For Quick Alerts
  ALLOW NOTIFICATIONS  
  For Daily Alerts

  ಕುಮಾರ ಬಂಗಾರಪ್ಪ ಹುಟ್ಟುಹಬ್ಬಕ್ಕೆ ಶುಭಕೋರಿದ 'ಚಕ್ರವರ್ತಿ' ದರ್ಶನ್

  |

  ನಟ-ರಾಜಕಾರಣಿ ಕುಮಾರ ಬಂಗಾರಪ್ಪ ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸೊರಬ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರಿಗೆ ಕರ್ನಾಟಕದ ಪ್ರಮುಖ ರಾಜಕಾರಣಿಗಳು ಹಾಗೂ ಸಿನಿಮಾ ಕಲಾವಿದರು ಶುಭ ಕೋರಿದ್ದಾರೆ.

  ಕುಮಾರ ಬಂಗಾರಪ್ಪ ಅವರ ಜೊತೆ ಉತ್ತಮ ಒಡನಾಟ ಹೊಂದಿರುವ ನಟ ದರ್ಶನ್ ಟ್ವಿಟ್ಟರ್ ಮೂಲಕ ಶುಭಾಶಯ ತಿಳಿಸಿದ್ದು, ''ಸಿನಿಮಾ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸಾಕಷ್ಟು ಹೆಸರು ಮಾಡಿರುವ ನಮ್ಮ ಕುಮಾರ್ ಬಂಗಾರಪ್ಪರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ಅವರ ಇಷ್ಟಾರ್ಥಗಳೆಲ್ಲವೂ ಈಡೇರಲಿ ಎಂದು ಆಶಿಸುತ್ತೇನೆ'' ಎಂದು ಹಾರೈಸಿದ್ದಾರೆ.

  ಕೊರಗಜ್ಜನ ದರ್ಶನ್ ಪಡೆದ ನಟ ದರ್ಶನ್: ಹಳೆ ಚಿತ್ರ ವೈರಲ್ಕೊರಗಜ್ಜನ ದರ್ಶನ್ ಪಡೆದ ನಟ ದರ್ಶನ್: ಹಳೆ ಚಿತ್ರ ವೈರಲ್

  ದರ್ಶನ್ ಜೊತೆಯಲ್ಲಿ ಕುಮಾರ ಬಂಗಾರಪ್ಪ ಅವರು ಚಕ್ರವರ್ತಿ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಸುಮಾರು 13 ವರ್ಷದ ನಂತರ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಬಳಿಕ ಮತ್ತೆ ಯಾವ ಚಿತ್ರದಲ್ಲೂ ನಟಿಸಿಲ್ಲ. ಈ ಚಿತ್ರದ ಬಳಿಕವೂ ಕುಮಾರ ಬಂಗಾರಪ್ಪ ಅವರ ಕುಟುಂಬಕ್ಕೆ ದಾಸ ಆಪ್ತ ವ್ಯಕ್ತಿಯಾಗಿದ್ದಾರೆ.

  ಇನ್ನು ನಿರ್ದೇಶಕ ಪವನ್ ಒಡೆಯರ್ ಸಹ ಕುಮಾರ ಬಂಗಾರಪ್ಪ ಜನುಮದಿನಕ್ಕೆ ಟ್ವಿಟ್ಟರ್ ಮೂಲಕ ಶುಭಕೋರಿದ್ದಾರೆ. ''ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಸರ್. ದೇವರು ನಿಮಗೆ ಎಲ್ಲಾ ರೀತಿಯ ಸಿರಿ ಸಂಪತ್ತು ಕೊಟ್ಟು ಕಾಪಾಡಲಿ'' ಎಂದಿದ್ದಾರೆ.

  ಜೊತೆ ಜೊತೆಯಲಿ ಮೇಘ ಶೆಟ್ಟಿಗೆ ಬಂತು ಬಂಪರ್ ಆಫರ್ | Filmibeat Kannada

  ಇನ್ನು ಕುಮಾರ ಬಂಗಾರಪ್ಪ ಅವರ ಪ್ರಮುಖ ಚಿತ್ರಗಳನ್ನು ಪಟ್ಟಿ ಮಾಡುವುದಾದರೆ ಶರವೇಗದ ಸರದಾರ, ಅಶ್ವಮೇಧ, ತೇಜ, ನವತಾರೆ, ಝೇಂಕಾರ, ಅಮರ ಪ್ರೇಮ, ಪುರುಷೋತ್ತಮ, ಕ್ಷೀರಾ ಸಾಗರ, ಬೆಳ್ಳಿಯಪ್ಪಾ ಬಂಗಾರಪ್ಪ, ರಕ್ತ ಕಣ್ಣೀರು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

  English summary
  Kannada actor, challenging star darshan has wish to Politicain and actor Kumar Bangarappa's Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X