»   » ಈ ವಿಷಯದಲ್ಲಿ ಸುದೀಪ್, ದರ್ಶನ್ ಬೇರೆ ಬೇರೆ

ಈ ವಿಷಯದಲ್ಲಿ ಸುದೀಪ್, ದರ್ಶನ್ ಬೇರೆ ಬೇರೆ

Posted By:
Subscribe to Filmibeat Kannada

ದರ್ಶನ್ ಮತ್ತು ಸುದೀಪ್ ಒಂದು ಕಾಲದಲ್ಲಿದ್ದ ಸ್ಪರ್ಧೆಯನ್ನ ತೊರೆದು ಈಗ ಒಗ್ಗಟ್ಟಾಗಿದ್ದಾರೆ. ಏನನ್ನೇ ಮಾಡೋದಾದ್ರೂ ಇಬ್ಬರೂ ಒಂಚೂರು ಚರ್ಚೆ ಮಾಡಿ ಮಾಡ್ತಾರೆ. ಅಷ್ಟರಮಟ್ಟಿಗೆ ಕುಚುಕು ಗೆಳೆಯರು ಸ್ಯಾಂಡಲ್ ವುಡ್ ನ ಎತ್ತರದ ಸ್ಟಾರ್ ಗಳಾದ ದರ್ಶನ್, ಸುದೀಪ್ ಆದ್ರೆ ಸಿನಿಮಾದಲ್ಲಿ ಗೆಸ್ಟ್ ರೋಲ್ಗಳನ್ನ ಮಾಡೋ ವಿಷ್ಯದಲ್ಲಿ ಮಾತ್ರ ಇಬ್ಬರ ಪ್ಲಾನಿಂಗ್ಗಳು ಬೇರೆ ಬೇರೆ.

ದರ್ಶನ್ ಯಾವುದೇ ಚಿತ್ರದಲ್ಲಿ ಗೆಸ್ಟ್ ರೋಲ್ ಗೆ ಒಪ್ಪಿಕೊಂಡ್ರೆ ಅದ್ರಲ್ಲಿ ತಮ್ಮ ಪಾತ್ರದ ಶೂಟಿಂಗ್ ನ ಚಿತ್ರತಂಡವನ್ನ ಬಿಟ್ಟು ಬೇರ್ಯಾರು ಮಾಡುವಂತಿಲ್ಲ. ಅದನ್ನ ಪ್ರಚಾರಕ್ಕೆ ಬಳಸೋ ಹಾಗಿಲ್ಲ ಇತ್ತೀಚೆಗೆ ದರ್ಶನ್ ಕಾಣಿಸಿಕೊಂಡ 'ಅಗ್ರಜ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶಿಷ್ಟ ಪಾತ್ರದಲ್ಲಿ ಅನ್ನೋದು ಬಿಟ್ರೆ ಪೋಸ್ಟರ್ ನಲ್ಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ.

Sudeep and Darshan

ಈ ಹಿಂದೆ ಬಂದ 'ಸ್ನೆಹಿತರು' ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ಎಂಟ್ರಿಕೊಟ್ಟಿದ್ದ ದರ್ಶನ್ ಪಾತ್ರದ ಸ್ಟಿಲ್ ಗಳು ಪ್ರಚಾರದ ಪೋಸ್ಟರ್ ಗಳಲ್ಲಿ ಕಾಣಿಸಿರಲಿಲ್ಲ.
ಆದರೆ ಸುದೀಪ್ ಹಾಗಲ್ಲ, ಪ್ರಚಾರಕ್ಕೆ ತಮ್ಮ ಪೋಸ್ಟರ್ ಬಳಸಿದ್ರೆ ಓಕೆ ಅಂತಾರೆ.

ಈಗ ರೆಡಿಯಾಗ್ತಿರೋ ಪ್ರದೀಪ್ ಅಭಿನಯದ 'ರಂಗನ್ ಸ್ಟೈಲ್' ಚಿತ್ರದ ಪೋಸ್ಟರ್ ನಲ್ಲಿ ಸುದೀಪ್ ಪೊಲೀಸ್ ಡ್ರೆಸ್ ಇಲ್ಲದಿದ್ರೂ ಪೊಲೀಸ್ ಪೋಸ್ ಇದೆ. ಇನ್ನು ಮಾಧ್ಯಮದವ್ರು ಸುದೀಪ್ ಗೆಸ್ಟ್ ರೋಲನ್ನ ಶೂಟ್ ಮಾಡ್ಬಹುದು. ಐದು ಬೆರಳು ಒಂದೇ ತರಹ ಇರಲ್ಲ ಅಂತಾರಲ್ಲ ಹಾಗೆ ಈ ಇಬ್ಬರೂ ಸ್ಟಾರ್ ಗಳು ಆತ್ಮೀಯ ಗೆಳೆಯರಾದ್ರೂ ತಮ್ಮ ಪಾಲಿಸಿಗಳಲ್ಲಿ ಸ್ವಲ್ಪ ವಿಭಿನ್ನವಾಗಿರೋದು ವಿಶೇಷ.

English summary
Kannada stars Darshna and Sudeep showing unity in Sandalwood. But in some issues both stars are quite dissimilar. They are sticking with their typical attitude in guest appearance.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada