»   » 'ಎಂಎಲ್ಎ' ಬೆಂಬಲಕ್ಕೆ ನಿಂತ ಚಾಲೆಂಜಿಂಗ್ ಸ್ಟಾರ್ ದರ್ಶನ್

'ಎಂಎಲ್ಎ' ಬೆಂಬಲಕ್ಕೆ ನಿಂತ ಚಾಲೆಂಜಿಂಗ್ ಸ್ಟಾರ್ ದರ್ಶನ್

Posted By:
Subscribe to Filmibeat Kannada
ಯಾವ MLA ಗೆ ದರ್ಶನ್ ಸಪೋರ್ಟ್ ಮಾಡ್ತಿದ್ದಾರೆ ಗೊತ್ತಾ ? | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೇವಲ ಸ್ಟಾರ್ ಆಗಿ ಮಾತ್ರ ಉಳಿದುಕೊಂಡಿಲ್ಲ. ಸಿನಿಮಾರಂಗದಲ್ಲಿ ತಾನು ಬೆಳೆಯುವದರ ಜೊತೆಯಲ್ಲಿ ತನ್ನ ಸುತ್ತಾ ಮುತ್ತಲಿರುವ ಕಲಾವಿದರನ್ನ ಹಾಗೂ ಚಿತ್ರರಂಗಕ್ಕೆ ಬರುವ ಹೊಸಬರನ್ನು ಬೆಳೆಸುತ್ತಾ ಬರುತ್ತಿರುವ ನಟ.

ಇಷ್ಟು ದಿನಗಳ ಕಾಲ ಹೊಸಬರ ಸಿನಿಮಾಗಳಿಗೆ ಸಪೋರ್ಟ್ ಮಾಡುತ್ತಿದ್ದ ದರ್ಶನ್ ಈಗ 'ಎಂಎಲ್ಎ' ಬೆಂಬಲಕ್ಕೆ ನಿಂತಿದ್ದಾರೆ. ಹಾಗಾದ್ರೆ ದರ್ಶನ್ ಚುನಾವಣೆ ಪ್ರಚಾರಕ್ಕೆ ಹೋಗುತ್ತಾರಾ? ಯಾವ ಪಕ್ಷದ ಪರವಾಗಿ ದರ್ಶನ್ ಪ್ರಚಾರ ಮಾಡುತ್ತಾರೆ? ಹೀಗೆ ಇನ್ನು ಹತ್ತು ಹಲವು ಪ್ರಶ್ನೆಗಳು ಈಗಾಗಲೇ ನಿಮ್ಮ ತಲೆಯಲ್ಲಿ ಮೂಡಿರುತ್ತೆ. ಆದರೆ ಡಿ ಬಾಸ್ ಸಪೋರ್ಟ್ ಮಾಡುತ್ತಿರುವ 'ಎಂಎಲ್ಎ' ರಾಜಕೀಯದವರಲ್ಲ.

ಸುದೀಪ್ ಎರಡನೇ ಟ್ವೀಟ್: ದರ್ಶನ್ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಕಿಚ್ಚ

ಸಿನಿಮಾದಲ್ಲಿನ 'ಎಂಎಲ್ಎ' ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ನೀಡಲು ಮುಂದಾಗಿದ್ದಾರೆ. ಹಾಗಾದರೆ ಯಾರು ಆ 'ಎಂಎಲ್ಎ'? ಅವರ ಜೊತೆಯಲ್ಲಿ ದರ್ಶನ್ ಕೈಜೋಡಿಸುತ್ತಿರುವುದು ಹೇಗೆ? ಈ ಎಲ್ಲಾ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

'ಎಂಎಲ್ಎ' ಪ್ರಥಮ್ ಗೆ ದರ್ಶನ್ ಸಾಥ್

ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ಅಭಿನಯದ 'ಎಂಎಲ್ಎ' ಚಿತ್ರಕ್ಕೆ ದರ್ಶನ್ ಸಾಥ್ ನೀಡಲು ಮುಂದಾಗಿದ್ದಾರೆ. ಮೇ1 ರಂದು ನಡೆಯುವ 'ಎಂಎಲ್ಎ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ದರ್ಶನ್ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ.

ಡಿ ಬಾಸ್ ರನ್ನ ಆಹ್ವಾನಿಸಿದ ಪ್ರಥಮ್

ದರ್ಶನ್ ಅವರನ್ನ ತಮ್ಮ ಸಿನಿಮಾದ ಆಡಿಯೋ ಬಿಡುಗಡೆ ಮಾಡಲು ಆಹ್ವಾನ ಮಾಡಿದ ರೀತಿಯನ್ನ ನಟ ಪ್ರಥಮ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

"ನಿಜಕ್ಕೂ ದರ್ಶನ್ ಸರ್ ಈ ಕಾರಣಕ್ಕೇ ಗ್ರೇಟ್. ಅವತ್ತು ಮೈಸೂರಲ್ಲಿ ಯಜಮಾನ ಸಿನಿಮಾ ಶೂಟಿಂಗ್ ನಡೆಯಬೇಕಾದರೆ ಕಾಲ್ ಮಾಡಿ ಹೋಗಿದ್ದೆ. ಕಂಡೊಡನೆ ಬಹಳ ಪ್ರೀತಿಯಿಂದ ಮಾತಾಡಿದ್ರು. ಆಡಿಯೋ ರಿಲೀಸ್ ಗೆ ಆಹ್ವಾನ ಮಾಡಿದೆ. ಖಂಡಿತಾ ಬರ್ತೀನಮ್ಮ". ಅಂದ್ರು.

ಮಾತು ತಪ್ಪದ ದರ್ಶನ್

"ವಾರಕ್ಕೊಂದು ಫೋನ್ ನಂಬರ್ ಬದಲಿಸೋ ದರ್ಶನ್ ಸರ್ ಯಾವತ್ತೂ ಕೊಟ್ಟ ಮಾತು ಬದಲಿಸಿಲ್ಲ. ಇದಕ್ಕೆ ಈ ಮನುಷ್ಯನ್ನ ಕಂಡರೆ ಜನ ಪ್ರೀತಿಯಿಂದ ಹಿಂದೆ ಬೀಳೋದು. ಅಂದಹಾಗೆ ನನ್ನ M.L.A ಸಿನಿಮಾ ಆಡಿಯೋ ಬಿಡುಗಡೆಗೆ ದರ್ಶನ್ ಸರ್ ನ ಕರೆಸಲು ನೆರವಾದ ಎಲ್ಲರಿಗೂ ಚಿರಋಣಿ". ಎಂದಿದ್ದಾರೆ ಪ್ರಥಮ್.

ದರ್ಶನ್ ರಿಂದ ಪಾಠ ಕಲಿತ ಪ್ರಥಮ್

ದರ್ಶನ್ ಅವರನ್ನ ಭೇಟಿ ಮಾಡಿ ಬಂದ ನಂತರ ಪ್ರಥಮ್ ಅವರಿಂದ ಪಾಠ ಕಲಿತಿದ್ದಾರಂತೆ. ಹಾಗಂತ ಅವರೇ ಹೇಳಿದ್ದಾರೆ. ಕೊಟ್ಟ ಮಾತನ್ನು ಚಿತ್ರರಂಗದಲ್ಲಿ ಎಂದಿಗೂ ತಪ್ಪಬಾರದಂತೆ. ಇಷ್ಟು ದಿನ ಒಳ್ಳೆ ಹುಡ್ಗ ಪ್ರಥಮ್ ಎನ್ನಿಸಿಕೊಂಡವರು ಇನ್ನು ಮುಂದೆ ಮಾತು ತಪ್ಪದ ಪ್ರಥಮ್ ಎನ್ನಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ.

ಸಿನಿಮಾ ಬಗ್ಗೆ

‘ಮಜಾ ಟಾಕೀಜ್' ಗೆ ಸಂಭಾಷಣೆ ಬರೆಯುತ್ತಿದ್ದ ಮೌರ್ಯ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮಂಗಳೂರಿನ ಬೆಡಗಿ ಸೋಹಲ್ ಮಂತೆರೋ ಚಿತ್ರದಲ್ಲಿ ಪ್ರಥಮ್ ಜತೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವೆಂಕಟೇಶ್‌ ರೆಡ್ಡಿ ‘ಎಂಎಲ್ಎ' ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ.

ಕಾಪ್ಟರ್ ನಲ್ಲಿ ಬಂದಿಳಿದ ಬಿಗ್ ಬಾಸ್ ಪ್ರಥಮ್

English summary
Kannada Actor Darshan will be releasing the audio release of 'MLA' kannada movie. The audio release of 'MLA' will be released on May 1.Pratam and Sohan is acting in lead charecter

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X