿಲ್ಲ. ಆಗ ಪೊಲೀಸರು ತಮ್ಮ ಲಾಠಿಗೆ ಕೆಲಸ ಕೊಡುವುದು ಅನಿವಾರ್ಯವಾಯ್ತು. ಇದೀಗ ತುಮಕೂರು ಕಾಲೇಜು ಮೈದಾನದಲ್ಲಿ ಪರಿಸ್ಥಿತಿ ಶಾಂತವಾಗತೊಡಗಿದೆ. ದರ್ಶನ್ ಅಭಿಮಾನಿಗಳು ದರ್ಶನ್ ನೋಡಿ ಖುಷಿಯಾಗಿದ್ದಾರೆ.

ಮೊದಲೇ ದರ್ಶನ್ ಬರುವ ಸುದ್ದಿ ತಿಳಿದಿದ್ದ ಪೊಲೀಸರು ಸಾಕಷ್ಟು ಸಂಖ್ಯೆಯಲ್ಲಿ ಸೇರಿ ಭದ್ರತಾ ವ್ಯವಸ್ಥೆ ಕೈಗೊಂಡಿದ್ದರು. ಆದರೆ ದರ್ಶನ್ ನೋಡಲು ಬಂದ ಭಾರಿ ಜನಸಾಗರವನ್ನು ನೋಡಿ ಪೊಲೀಸರು ಕಕ್ಕಾಬಿಕ್ಕಿಯಾಗುವಂತಾಯ್ತು. ದರ್ಶನ್ ಫ್ಯಾನ್ಸ್ ಕ್ಲಬ್ ಅದೆಷ್ಟೇ ವ್ಯವಸ್ಥೆ ಕೈಗೊಂಡಿದ್ದರೂ ಅನಿರೀಕ್ಷಿತ ಎಂಬಷ್ಟು ಜನರು ದರ್ಶನ್ ನೋಡಲು ಒಟ್ಟೊಟ್ಟಿಗೇ ಮುಗಿಬಿದ್ದು ಅಲ್ಲಿದ್ದ ಪೊಲೀಸರಿಗೆ ದೊಡ್ಡ ತಲೆನೋವು ಸೃಷ್ಟಿಸಿಬಿಟ್ಟರು.

ಕೊನೆಗೆ ಬೇರೆ ದಾರಿ ಕಾಣದ ಪೊಲೀಸರು ಅನಿವಾರ್ಯವಾಗಿ ಕಾಲೇಜು ಗ್ರೌಂಡ್ ತುಂಬಾ ತುಂಬಿಕೊಂಡ ದರ್ಶನ್ ಅಭಿಮಾನಿಗಳನ್ನು ಚದುರಿಸಲು ಲಘು ಲಾಠಿ ಪ್ರಹಾರಕ್ಕೆ ಮೊರೆ ಹೋಗಬೇಕಾಯ್ತು. ಆದರೆ, ದರ್ಶನ್ ಹೋದಲ್ಲೆಲ್ಲಾ ಭಾರಿ ಸಂಖ್ಯೆಯಲ್ಲಿ ಜನರು, ಅಭಿಮಾನಿಗಳು ಸೇರುವುದು ಇತ್ತೀಚಿಗೆ ಕಾಮನ್ ಎಂಬಂತಿದ್ದರೂ ಅದಕ್ಕೆ ಸರಿಯಾದ ವ್ಯವಸ್ಥೆ ಕೈಗೊಳ್ಳಲು ದರ್ಶನ್ ಫ್ಯಾನ್ಸ್ ಕ್ಲಬ್ ವಿಫಲವಾಗಿದ್ದೇಕೆ ಎಂಬುದು ಈಗ ಎಲ್ಲರ ಪ್ರಶ್ನೆ! (ಒನ್ ಇಂಡಿಯಾ ಕನ್ನಡ)

English summary
Police restored to a mild lathicharge to disperse Kannada Actor, Challenging Star Darshan around the Tumkur college ground. There is Cricket Tournament form Darshan fans Club. Now, everything is fine there. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada