»   » ಜಗ್ಗೇಶ್ ಜ್ಯೇಷ್ಠ ಪುತ್ರನ ವಿವಾಹ ಸಂಭ್ರಮ ಚಿತ್ರಗಳು

ಜಗ್ಗೇಶ್ ಜ್ಯೇಷ್ಠ ಪುತ್ರನ ವಿವಾಹ ಸಂಭ್ರಮ ಚಿತ್ರಗಳು

Posted By:
Subscribe to Filmibeat Kannada

ನವರಸನಾಯಕ ಜಗ್ಗೇಶ್ ಅವರ ಕುವರ ಗುರುರಾಜ್ ಜಗ್ಗೇಶ್ ಹಾಲೆಂಡ್ ನಲ್ಲಿ ಹಾರಬದಲಾಯಿಸಿಕೊಂಡಿದ್ದಾರೆ. ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನ ಅಂದರೆ ಏಪ್ರಿಲ್ 24ರಂದು ಅವರು ನೂತನ ದಾಂಪತ್ಯಕ್ಕೆ ಅಡಿಯಿಟ್ಟಿದ್ದಾರೆ.

ಈ ಬಗ್ಗೆ ಜಗ್ಗೇಶ್ ಅವರು ಸಂಭ್ರಮವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅವರ 'ಅಗ್ರಜ' ಚಿತ್ರಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಮದುವೆ ಸಂಭ್ರಮವನ್ನು ಇಮ್ಮಡಿಸಿದೆ. ಹಾಲೆಂಡ್ ಮೂಲದ ವಧು ಕ್ಯಾಪಿಪೈಲಿ ಅವರ ಕೈಹಿಡಿದ್ದಾರೆ ಗುರುರಾಜ್ ಜಗ್ಗೇಶ್.

ಇಲ್ಲೇ ಮದುವೆ ಮಾಡಬೇಕೆಂದು ಜಗ್ಗೇಶ್ ಬಹಳ ಆಸೆ ಇಟ್ಟುಕೊಂಡಿದ್ದರು. ಆದರೆ ಕ್ಯಾಪಿಪೈಲಿ ಅವರ ಅಜ್ಜಿಗೆ ವಯಸ್ಸಾಗಿರುವ ಕಾರಣ ಅವರು ಇಲ್ಲಿಗೆ ಬರಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಹಾಲೆಂಡ್ ನಲ್ಲಿ ಮದುವೆ ನೆರವೇರಿತು. ಬನ್ನಿ ಚಿತ್ರಗಳಲ್ಲಿ ಮದುವೆ ಸಂಭ್ರಮ ನೋಡೋಣ..

ನೂತನ ದಂಪತಿಗಳನ್ನು ಹರಸಿ ಎಂದ ಜಗ್ಗೇಶ್

ಅತ್ತೆ ಮಾವನ ಜೊತೆ ಗುರುರಾಜ್ ಸೊಸೆಯನ್ನು ನೋಡಿ. ನೂತನ ದಂಪತಿಗಳಿಗೆ ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದಿದ್ದಾರೆ ಜಗ್ಗೇಶ್.

ಹಾಲೆಂಡ್ ದೇಶದ ಬಗ್ಗೆ ಬೆರಗಾದ ಜಗ್ಗೇಶ್

ಹಾಲೆಂಡ್ ಪ್ರಕೃತಿ ಸೌಂದರ್ಯದ ಬಗ್ಗೆ ಆ ದೇಶದ ಬಗ್ಗೆ ಬೆರಗಾಗಿರುವ ಜಗ್ಗೇಶ್ ಅವರು ಆಹಾ ಎಂಥಹಾ ದೇಶ ಎಂದಿದ್ದಾರೆ. ಕುಟುಂಬದ ಜೊತೆ ಅಲ್ಲಿ ಕಳೆದ ದಿನಗಳನ್ನು ಮರೆಯಲಾಗುತ್ತಿಲ್ಲ ಎಂದೂ ಜಗ್ಗೇಶ್ ಹೇಳಿದ್ದಾರೆ.

ಹಾಲೆಂಡ್ ನಲ್ಲಿದ್ದರೂ ಮನಸ್ಸು ಗಾಂಧಿನಗರ

ಸದ್ಯಕ್ಕೆ ಅವರು ಹಾಲೆಂಡ್ ನಲ್ಲಿದ್ದರೂ ಮನಸ್ಸೆಲ್ಲಾ ಗಾಂಧಿನಗರದಲ್ಲೇ ಇದೆ. ಏಕೆಂದರೆ ಕಪಾಲಿ ಚಿತ್ರಮಂದಿರದಲ್ಲಿ ಅಗ್ರಜ ಚಿತ್ರಕ್ಕೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆ. ತಮ್ಮ ಚಿತ್ರವನ್ನು ಕೈಹಿಡಿದ ಪ್ರೇಕ್ಷಕರಿಗೆ ಹಾಲೆಂಡ್ ನಿಂದಲೇ ಧನ್ಯವಾದಗಳನ್ನು ಜಗ್ಗೇಶ್ ರವಾನಿಸಿದ್ದಾರೆ.

ಮಂತ್ರಾಲಯದಲ್ಲಿ ಶಾಸ್ತ್ರೋಕ್ತವಾಗಿ ಮದುವೆ

ಹಾಲೆಂಡ್ ನಿಂದ ವಾಪಸು ಬಂದ ಮೇಲೆ ಮಂತ್ರಾಲಯದಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಇಟ್ಟುಕೊಂಡಿದ್ದಾರೆ. ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದ್ದು ಕನ್ನಡ ಚಿತ್ರರಂಗದ ಎಲ್ಲರನ್ನೂ ಆಹ್ವಾನಿಸಲಾಗುತ್ತಿದೆ.

ಹೊಸಬಾಳಿನ ಹೊಸಲಲಿ ನಿಂತಿರುವ ಹೊಸ ಜೋಡಿ

ಗಿಲ್ಲಿ ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಅಡಿಯಿಟ್ಟ ಗುರುರಾಜ್ ಬಳಿಕ ಸಂಕ್ರಾಂತಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹೊಸ ಬಾಳಿನ ಹೊಸಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ ಎಂದು ಶುಭ ಹಾರೈಸೋಣ.

English summary
Gururaj Jaggesh, elder son of Sandalwood's ace actor turned politician Jaggesh, has tied knot with his girlfriend Katie Pyle in Netherlands, today, April 24, 2014. Gururaj was dating Katie Pyle, a researcher, who is based out of Netherlands.
Please Wait while comments are loading...