»   » ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಲಕ್ಕಿ ಸ್ಪಾಟ್ ಯಾವುದು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಲಕ್ಕಿ ಸ್ಪಾಟ್ ಯಾವುದು?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ದೀಪಾ ಸನ್ನಿಧಿ ಎರಡನೇ ಬಾರಿಗೆ ಒಂದಾಗಿ ನಟಿಸಿರುವ 'ಚಕ್ರವರ್ತಿ' ಚಿತ್ರದ ಶೂಟಿಂಗ್ ವೇಗವಾಗಿ ಸಾಗುತ್ತಿದೆ. ಬಹು ತಾರಾಗಣ ಇರುವ 'ಚಕ್ರವರ್ತಿ' ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಚೊಚ್ಚಲ ನಿರ್ದೇಶಕ ಚಿಂತನ್ ಆಕ್ಷನ್-ಕಟ್ ಹೇಳಿರುವ 'ಚಕ್ರವರ್ತಿ' ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿದೆ. ಕುಮಾರ್ ಬಂಗಾರಪ್ಪ ಅವರ ಭಾಗದ ಚಿತ್ರೀಕರಣವನ್ನು ಮಲೇಷ್ಯಾದಲ್ಲಿ ಈಗಾಗಲೇ ಮುಗಿಸಿ ವಾಪಸಾಗಿರುವ ಚಿತ್ರತಂಡ, ಹಾಡಿನ ಶೂಟಿಂಗ್ ಗಾಗಿ ಬ್ಯಾಂಕಾಕ್ ಗೆ ಹಾರಿದೆ.[ದರ್ಶನ್ 'ಚಕ್ರವರ್ತಿ' ಬಿಡುಗಡೆ ಡೇಟ್ ಫಿಕ್ಸ್ ಆಯ್ತಾ?]


ಮೊದಲ ಬಾರಿಗೆ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ಅವರು, ವಿಲನ್ ಗೆಟಪ್ ಹಾಕಿ 'ಚಕ್ರವರ್ತಿ'ಗೆ ಸವಾಲ್ ಹಾಕಲು ತಯಾರಿ ನಡೆಸಿದ್ದಾರೆ. ಇನ್ನುಳಿದಂತೆ ದರ್ಶನ್ ಅವರ ಕುಚಿಕು ಗೆಳೆಯರಾದ ಸೃಜನ್ ಲೋಕೇಶ್ ಮತ್ತು ಆದಿತ್ಯ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಮುಂದೆ ಓದಿ....


ಎಲ್ಲಾ ಓಕೆ ಬ್ಯಾಂಕಾಕ್ ಯಾಕೆ?

ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರ ಸಿನಿಮಾಗಳಲ್ಲಿ ಎಲ್ಲಾ ಓಕೆ, ಅದರೆ ಹೆಚ್ಚಿನ ಸಿನಿಮಾಗಳಲ್ಲಿ ಬ್ಯಾಂಕಾಕ್ ಇದ್ದೇ ಇರುತ್ತೆ ಯಾಕೆ ಅಂತ ಕೆಲವರಿಗೆ ಪ್ರಶ್ನೆ ಮೂಡಬಹುದು. ಈ ಮೊದಲು ದರ್ಶನ್ ಅವರ 'ಅಭಯ್' ಚಿತ್ರದ ಸಿನಿಮಾವನ್ನು ಕೂಡ ಬ್ಯಾಂಕಾಕ್ ನಲ್ಲಿ ಶೂಟ್ ಮಾಡಲಾಗಿತ್ತು.[ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ: ಎಲ್ಲೆಲ್ಲೂ ಈ ಫೋಟೋದೇ ಸುದ್ದಿ!]


'ಚಕ್ರವರ್ತಿ' ಬ್ಯಾಂಕಾಕ್ ನಲ್ಲಿ

'ಅಭಯ್' ಚಿತ್ರದ ನಂತರ ಇದೀಗ 'ಚಕ್ರವರ್ತಿ' ಚಿತ್ರದ ಸರದಿ. ಈ ಬಾರಿ 'ಚಕ್ರವರ್ತಿ' ಚಿತ್ರದ ಒಂದು ಹಾಡನ್ನು ಬ್ಯಾಂಕಾಕ್ ನಲ್ಲಿ ಶೂಟ್ ಮಾಡಲು ಚಿತ್ರತಂಡ ಈಗಾಗಲೇ ತೆರಳಿದೆ. ಸೋಮವಾರದಿಂದ ಥಾಯ್ಲೆಂಡ್ ನಲ್ಲಿ ಹಾಡಿನ ಶೂಟಿಂಗ್ ಆರಂಭವಾಗಿದ್ದು, ಸುಮಾರು 3 ದಿನಗಳ ಕಾಲ ಶೂಟಿಂಗ್ ನಡೆದಿದೆ.['ಚಕ್ರವರ್ತಿ'ಯಲ್ಲಿ ದರ್ಶನ್ ನ್ಯೂ ಲುಕ್ ಹೇಗಿದೆ, ನೋಡಿದ್ರಾ?]


'ಬ್ಯಾಂಕಾಕ್' ಅದೃಷ್ಟದ ಸ್ಥಳ

ಅಂದಹಾಗೆ ಬ್ಯಾಂಕಾಕ್ ನಟ ದರ್ಶನ್ ಅವರಿಗೆ ಲಕ್ಕಿ ಸ್ಥಳವಂತೆ. ಆದ್ದರಿಂದ ತಮ್ಮ ಬಹುನಿರೀಕ್ಷಿತ ಸಿನಿಮಾ 'ಚಕ್ರವರ್ತಿ'ಯ ಒಂದು ಹಾಡನ್ನಾದರೂ ಅಲ್ಲಿ ಶೂಟ್ ಮಾಡಬೇಕು ಅಂತ ಚಿತ್ರೀಕರಣಕ್ಕೆ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದರು.[ದರ್ಶನ್ 'ಚಕ್ರವರ್ತಿ' ಅಡ್ಡದಿಂದ ಬಂದ ಲೇಟೆಸ್ಟ್ ಸುದ್ದಿ ಇದು]


ನಿರ್ಮಾಪಕರಿಗೂ ಬ್ಯಾಂಕಾಕ್ ಹಾಟ್ ಫೇವರಿಟ್

ಬರೀ ದರ್ಶನ್ ಅವರಿಗೆ ಮಾತ್ರವಲ್ಲದೇ, 'ಚಕ್ರವರ್ತಿ' ಚಿತ್ರದ ನಿರ್ಮಾಪಕ ಅಣಜಿ ನಾಗರಾಜ್ ಅವರಿಗೂ ಬ್ಯಾಂಕಾಕ್ ಅದೃಷ್ಟ ತರೋ ಸ್ಥಳವಂತೆ. ಒಟ್ನಲ್ಲಿ ಈ ಸುಂದರ ದೇಶ ಬ್ಯಾಂಕಾಕ್ ಮೇಲೆ ನಟ-ನಿರ್ಮಾಪಕರಿಗೆ ಅದೇನೋ ಒಂಥರಾ ಸೆಂಟಿಮೆಂಟ್.['ಚಕ್ರವರ್ತಿ' ಆಗಲು ಲಾಂಗ್ ಹಿಡಿಯುವ ಚಾಲೆಂಜಿಂಗ್ ಸ್ಟಾರ್ ದರ್ಶನ್]


'ಸ್ನೇಹನಾ ಪ್ರೀತಿನಾ' ನಂತರ 'ಚಕ್ರವರ್ತಿ'

ನಿರ್ಮಾಪಕ ಅಣಜಿ ನಾಗರಾಜ್ ಅವರು ಈ ಮೊದಲು ದರ್ಶನ್ ಮತ್ತು ಆದಿತ್ಯ ಒಂದಾಗಿ ಕಾಣಿಸಿಕೊಂಡಿದ್ದ 'ಸ್ನೇಹನಾ ಪ್ರೀತಿನಾ' ಎಂಬ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಇದೀಗ ಎರಡನೇ ಬಾರಿ 'ಚಕ್ರವರ್ತಿ' ಚಿತ್ರದ ನಿರ್ಮಾಣ ಮಾಡಿದ್ದಾರೆ. ಇಲ್ಲಿಯವರೆಗೆ ದರ್ಶನ್ ಅವರ ಚಿತ್ರಗಳಿಗೆ ಸಂಭಾಷಣೆ ಬರೆಯುತ್ತಿದ್ದ ಚಿಂತನ್ ಅವರು ಮೊದಲ ಬಾರಿಗೆ ಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.


'ಚಕ್ರವರ್ತಿ' ಯಾವಾಗ ತೆರೆಗೆ?

ದರ್ಶನ್ ಅವರು ರೆಟ್ರೋ ಲುಕ್ ನಲ್ಲಿ ಮಿಂಚಿರುವ 'ಚಕ್ರವರ್ತಿ' ಸಿನಿಮಾವನ್ನು ಡಿಸೆಂಬರ್ ತಿಂಗಳಿನಲ್ಲಿ ತೆರೆಗೆ ತರಲು ಚಿತ್ರತಂಡದವರು ಪ್ಲ್ಯಾನ್ ಮಾಡಿದ್ದಾರೆ.


English summary
Shooting for Kannada Actor Darshan's new Movie 'Chakravarthy' will take place in Bangkok. Thailand, especially Bangkok has been very lucky for Actor Darshan. Songs of many of his films have been shot in locations there. It is also a lucky spot for producer Anaji Nagaraj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada