For Quick Alerts
  ALLOW NOTIFICATIONS  
  For Daily Alerts

  ಮಾಜಿ ಸಚಿವರ ಜೊತೆ ಎತ್ತಿನ ಬಂಡಿ ಏರಿದ ದರ್ಶನ್

  |

  ದರ್ಶನ್ ಸ್ಟಾರ್ ನಟರಾಗಿದ್ದರೂ ಮಣ್ಣಿನೊಂದಿಗೆ ನಂಟನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಕೃಷಿಯಲ್ಲಿ ತೊಡಗಿಕೊಳ್ಳುವುದು, ಹೈನುಗಾರಿಕೆ ಮಾಡುವುದು ಹೀಗೆ ಹಲವು ಕಾರ್ಯಗಳನ್ನು ಆಸ್ಥೆಯಿಂದ ಮಾಡುತ್ತಾ ಬರುತ್ತಿದ್ದಾರೆ ದರ್ಶನ್.

  ಐಶಾರಾಮಿ ಕಾರುಗಳ ಸಂಗ್ರಹವೇ ಇದೆ ದರ್ಶನ್ ಬಳಿ. ಆದರೆ ಅವರು ಆಗಾಗ್ಗೆ ಟ್ರಾಕ್ಟರ್ ಬಸವನ ಬಂಡಿ ಏರುವುದುಂಟು. ಈಗಲೂ ಅವರು ಬಂಡಿ ಏರಿ ಸವಾರಿ ಮಾಡಿದ್ದಾರೆ.

  ಮಾಜಿ ಸಚಿವ, ಸಕ್ರಿಯ ರಾಜಕಾರಣಿಯೊಬ್ಬರ ಜೊತೆಗೆ ಬಂಡಿ ಏರಿರುವ ದರ್ಶನ್. ಸ್ವತಃ ತಾವೇ ಬಂಡಿ ಓಡಿಸಿ ಖುಷಿ ಪಟ್ಟಿದ್ದಾರೆ. ದರ್ಶನ್ ಅವರು ಜೋಡೆತ್ತಿನ ಬಂಡಿ ಹೊಡೆದಿರುವ ಇಡಿಯೋ ಸಖತ್ ವೈರಲ್ ಆಗಿದೆ.

  ವಿನಯ್ ಕುಲಕರ್ಣಿ ಜೊತೆ ಬಂಡಿ ಸವಾರಿ

  ವಿನಯ್ ಕುಲಕರ್ಣಿ ಜೊತೆ ಬಂಡಿ ಸವಾರಿ

  ಇತ್ತೀಚೆಗೆ ದರ್ಶನ್ ಅವರು ಧಾರವಾಡಕ್ಕೆ ಭೇಟಿ ನೀಡಿದ್ದರು. ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ವಿನಯ್ ಡೈರಿಗೆ ದರ್ಶನ್ ತೆರಳಿದ್ದರು. ಆ ಸಮಯ ವಿನಯ್ ಕುಲಕರ್ಣಿ ಅವರೊಟ್ಟಿಗೆ ಸೇರಿ ಎತ್ತಿನ ಬಂಡಿ ಏರಿದ್ದಾರೆ ದರ್ಶನ್.

  ವಿನಯ್-ದರ್ಶನ್ ಆಪ್ತ ಗೆಳೆಯರು

  ವಿನಯ್-ದರ್ಶನ್ ಆಪ್ತ ಗೆಳೆಯರು

  ವಿನಯ್ ಕುಲಕರ್ಣಿ ಹಾಗೂ ದರ್ಶನ್ ಅತ್ಯಾಪ್ತ ಗೆಳೆಯರು. ವಿನಯ್ ಅವರಿಗೆ ಕುದುರೆ ಮರಿಯೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದರು ದರ್ಶನ್. ಅಷ್ಟೆ ಅಲ್ಲದೆ ವಿನಯ್ ಪರ ಚುನಾವಣೆಯಲ್ಲಿ ಈ ಹಿಂದೆ ಪ್ರಚಾರವನ್ನೂ ದರ್ಶನ್ ಮಾಡಿದ್ದರು.

  ವಿನಯ್ ಸಹ ಪ್ರಾಣಿ ಪ್ರೇಮಿ

  ವಿನಯ್ ಸಹ ಪ್ರಾಣಿ ಪ್ರೇಮಿ

  ವಿನಯ್ ಕುಲಕರ್ಣಿ ಸಹ ಪ್ರಾಣಿ ಪ್ರೇಮಿಯಾಗಿದ್ದು, ಅವರ ಫಾರಂ ನಲ್ಲಿ ಹಲವಾರು ಹಸು, ಎತ್ತುಗಳು, ಇತರೆ ಜಾನುವಾರುಗಳು, ದರ್ಶನ್ ಉಡುಗೊರೆಯಾಗಿ ನೀಡಿದ ಕುದುರೆಗಳು ಇವೆ. ಇದೇ ಫಾರಂ ಗೆ ದರ್ಶನ್ ಭೇಟಿ ನೀಡಿದ್ದು.

  ಟ್ರಾಕ್ಟರ್ ಚಲಾಯಿಸಿದ ದರ್ಶನ್

  ಟ್ರಾಕ್ಟರ್ ಚಲಾಯಿಸಿದ ದರ್ಶನ್

  ಕೆಲ ದಿನಗಳ ಹಿಂದಷ್ಟೆ ದರ್ಶನ್ ಅವರು ಟ್ರಾಕ್ಟರ್ ಚಲಾಯಿಸಿ ಗಮನ ಸೆಳೆದಿದ್ದರು. ಮೈಸೂರಿನ ತಮ್ಮ ಫಾರ್ಮ್‌ ಹೌಸ್‌ಗಾಗಿ ಹೊಸ ಟ್ರಾಕ್ಟರ್ ಅನ್ನು ದರ್ಶನ್ ಖರೀದಿಸಿದ್ದರು. ಅದನ್ನು ತಾವೇ ಸ್ವತಃ ಚಲಾಯಿಸಿಕೊಂಡು ಹೋಗಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿತ್ತು.

  English summary
  Actor Darshan ride bullock cart with former minister Vinay Kulkarni in Dharwad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X