For Quick Alerts
  ALLOW NOTIFICATIONS  
  For Daily Alerts

  ಧ್ರುವ ಸರ್ಜಾ ಗೆ ಏನೆಂದರೆ ಭಯ? ಹರಿಪ್ರಿಯಾ ಹೇಳಿದ ಸ್ವಾರಸ್ಯಕರ ಘಟನೆ

  |

  ಧ್ರುವ ಸರ್ಜಾ ದೇಹಾಕಾರ ನೋಡಿದರೆ ಯಾರಿಗಾದರೂ ಭಯ ಹುಟ್ಟುತ್ತದೆ. ಅಂಥಹಾ ಕಟ್ಟುಮಸ್ತಾದ ದೇಹ ಅದಕ್ಕೆ ತಕ್ಕಂತೆ ಹೈಟು, ಮುಖದಲ್ಲಿನ ಖದರ್ ಸೂಕ್ತವಾಗಿದೆ.

  ಬಿಡುಗಡೆಗೆ ಸಿದ್ಧವಾಗಿದೆ ಸ್ಟಾರ್ ನಟರ ಸಿನಿಮಾಗಳು | Darshan | Puneeth RajKumar | FILMIBEAT KANNADA

  ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಬಲ್ಲ ಧ್ರುವ ಸರ್ಜಾಗೆ ಒಂದು ವಿಷಯಕ್ಕೆ ಮಾತ್ರ ಬಹಳ ಭಯವಂತೆ. ಧ್ರುವ ಸರ್ಜಾ ಅವರ ಈ ಭಯದ ವಿಷಯ ಹೇಳಿರುವುದು ನಟಿ ಹರಿಪ್ರಿಯಾ.

  ಹೌದು, ನಟಿ ಹರಿಪ್ರಿಯ 'ಬೇಬ್‌ನೋಸ್' ಎಂಬ ಬ್ಲಾಗ್ ಬರೆಯುತ್ತಿದ್ದು, ಬ್ಲಾಗ್‌ ನಲ್ಲಿ ಧ್ರುವ ಸರ್ಜಾ ಜೊತೆ ಗೆಳೆತನ ಹಾಗೂ ಅವರಿಗಿರುವ ಭಯದ ಬಗ್ಗೆ ಬರೆದಿದ್ದಾರೆ.

  ಹರಿಪ್ರಿಯಾ ಗೆ ಜಿರಳೆ ಎಂದರೆ ಭಯ

  ಹರಿಪ್ರಿಯಾ ಗೆ ಜಿರಳೆ ಎಂದರೆ ಭಯ

  ನಟಿ ಹರಿಪ್ರಿಯಾ ಗೆ ಜಿರಳೆ ಅಂದರೆ ತುಂಬಾ ಭಯವಂತೆ. ಆ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ. ಆದರೆ ಅವರ ಗೆಳೆಯ ಸಹ ನಟ ಧ್ರುವ ಸರ್ಜಾ ಗೆ ಯಾವ ವಿಷಯದ ಬಗ್ಗೆ ಹೇಳಿದ್ದಾರೆ.

  ಎತ್ತರದ ಪ್ರದೇಶಗಳೆಂದರೆ ಧ್ರುವಗೆ ಭಯ

  ಎತ್ತರದ ಪ್ರದೇಶಗಳೆಂದರೆ ಧ್ರುವಗೆ ಭಯ

  ನಟ ಧ್ರುವ ಸರ್ಜಾ ಗೆ ಎತ್ತರದ ಪ್ರದೇಶಗಳೆಂದರೆ ಬಹಳ ಭಯವಂತೆ. ಎತ್ತರದ ಪ್ರದೇಶಗಳಿಗೆ ಧ್ರುವ ಸರ್ಜಾ ಹೋಗುವುದೇ ಇಲ್ಲವಂತೆ. ಶೂಟಿಂಗ್‌ ಮಾಡುವಾಗಲೂ ಸಹ ಎತ್ತರದ ಸ್ಥಳಗಳಲ್ಲಿ ಶೂಟ್ ಮಾಡುವ ದೃಶ್ಯಗಳಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಾರಂತೆ ಧ್ರುವ ಸರ್ಜಾ.

  ಸ್ವಾರಸ್ಯಕರ ಘಟನೆ ಹೇಳಿದ ಹರಿಪ್ರಿಯಾ

  ಸ್ವಾರಸ್ಯಕರ ಘಟನೆ ಹೇಳಿದ ಹರಿಪ್ರಿಯಾ

  ಒಮ್ಮೆ ಸ್ಲೊವೇನಿಯಾದಲ್ಲಿ ಶೂಟಿಂಗ್ ಮಾಡಬೇಕಾದರೆ ಹರ್ಷ ಅವರು ಕೋಟೆಯ ಮೇಲೆ ನಿಲ್ಲಿನಿ ಶಾಟ್ ತೆಗೆಯಲು ಮುಂದಾದರಂತೆ. ಹರಿಪ್ರಿಯಾ ಏನೋ ಒಪ್ಪಿಕೊಂಡರು ಆದರೆ ಧ್ರುವ ಸರ್ಜಾ ಭಯಪಟ್ಟುಕೊಂಡರಂತೆ. ಇದನ್ನು ನೋಡಿ ಹರಿಪ್ರಿಯಾ ನಕ್ಕಿದ್ದೇ ನಕ್ಕಿದ್ದು.

  ನಂದಿ ಬೆಟ್ಟಕ್ಕೆ ಕರೆದ ಹರಿಪ್ರಿಯಾ

  ನಂದಿ ಬೆಟ್ಟಕ್ಕೆ ಕರೆದ ಹರಿಪ್ರಿಯಾ

  ಇತ್ತೀಚೆಗೆ ಧ್ರುವ ಸರ್ಜಾ ಕರೆ ಮಾಡಿದಾಗ ಈ ವಿಷಯವನ್ನು ಹೇಳಿ ರೇಗಿಸಿದರಂತೆ. ಅದಕ್ಕೆ ಧ್ರುವ ಸರ್ಜಾ, 'ನಾನೀಗ ಬಾಡಿ ಬಿಲ್ಡ್ ಮಾಡಿದ್ದೀನಿ, ಯಾವುದಕ್ಕೂ ಹೆದರಿಕೆ ಇಲ್ಲ ಎಂದರಂತೆ. ಹಾಗಾದರೆ ವೀಕೆಂಡ್‌ನಲ್ಲಿ ಪ್ರೇರಣಾಳನ್ನು ಕರೆದುಕೊಂಡು ಬಾ ನಂದಿ ಬೆಟ್ಟಕ್ಕೆ ಹೋಗೋಣ ಎಂದರಂತೆ. ಅದಕ್ಕೆ ಧ್ರುವ ಸರ್ಜಾ ಅಯ್ಯೊ ಆಗಲ್ಲಪ್ಪಾ ಎಂದರಂತೆ ಅದೇ ಭಯದಲ್ಲಿ.

  English summary
  Haripriya said actor Dhruva Sarja is very much afraid of heights. She writes a funny incident about Dhruva Sarja in her blog.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X