For Quick Alerts
  ALLOW NOTIFICATIONS  
  For Daily Alerts

  ನಿಮ್ಮ ಹೆಸರಿನ ಪಕ್ಕ ಯಾವ ನಟ, ನಟಿ, ರಾಜಕಾರಣಿ ಹೆಸರು ಸೇರಿಸಬೇಡಿ: ನಟ ಜಗ್ಗೇಶ್ ಮನವಿ

  |

  ಸ್ಯಾಂಡಲ್ ವುಡ್ ನ ಹಿರಿಯ ನಟ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಚಾರಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ದೇವರನ್ನು ಅಪಾರವಾಗಿ ನಂಬುವ ಜಗ್ಗೇಶ್ ಗುರು ರಾಯರ ಅಪ್ಪಟ ಭಕ್ತ. ಸದಾ ರಾಯರನ್ನು ನೆನೆಯುವ ಜಗ್ಗೇಶ್, ತಂದೆ-ತಾಯಿಯನ್ನು ಅಷ್ಟೆ ನೆನಪಿಸಿಕೊಳ್ಳುತ್ತಾ ಅವರನ್ನು ಪೂಜಿಸುತ್ತಾರೆ, ಆರಾಧಿಸುತ್ತಾರೆ.

  ತಂದೆ-ತಾಯಿಯ ಪ್ರೀತಿ, ಮಹತ್ವದ ಬಗ್ಗೆ ಯುವ ಜನತೆಗೆ ಯಾವಾಗಲು ಹೇಳುತ್ತಿರುತ್ತಾರೆ. ಅಂದಹಾಗೆ ಇಂದು ನಟ ಜಗ್ಗೇಶ್ ತಂದೆಯ ಹುಟ್ಟುಹಬ್ಬ. ಅಪ್ಪನ ಹುಟ್ಟುಹಬ್ಬದ ದಿನ ಜಗ್ಗೇಶ್ ತಂದೆ ಜೊತೆ ಕ್ಲಿಕ್ಕಿಸಿದ ಫೋಟೋವನ್ನು ಶೇರ್ ಮಾಡಿ, ತಂದೆಯ ಬಗ್ಗೆ ಭಾವುಕ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ನಿಮ್ಮ ಹೆಸರಿನ ಪಕ್ಕದಲ್ಲಿ ಯಾವುದೇ ನಟ, ನಟಿ, ರಾಜಕಾರಣಿ ಹೆಸರನ್ನು ಸೇರಿಸಿಕೊಳ್ಳಬೇಡಿ, ತಂದೆಯ ಹೆಸರಿರಲಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮುಂದೆ ಓದಿ..

  ಜಗ್ಗೇಶ್ ಮನೆಯಲ್ಲಿ ವಿಶೇಷ ಪೂಜೆ: ಭೂವರಹ, ಅಷ್ಟಲಕ್ಷ್ಮೀ, ನವಗ್ರಹ ಹೋಮ

  ಅಪ್ಪನ ಜೊತೆ ತೆಗೆಸಿಕೊಂಡ ಕೊನೆಯ ಫೋಟೋ

  ಅಪ್ಪನ ಜೊತೆ ತೆಗೆಸಿಕೊಂಡ ಕೊನೆಯ ಫೋಟೋ

  'ಅಪ್ಪನ ಜೊತೆ ತೆಗೆಸಿಕೊಂಡ ಕೊನೆ ಚಿತ್ರ. ಇದು ನನ್ನ 50ನೇ ಹುಟ್ಟುಹಬ್ಬದ ಸಂದರ್ಭ. ಮಗನ ಹುಟ್ಟುಹಬ್ಬ ಬಂದರೆ ಬೆಳಗಿನ ಜಾವ 5 ಗಂಟೆಗೆ ಮನೆ ಮುಂದೆ ಇರುತ್ತಿದ್ದರು ಅಪ್ಪ. ಪ್ರತಿಯೊಬ್ಬ ತಂದೆಗೆ ತನ್ನ ಬೆಳವಣಿಗೆಗಿಂತ ತನ್ನ ಮಕ್ಕಳು ಸಾಧಿಸಿಬಿಟ್ಟರೆ ತಂದೆಗೆ ಆಗುವ ಆನಂದ ಬ್ರಹ್ಮಾನಂದ. ಆ ವಿಷಯದಲ್ಲಿ ನಾನು ಅಪ್ಪನಿಗೆ ಹೆಮ್ಮೆ ಪಡುವಂತೆ ರಾಯರ ದಯೆಯಿಂದ ಬೆಳೆದು ಅಪ್ಪನ ಹಾಗು ವಂಶದ ಗೌರವ ಹೆಚ್ಚಿಸಿದೆ.

  ಅಪ್ಪ ಹೆಮ್ಮೆ ಪಡುವಂತೆ ಮಾಡಿ

  ಅಪ್ಪ ಹೆಮ್ಮೆ ಪಡುವಂತೆ ಮಾಡಿ

  'ಯಾಕೆ ಜನ್ಮಕೊಟ್ಟ ತಂದೆಗೆ ತನ್ನ ಬೆಳವಣಿಗೆಗಿಂತ ಮಕ್ಕಳ ಬೆಳವಣಿಗೆ ನೋಡಲು ಶಬರಿಯಂತೆ ಕಾಯೋದು ಎಂದರೆ ಮಗ ಗೆದ್ದರೆ ತಾನು ಗೆದ್ದಂತೆ ತನ್ನ ವಂಶಗೆದ್ದಂತ ಭಾವ. ಎಲ್ಲಾ ಯುವ ಸಮಾಜಕ್ಕು ನನ್ನ ಸಂದೇಶ ದಯಮಾಡಿ ಎಷ್ಟೆ ಶ್ರಮವಾದರು ಅಪಮಾನವಾದರು, ಅವಮಾನವಾದರು ಸಹಿಸಿ ನಿಮ್ಮ ಮಿತಿಯಲ್ಲಿ ನಿಮ್ಮ ಇಷ್ಟ ಕ್ಷೇತ್ರದಲ್ಲಿ ಅಪ್ಪ ಬದುಕಿರುವಾಗಲೆ ಜೀವನ ಗೆದ್ದು ಅಪ್ಪನಿಗೆ ಹೆಮ್ಮೆ ಪಡುವಂತೆ ಮಾಡಿ ಬಿಡಿ'

  ಡಾ ರಾಜ್ ಕುಮಾರ್ ಅವರ ನೆಚ್ಚಿನ ಟಿವಿ ಬಗ್ಗೆ ಜಗ್ಗೇಶ್ ಹೇಳಿದ ಕಥೆ

  ಹೆಸರಿನ ಪಕ್ಕ ನಟ ನಟಿ ರಾಜಕಾರಣಿ ಹೆಸರು ಸೇರಿಸಬೇಡಿ

  ಹೆಸರಿನ ಪಕ್ಕ ನಟ ನಟಿ ರಾಜಕಾರಣಿ ಹೆಸರು ಸೇರಿಸಬೇಡಿ

  'ಆಗ ನಿಮ್ಮ ಮಕ್ಕಳು ನಿಮ್ಮ ಹೆಸರು ಉಳಿಸುವ ಯೋಗ ರಾಯರು ನೀಡುತ್ತಾರೆ. ನಾವು ನಡೆದುಕೊಂಡಂತೆ ನಮ್ಮ ಮುಂದಿನ ಪೀಳಿಗೆ ಇರುತ್ತದೆ. ಜೊತೆಗೆ ನಿಮ್ಮ ಹೆಸರಿನ ಪಕ್ಕ ಅಪ್ಪನ ಹೆಸರು ಹೆಮ್ಮೆಯಿಂದ ಸೇರಿಸಿಕೊಳ್ಳಿ ಅದರ ಖುಷಿಯೇ ಬೇರೆ. ಅದಕ್ಕೆ ನನ್ನ ಹೆಸರು ಜಗ್ಗೇಶ್ ಶಿವಲಿಂಗಪ್ಪ. ಯಾವುದೇ ಕಾರಣಕ್ಕೂ ನಿಮ್ಮ ಹೆಸರಿನ ಪಕ್ಕ ಯಾವ ನಟ ನಟಿ ರಾಜಕಾರಣಿ ಹೆಸರು ಸೇರಿಸಬೇಡಿ. ಜನ್ಮ ಕೊಟ್ಟ ತಂದೆ ಒಳಗೆ ದುಃಖ ಪಡುತ್ತಾನೆ.'

  ಧ್ರುವ ಸರ್ಜಾಗೆ ನಿಜಕ್ಕೂ ಮೈಲೇಜ್ ಕೊಡುತ್ತಾ ಪೊಗರು | Fimibeat Kannada
  ಅಪ್ಪನಿಗೆ ನೋಯಿಸಿದ್ದರೆ ಕ್ಷಮೆಯಿರಲಿ

  ಅಪ್ಪನಿಗೆ ನೋಯಿಸಿದ್ದರೆ ಕ್ಷಮೆಯಿರಲಿ

  'ನೆನಪಿಡಿ ನಾವು ಏನೆ ಸಾಧಿಸಿದರು ಆ ಸಾಧನೆಗೆ ದೇಹ ಜೀವ ಉಸಿರು ಅಪ್ಪನ ಭಿಕ್ಷೆಯಿಂದಲೆ. ಇಂದು ಅಪ್ಪನ ನಾನು ನೆನೆಯಲು ಕಾರಣ ಅಪ್ಪ ಹುಟ್ಟಿದ. ದಿನ 21/1/1931 ಅಪ್ಪ ಹುಟ್ಟಿದ್ದು. ತಿಳಿದೋ ತಿಳಿಯದೆಯೋ ಯವ್ವನದ ಮದದಲ್ಲಿ ಅಪ್ಪನಿಗೆ ನೋಯಿಸಿದ್ದರೆ ಕ್ಷಮೆಯಿರಲಿ ಅಪ್ಪ ನಿನ್ನ ಮಗನ ಮೇಲೆ' ಎಂದು ತಂದೆಯ ಬಗ್ಗೆ ದೀರ್ಘವಾಗಿ ಬರೆದುಕೊಂಡಿದ್ದಾರೆ.

  English summary
  Actor Jaggesh shares emotional message his father's birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X